ಪ.ಜಾತಿ ಅಭ್ಯರ್ಥಿಗಳಿಗೆ ನಾನಾ ತರಬೇತಿಗಳಿಗೆ ಅರ್ಜಿ ಆಹ್ವಾನ
ಧಾರವಾಡ, 31 ಆಗಸ್ಟ್ (ಹಿ.ಸ.) : ಆ್ಯಂಕರ್ : 2025-26ನೇ ಸಾಲಿನ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಪೋಲೀಸ್ ಕಾನ್ಸ್ಟೇಬಲ್ ಪೂರ್ವ-ನೇಮಕಾತಿ, ಪೋಲೀಸ್ ಸಬ್‍ಇನ್ಸ್ಪೆಕ್ಟರ್ ಪರೀಕ್ಷಾ ಪೂರ್ವ ಮತ್ತು ಡ್ರೋನ್ ಉಪಕರಣ ಉಪಯೋಗಿಸುವ ಕುರಿತು ವಸತಿಯುತ ತರಬೇತಿಗ
ಪ.ಜಾತಿ ಅಭ್ಯರ್ಥಿಗಳಿಗೆ ನಾನಾ ತರಬೇತಿಗಳಿಗೆ ಅರ್ಜಿ ಆಹ್ವಾನ


ಧಾರವಾಡ, 31 ಆಗಸ್ಟ್ (ಹಿ.ಸ.) :

ಆ್ಯಂಕರ್ : 2025-26ನೇ ಸಾಲಿನ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಪೋಲೀಸ್ ಕಾನ್ಸ್ಟೇಬಲ್ ಪೂರ್ವ-ನೇಮಕಾತಿ, ಪೋಲೀಸ್ ಸಬ್‍ಇನ್ಸ್ಪೆಕ್ಟರ್ ಪರೀಕ್ಷಾ ಪೂರ್ವ ಮತ್ತು ಡ್ರೋನ್ ಉಪಕರಣ ಉಪಯೋಗಿಸುವ ಕುರಿತು ವಸತಿಯುತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

60 ದಿನಗಳ ಪೋಲೀಸ್ ಕಾನ್ಸ್ಟೇಬಲ್ ಪೂರ್ವ-ನೇಮಕಾತಿ ತರಬೇತಿಗೆ ಮತ್ತು 90 ದಿನಗಳ ಪೋಲೀಸ್ ಸಬ್‍ಇನ್ಸ್ಪೆಕ್ಟರ್ ಪರೀಕ್ಷಾ ಪೂರ್ವ ತರಬೇತಿಗೆ ಸೆಪ್ಟೆಂಬರ 12, 2025 ಹಾಗೂ 15 ದಿನಗಳ ಡ್ರೋನ್ ಉಪಕರಣ ಉಪಯೋಗಿಸುವ ಕುರಿತ ತರಬೇತಿಗೆ ಸೆಪ್ಟೆಂಬರ 20, 2025 ರೊಳಗಾಗಿ ವೈಬ್ ಸೈಟ್ https://igccd.karnataka.gov.in ಮೂಲಕ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2447201 ಗೆ ಸಂಪರ್ಕಿಸಬಹುದು ಎಂದು ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande