ನವದೆಹಲಿ, 07 ಆಗಸ್ಟ್ (ಹಿ.ಸ.) :
ಆ್ಯಂಕರ್ : ಡೆಲ್ಲಿ ಪ್ರೀಮಿಯರ್ ಕ್ರಿಕೆಟ್ ಲೀಗ್‌ನ ಸೀಸನ್ 2ರಲ್ಲಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ತಂಡವು ಔಟರ್ ಡೆಲ್ಲಿ ವಾರಿಯರ್ಸ್ ವಿರುದ್ಧ 19 ರನ್‌ಗಳ ಜಯವನ್ನು ದಾಖಲಿಸಿತು.
ಮೊದಲು ಬ್ಯಾಟ್ ಮಾಡಿದ ಸ್ಟ್ರೈಕರ್ಸ್ 20 ಓವರ್‌ಗಳಲ್ಲಿ 163 ರನ್ ಗಳಿಸಿತು. ಸಾರ್ಥಕ್ ರಂಜನ್ 77 (50) ಮತ್ತು ವೈಭವ್ ಕಂಡ್ಪಾಲ್ 38 (33) ರನ್‌ಗಳೊಂದಿಗೆ ಉತ್ತಮ ಜೊತೆಯಾಟವಾಡಿದರು.
ಹರ್ಷ್ ತ್ಯಾಗಿ 2/19 ಜೊತೆ ವಾರಿಯರ್ಸ್ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದರು.
ಗುರಿ ಬೆನ್ನಟ್ಟಿದ ವಾರಿಯರ್ಸ್ ತಂಡ 20 ಓವರ್‌ಗಳಲ್ಲಿ 144/9 ರನ್ ಮಾತ್ರ ಗಳಿಸಿತು. ಕೇಶವ್ ದಬಾಸ್ (40) ಮತ್ತು ಸನತ್ ಸಾಂಗ್ವಾನ್ (32) ಹೊರತುಪಡಿಸಿ ಇತರರು ಬ್ಯಾಟಿಂಗನಲ್ಲಿ ವಿಫಲರಾದರು.
ಸ್ಟ್ರೈಕರ್ಸ್ ಬೌಲರ್ ವಿಕಾಸ್ ದೀಕ್ಷಿತ್ 3/19 ಮತ್ತು ಕುಲದೀಪ್ ಯಾದವ್ 3 ವಿಕೆಟ್ ಕಬಳಿಸಿ ಜಯಕ್ಕೆ ಕಾರಣರಾದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa