ಕಠ್ಮಂಡು, 03 ಆಗಸ್ಟ್ (ಹಿ.ಸ.) :
ಆ್ಯಂಕರ್ : ನೇಪಾಳದ ಆಡಳಿತ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯಗಳು ತೀವ್ರವಾಗುತ್ತಿವೆ. ಭೂ ಮಸೂದೆ, ಶಿಕ್ಷಣ ಮಸೂದೆ, ನಾಗರಿಕ ಸೇವಾ ಮಸೂದೆ, ಭ್ರಷ್ಟಾಚಾರ ವಿರೋಧಿ ಮಸೂದೆ ಮತ್ತು ಸಾಂವಿಧಾನಿಕ ಮಂಡಳಿ ಮಸೂದೆಗಳು ತಿಂಗಳುಗಳಿಂದ ಸಂಸತ್ತಿನಲ್ಲಿ ಬಾಕಿಯೇ ಉಳಿದಿವೆ.
ಭೂ ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ನೇಪಾಳಿ ಕಾಂಗ್ರೆಸ್, ಅದರ ಕೆಲವು ತಿದ್ದುಪಡಿಗಳು ಅನ್ವಯವಾಗದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಜನತಾ ಸಮಾಜವಾದಿ ಪಕ್ಷ ಈಗಾಗಲೇ ಬೆಂಬಲ ಹಿಂತೆಗೆದುಕೊಂಡಿದೆ. ಯುಎಂಎಲ್ ಪಕ್ಷ ಈ ನಿಲುವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಶಿಕ್ಷಣ ಮಸೂದೆಗೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ಯುಎಂಎಲ್ ಮಾತ್ರ ಬೆಂಬಲ ವ್ಯಕ್ತಪಡಿಸಿದೆ. ಇತರ ಮಸೂದೆಗಳಲ್ಲಿಯೂ ಪಕ್ಷಗಳ ನಡುವೆ ಮತ ಭೇದಗಳು ಮುಂದುವರಿದಿವೆ.
ಈ ಹಿನ್ನೆಲೆ ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಷ್ಟ್ರಪತಿಗಳನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಡಾ. ಶೇಖರ್ ಕೊಯಿರಾಲ ಯುಎಂಎಲ್ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa