ನವದೆಹಲಿ, 31 ಆಗಸ್ಟ್ (ಹಿ.ಸ.) :
ಆ್ಯಂಕರ್ : ದೆಹಲಿಯಿಂದ ಇಂದೋರ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿ ತುರ್ತು ಭೂಸ್ಪರ್ಶ ಮಾಡಿದೆ.
ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಬಲ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಂತೆ ಎಚ್ಚರಿಕೆ ಸಿಗುತ್ತಿದ್ದಂತೆ, ಪೈಲಟ್ ಎಂಜಿನ್‌ನ್ನು ತಕ್ಷಣವೇ ಸ್ವಿಚ್ ಆಫ್ ಮಾಡಿ, ದೆಹಲಿ ವಿಮಾನ ನಿಲ್ದಾಣದಲ್ಲೇ ಸುರಕ್ಷಿತವಾಗಿ ಇಳಿಸಿದರು.
ಘಟನೆಯ ಸಮಯದಲ್ಲಿ ನೆಲದ ಸಿಬ್ಬಂದಿ, ಅಗ್ನಿಶಾಮಕ ದಳ ಹಾಗೂ ಭದ್ರತಾ ಪಡೆಗಳನ್ನು ಎಚ್ಚರ ಸ್ಥಿತಿಯಲ್ಲಿ ಇರಿಸಲಾಗಿತ್ತು. ಲ್ಯಾಂಡಿಂಗ್ ಬಳಿಕ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.
ಏರ್ ಇಂಡಿಯಾ ಹೇಳಿಕೆಯ ಪ್ರಕಾರ, ಅಲಾರಾಂ ಸದ್ದು ಮಾಡಿದ ತಕ್ಷಣವೇ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಅನುಸರಿಸಲಾಯಿತು. ರನ್‌ವೇಯಲ್ಲಿ ಸಂಪೂರ್ಣ ಸುರಕ್ಷತಾ ಪ್ರೋಟೋಕಾಲ್ ಪಾಲಿಸಲಾಗಿತ್ತು. ಪ್ರಯಾಣಿಕರನ್ನು ಇಂದೋರ್‌ಗೆ ಕರೆದೊಯ್ಯಲು ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದೆ.
ಘಟನೆಯ ಕುರಿತು ನಿಯಂತ್ರಣ ಪ್ರಾಧಿಕಾರಕ್ಕೆ ಮಾಹಿತಿ ನೀಡಲಾಗಿದ್ದು, ಎಂಜಿನಿಯರ್‌ಗಳ ತಂಡ ತಾಂತ್ರಿಕ ತನಿಖೆ ನಡೆಸುತ್ತಿದೆ. “ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆ. ಯಾವುದೇ ರಾಜಿ ಇಲ್ಲ,” ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa