ಲಂಡನ್, 04 ಆಗಸ್ಟ್ (ಹಿ.ಸ.) :
ಆ್ಯಂಕರ್ : ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ 6 ರನ್‌ಗಳ ಗೆಲುವು ಸಾಧಿಸುವ ಮೂಲಕ ಸರಣಿಯನ್ನು 2–2ರ ಡ್ರಾದಲ್ಲಿ ಕೊನೆಗೊಳಿಸಿದೆ. ಲಂಡನ್‌ನ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯ ಐದನೇ ದಿನದ ಪಂದ್ಯ ತೀವ್ರ ಕುತೂಹಲ ಮೂಡಿಸಿತ್ತು.
ಇಂಗ್ಲೆಂಡ್ ಗೆಲುವಿಗೆ ಕೇವಲ 35 ರನ್ ಬೇಕಾಗಿದ್ದರೆ, ಭಾರತ ತಂಡಕ್ಕೆ ನಾಲ್ಕು ವಿಕೆಟ್ ಅಗತ್ಯವಿತ್ತು. ವೇಗಿ ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್ ಮೂಲಕ ಜೇಮಿ ಸ್ಮಿತ್ ಹಾಗೂ ಕ್ರೇಗ್ ಓವರ್ಟನ್ ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದರು . ಪ್ರಸಿದ್ಧ್ ಕೃಷ್ಣ ಕೂಡ ಉತ್ತಮ ಬಾಲಿಂಗ್ ನಡೆಸಿ ನ ಮೂರು ವಿಕೆಟ್ ಉರುಳಿಸಿದರು. ಕೊನೆಗೆ, ಸಿರಾಜ್ ಗಸ್ ಅಟ್ಕಿನ್ಸನ್ ಅವರನ್ನು ಕ್ಲೀನ್ ಬೌಲ್ಡ್ ಮಾಡುತ್ತಿದ್ದಂತೆ ಇಂಗ್ಲೆಂಡ್ 367 ರನ್‌ಗಳಿಗೆ ಆಲೌಟ್ ಆಯಿತು.
ಇದರಿಂದ ಭಾರತ ಕೇವಲ 6 ರನ್‌ಗಳಿಂದ ಸ್ಮರಣೀಯ ಜಯ ಗಳಿಸಿತು. ಇಡೀ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ 23 ವಿಕೆಟ್‌ಗಳೊಂದಿಗೆ ಪ್ರಮುಖ ಪಾತ್ರವಹಿಸಿದರು. ಪ್ರಸಿದ್ಧ್ ಕೃಷ್ಣ 14 ವಿಕೆಟ್ ಪಡೆದರು.
ಇದಕ್ಕೂ ಮುನ್ನ, ಇಂಗ್ಲೆಂಡ್ ಪರ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಅವರ ಜತೆಯಾಟ ತಂಡಕ್ಕೆ ಬಲ ನೀಡಿದ್ದರೂ ಭಾರತದ ವೇಗಿಗಳ ನಿಯಂತ್ರಿತ ದಾಳಿ ಎದುರಿಸಲಾಗಲಿಲ್ಲ. ಈ ಪಂದ್ಯದಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ಪ್ರಾಬಲ್ಯ ಮೆರೆದಿದೆ.
ಅಂತಿಮವಾಗಿ, ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯು ಹಾಲಿ ಚಾಂಪಿಯನ್ ಆಗಿರುವ ಭಾರತದ ಮಹಡಿಯಲ್ಲಿ ಉಳಿದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa