ವಿಜಯಪುರ, 01 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ : ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ನಡೆದಿದೆ.
ಬಾದಾಮಿ ತಾಲೂಕಿನ ಲಾಯದಗುಂದಿ ಗ್ರಾಮದ ಆರೋಪಿ ಸೋಮಪ್ಪ ಮಾದರ ಬಂಧಿತ. ಬಂಧಿತ ಆರೋಪಿಯಿಂದ 35ಗ್ರಾಂ ಬಗಾರದ ಆಭರಣ ಮತ್ತು 5 ಸಾವಿರ ನಗದು ಹೀಗೆ ಒಟ್ಟು 1ಲಕ್ಷ 48ಸಾವಿರದ 5ನೂರು ರೂಪಾಯಿ ಬೆಲೆಯ ಬಂಗಾರದ ಆವರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ವಿರುದ್ಧ 105/2025 ಕಲಂ 333(1), 331(4), 305, BNS 2023 ಪ್ರಕಾರ ಪ್ರಕರಣವನ್ನು ದಾಖಲಾಗಿದೆ. ಈ ಕುರಿತು ಗುಳೇದಗುಡ್ಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande