ವಿಜಯಪುರ, 31 ಆಗಸ್ಟ್ (ಹಿ.ಸ.) :
ಆ್ಯಂಕರ್ : 21 ದಿನಗಳ ಓದುವ ಅಭಿಯಾನದ ಚಟುವಟಿಕೆಗಳ ಮಾರ್ಗದರ್ಶಿಯಲ್ಲಿರುವ ಒಂದು ಕೋಮಿನ ಹಬ್ಬದ ತಿಳುವಳಿಕೆ ವಿಷಯವನ್ನು ಕೂಡಲೇ ತೆಗೆದು ಹಾಕಬೇಕೆಂದು ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಒತ್ತಾಯಿಸಿದ್ದಾರೆ.
21 ದಿನಗಳ ಓದುವ ಅಭಿಯಾನದ ಚಟುವಟಿಕೆಗಳ ಮಾರ್ಗದರ್ಶಿಯಲ್ಲಿ ಒಂದು ಕೋಮಿನ ಹಬ್ಬವನ್ನು ತಿಳಿದುಕೊಳ್ಳಲು ನಿರ್ದೇಶಿಸಲಾಗಿದೆ. ಓದುವ ಅಭಿಯಾನವನ್ನು ಸರ್ಕಾರ ಪರಿಚಯಿಸಿದ್ದರೆ ಅದರಲ್ಲಿ ಪ್ರಚಲಿತ ವಿದ್ಯಮಾನ, ಕನ್ನಡ ಸಾಹಿತ್ಯ, ವಿಜ್ಞಾನ, ನಮ್ಮ ಸಂಸ್ಕೃತಿ, ಇತಿಹಾಸವನ್ನು ಓದಲು ಉತ್ತೇಜಿಸಬೇಕೇ ಹೊರತು ಯಾವುದೋ ಒಂದು ಕೋಮಿನ ಓಲೈಕೆಗೆ ಅವರ ಹಬ್ಬದ ಬಗ್ಗೆ ತಿಳುವಳಿಕೆ ನೀಡುವುದರಿಂದ ಮಕ್ಕಳ ಜ್ಞಾನವಾಗಲಿ, ಬೌದ್ಧಿಕ ಮಟ್ಟವಾಗಲಿ ಸುಧಾರಿಸುವುದಿಲ್ಲ.
ಸರ್ಕಾರ ಈ ರೀತಿಯಾದ ಓಲೈಕೆ ರಾಜಕಾರಣವನ್ನು ಬಿಟ್ಟು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವಂತ ಪಠ್ಯಕ್ರಮವನ್ನು, ವಿಷಯಗಳನ್ನು ಪರಿಚಯಿಸಲಿ. ಹಾಗೆಯೇ, ಚಟುವಟಿಕೆ ಮಾರ್ಗದರ್ಶಿಯಲ್ಲಿ ಕೂಡಲೇ ಒಂದು ಕೋಮಿನ ಹಬ್ಬದ ತಿಳುವಳಿಕೆ ವಿಷಯವನ್ನು ತೆಗೆದು ಹಾಕಲಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಟ್ವಿಟ್ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande