ಭೂತಾನ ಪ್ರಧಾನಿ ತ್ಸೆರಿಂಗ್ ಟೋಬ್ಗೆ ಭಾರತ ಪ್ರವಾಸ
ನವದೆಹಲಿ, 03 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಭೂತಾನ ಪ್ರಧಾನಿ ತ್ಸೆರಿಂಗ್ ಟೋಬ್ಗೆ ಬುಧವಾರದಿಂದ ಮೂರು ದಿನಗಳ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಲಿದ್ದಾರೆ. ಈ ಅವಧಿಯಲ್ಲಿ, ಅವರು ತಮ್ಮ ಪತ್ನಿ ಓಂ ತಾಶಿ ಡೋಮಾ ಅವರೊಂದಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಸ್ಥಳಗಳಾದ ಅಯೋಧ್ಯೆ ಮತ್ತು ಗಯಾಗ
ಭೂತಾನ ಪ್ರಧಾನಿ ತ್ಸೆರಿಂಗ್ ಟೋಬ್ಗೆ ಭಾರತ ಪ್ರವಾಸ


ನವದೆಹಲಿ, 03 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಭೂತಾನ ಪ್ರಧಾನಿ ತ್ಸೆರಿಂಗ್ ಟೋಬ್ಗೆ ಬುಧವಾರದಿಂದ ಮೂರು ದಿನಗಳ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಲಿದ್ದಾರೆ.

ಈ ಅವಧಿಯಲ್ಲಿ, ಅವರು ತಮ್ಮ ಪತ್ನಿ ಓಂ ತಾಶಿ ಡೋಮಾ ಅವರೊಂದಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಸ್ಥಳಗಳಾದ ಅಯೋಧ್ಯೆ ಮತ್ತು ಗಯಾಗೆ ಭೇಟಿ ನೀಡಲಿದ್ದಾರೆ.

ಭೇಟಿಯ ಸಂದರ್ಭದಲ್ಲಿ, ಟೋಬ್ಗೆ ಅವರು ದೆಹಲಿಯಲ್ಲಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಇದರ ಜೊತೆಗೆ, ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಉದ್ದೇಶದಿಂದ ಭಾರತ-ಭೂತಾನ್ ನಡುವಿನ ಸಹಕಾರ ಕುರಿತಂತೆ ಚರ್ಚೆ ನಡೆಯಲಿದೆ.

ಇದಕ್ಕೂ ಮೊದಲು, ಟೋಬ್ಗೆ ಅವರು ಫೆಬ್ರವರಿ 20-21 ರಂದು ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಅವರು ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್‌ಶಿಪ್ ಆಯೋಜಿಸಿದ್ದ ಮೊದಲ ನಾಯಕತ್ವ ಸಮ್ಮೇಳನದಲ್ಲಿ ಪಾಲ್ಗೊಂಡು, ಪ್ರಧಾನಿ ನರೇಂದ್ರ ಮೋದಿಯನ್ನು ಹಿರಿಯ ಸಹೋದರ ಹಾಗೂ ಗುರು ಎಂದು ಕರೆದಿದ್ದರು.

ಭೂತಾನಲ್ಲಿ ಸಾರ್ವಜನಿಕ ಸೇವೆಯನ್ನು ಪರಿವರ್ತಿಸಲು ಮೋದಿಯವರ ಮಾರ್ಗದರ್ಶನ ಅಗತ್ಯವೆಂದು ಅವರು ಉಲ್ಲೇಖಿಸಿದ್ದರು. ವಿಶೇಷವಾಗಿ, ಆ ಸಂದರ್ಭದಲ್ಲಿ ಅವರು ಹಿಂದಿ ಭಾಷೆಯನ್ನೂ ಬಳಸಿ ಮಾತನಾಡಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಟೋಬ್ಗೆಯ ಈ ಭೇಟಿಯಿಂದ ಭಾರತ-ಭೂತಾನ್ ಸ್ನೇಹ ಸಂಬಂಧಗಳು ಮತ್ತಷ್ಟು ಗಾಢಗೊಳ್ಳುವ ನಿರೀಕ್ಷೆಯಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande