ಮನ್ ಕಿ ಬಾತ್ ; ಜಮ್ಮು-ಕಾಶ್ಮೀರ ಕ್ರೀಡಾ ಸಾಧನೆಗೆ ಪ್ರಧಾನಿ ಶ್ಲಾಘನೆ
ನವದೆಹಲಿ, 31 ಆಗಸ್ಟ್ (ಹಿ.ಸ.) : ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ 125ನೇ ಸಂಚಿಕೆಯಲ್ಲಿ ಜಮ್ಮು–ಕಾಶ್ಮೀರದ ಕ್ರೀಡಾ ಸಾಧನೆಗಳನ್ನು ಶ್ಲಾಘಿಸಿದರು. ಪ್ರವಾಹ ಮತ್ತು ಮಳೆಯ ಸವಾಲಿನ ನಡುವೆಯೂ ಈ ಪ್ರದೇಶವು ಹೊಸ ಕ್ರೀಡಾ ಇತಿಹಾಸ ಬರೆದಿದೆ ಎಂದು
Man ki bath


ನವದೆಹಲಿ, 31 ಆಗಸ್ಟ್ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ 125ನೇ ಸಂಚಿಕೆಯಲ್ಲಿ ಜಮ್ಮು–ಕಾಶ್ಮೀರದ ಕ್ರೀಡಾ ಸಾಧನೆಗಳನ್ನು ಶ್ಲಾಘಿಸಿದರು. ಪ್ರವಾಹ ಮತ್ತು ಮಳೆಯ ಸವಾಲಿನ ನಡುವೆಯೂ ಈ ಪ್ರದೇಶವು ಹೊಸ ಕ್ರೀಡಾ ಇತಿಹಾಸ ಬರೆದಿದೆ ಎಂದು ಹೇಳಿದರು.

ಪುಲ್ವಾಮಾದಲ್ಲಿ ನಡೆದ ಮೊದಲ ಹಗಲು–ರಾತ್ರಿ ಕ್ರಿಕೆಟ್ ಪಂದ್ಯ ಮತ್ತು ಶ್ರೀನಗರದ ದಾಲ್ ಸರೋವರದಲ್ಲಿ ಆಯೋಜಿಸಲಾದ ಖೇಲೋ ಇಂಡಿಯಾ ಜಲ ಕ್ರೀಡಾ ಉತ್ಸವವನ್ನು ಮೋದಿ ವಿಶೇಷವಾಗಿ ಉಲ್ಲೇಖಿಸಿದರು. ಸಾವಿರಾರು ಯುವಕರು ಬೆಳಕಿನ ಅಡಿಯಲ್ಲಿ ಕ್ರಿಕೆಟ್ ಆನಂದಿಸಿದ ದೃಶ್ಯ ಅಸಾಧಾರಣವಾಗಿತ್ತು ಎಂದು ಶ್ಲಾಘಿಸಿದರು.

ದೇಶದಾದ್ಯಂತದ 800 ಕ್ಕೂ ಹೆಚ್ಚು ಕ್ರೀಡಾಪಟುಗಳು ದಾಲ್ ಸರೋವರದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಪುರುಷರು ಹಾಗೂ ಮಹಿಳೆಯರ ಸಮಾನ ಭಾಗವಹಿಸುವಿಕೆ ಗಮನಾರ್ಹವಾಗಿತ್ತು. ಮಧ್ಯಪ್ರದೇಶ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಹರಿಯಾಣ ಮತ್ತು ಒಡಿಶಾ ನಂತರ ಸ್ಥಾನ ಪಡೆದಿವೆ.

ಕೆಲವು ವರ್ಷಗಳ ಹಿಂದೆ ಅಸಾಧ್ಯವೆನಿಸಿದ ಬೆಳವಣಿಗೆಗಳು ಇಂದು ಜಮ್ಮು–ಕಾಶ್ಮೀರವನ್ನು ರಾಷ್ಟ್ರೀಯ ಕ್ರೀಡಾ ನಕ್ಷೆಯಲ್ಲೂ ಹೊಳೆಯುವಂತೆ ಮಾಡಿವೆ. ದೇಶವೇ ಅಭಿವೃದ್ಧಿಯ ಹೊಸ ಎತ್ತರ ಮುಟ್ಟುತ್ತಿದೆ ಎಂದು ಪ್ರಧಾನಿ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande