ತಾಯಿಗೆ ಅವಮಾನ ; ಕಾಂಗ್ರೆಸ್-ಆರ್‌ಜೆಡಿ ವಿರುದ್ಧ ಪ್ರಧಾನಿ ಮೋದಿ ಆಕ್ರೋಶ
ನವದೆಹಲಿ, 02 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ನಾನು ರಾಜಕೀಯ ಪ್ರತಿಸ್ಪರ್ಧಿಗಳನ್ನು ಕ್ಷಮಿಸಬಲ್ಲೆ. ಆದರೆ ನನ್ನ ತಾಯಿಗೆ ಮಾಡಿದ ಅವಮಾನವನ್ನು ಬಿಹಾರದ ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಂಗಳವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಬಿಹಾರ
Pm


ನವದೆಹಲಿ, 02 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ನಾನು ರಾಜಕೀಯ ಪ್ರತಿಸ್ಪರ್ಧಿಗಳನ್ನು ಕ್ಷಮಿಸಬಲ್ಲೆ. ಆದರೆ ನನ್ನ ತಾಯಿಗೆ ಮಾಡಿದ ಅವಮಾನವನ್ನು ಬಿಹಾರದ ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಬಿಹಾರ ರಾಜ್ಯ ಜೀವಿಕಾ ನಿಧಿ ಕ್ರೆಡಿಟ್ ಕೋಆಪರೇಟಿವ್ ಯೂನಿಯನ್ ಲಿಮಿಟೆಡ್ ಉದ್ಘಾಟನೆ ಮಾಡಿದ ಅವರು, ಈ ಸಂದರ್ಭದಲ್ಲಿ ಸಂಸ್ಥೆಯ ಬ್ಯಾಂಕ್ ಖಾತೆಗೆ ₹105 ಕೋಟಿ ರೂ. ವರ್ಗಾಯಿಸಿದರು. ಲಕ್ಷಾಂತರ ಮಹಿಳೆಯರ ಸಮ್ಮುಖದಲ್ಲಿ ಮಾತನಾಡಿದ ಪ್ರಧಾನಿಯವರು ಹಲವು ಬಾರಿ ಭಾವುಕರಾದರು.

ಮೋದಿಯವರು, ನನ್ನ ದಿವಂಗತ ತಾಯಿ ಹೀರಾಬೆನ್ ವಿರುದ್ಧ ಕಾಂಗ್ರೆಸ್-ಆರ್‌ಜೆಡಿ ನಾಯಕರು ಬಳಸಿದ ನಿಂದನೀಯ ಪದಗಳು ಕೇವಲ ನನ್ನ ತಾಯಿಗೆ ಮಾತ್ರವಲ್ಲ, ದೇಶದ ಕೋಟ್ಯಂತರ ತಾಯಂದಿರು ಮತ್ತು ಸಹೋದರಿಯರಿಗೂ ಮಾಡಿದ ಅವಮಾನ ಎಂದು ಕಿಡಿಕಾರಿದರು.

ಆರ್‌ಜೆಡಿ ಆಡಳಿತದಲ್ಲಿ ಮಹಿಳೆಯರ ಮೇಲೆ ಅಪರಾಧಗಳು ಹೆಚ್ಚಿದ್ದವು, ಕಾಂಗ್ರೆಸ್ ಯಾವಾಗಲೂ ಮಹಿಳಾ ಮೀಸಲಾತಿಯನ್ನು ವಿರೋಧಿಸಿದೆ ಎಂದು ಆರೋಪಿಸಿದ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು ಮೇಲಿನ ಕಾಂಗ್ರೆಸ್‌ನ ವರ್ತನೆಗೂ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತಾಯಿಯ ಅವಮಾನವನ್ನು ನಾವು ಸಹಿಸುವುದಿಲ್ಲ, ಮಹಿಳಾ ಶಕ್ತಿಯ ಅವಮಾನವನ್ನು ನಾವು ಸಹಿಸುವುದಿಲ್ಲ ಎಂದು ಘೋಷಿಸಿದ ಪ್ರಧಾನಿ, ಲಖ್ಪತಿ ದೀದಿ, ಡ್ರೋನ್ ದೀದಿ, ಆಯುಷ್ಮಾನ್ ಭಾರತ್, ಹರ್ ಘರ್ ನಲ್, ಉಚಿತ ಪಡಿತರ ಸೇರಿದಂತೆ ಕೇಂದ್ರದ ಮಹಿಳಾ ಸಬಲೀಕರಣ ಯೋಜನೆಗಳನ್ನು ಸ್ಮರಿಸಿದರು.

ಮುಂಬರುವ ನವರಾತ್ರಿ ಹಾಗೂ ಬಿಹಾರದ ಪೂಜಾ ಸಂಪ್ರದಾಯಗಳನ್ನು ಉಲ್ಲೇಖಿಸಿದ ಅವರು, ಮಾತೃಶಕ್ತಿಯನ್ನು ಪೂಜಿಸುವ ಬಿಹಾರದ ಭೂಮಿಯಲ್ಲಿ ಇಂತಹ ಅವಹೇಳನ ನಡೆಯುವುದು ವಿಷಾದನೀಯ. ಕಾಂಗ್ರೆಸ್-ಆರ್‌ಜೆಡಿ ತಾಯಂದಿರು ಮತ್ತು ಸಹೋದರಿಯರ ಮುಂದೆ ಕ್ಷಮೆಯಾಚಿಸಲೇಬೇಕು ಎಂದು ಆಗ್ರಹಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande