ಬಲೂಚಿಸ್ತಾನ ಸಂಪತ್ತು ಬಲುಚರ ಆಸ್ತಿ:ಮೀರ್ ಯಾರ್ ಬಲೂಚ್
ಬಲೂಚಿಸ್ತಾನ ಕುರಿತು ಹಿಂದುಸ್ತಾನ್ ಸಮಾಚಾರ ಮುಖ್ಯ ಕಾರ್ಯನಿರ್ವಾಹಕ ಸಂಪಾದಕರಾದ ಸಚಿನ್ ಬುಧೌಲಿಯಾ ವಿಶೇಷ ವರದಿ
Balucistan


ನವದೆಹಲಿ, 2 ಆಗಸ್ಟ್ (ಹಿ.ಸ.):

ಆ್ಯಂಕರ್:

ಪಾಕಿಸ್ತಾನದಿಂದ ಮುಕ್ತಿಯ ಕನಸು ಸಾಕಾರಗೊಳಿಸಲು ಹೋರಾಟ ನಡೆಸುತ್ತಿರುವ ಬಲೂಚಿಸ್ತಾನ್ ಮುಕ್ತ ಸಂಘಟನೆ ಈಗಾಗಲೇ ಸ್ವತಂತ್ರ ರಾಷ್ಟ್ರವಾಗಿ ಬಲೂಚಿಸ್ತಾನದ ಭವಿಷ್ಯದ ಶಾಸನ ವ್ಯವಸ್ಥೆ, ಸಾಮಾಜಿಕ ಮಾದರಿ ಮತ್ತು ರಾಜಕೀಯ ರಚನೆ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಿದೆ. ಈ ಚಳವಳಿಯ ಪ್ರಮುಖ ಮುಖಂಡ ಮೀರ್ ಯಾರ್ ಬಲೂಚ್

ಅವರು ‘ಹಿಂದುಸ್ಥಾನ್ ಸಮಾಚಾರ ಸುದ್ದಿಸಂಸ್ಥೆ ಮುಖ್ಯ ಕಾರ್ಯ ನಿರ್ವಾಹಕ ಸಂಪಾದಕರಾದ ಸಚಿನ್ ಬುಧೌಲಿಯಾ ಜೊತೆಗೆ‌ ವರ್ಚುವಲ್ ಸಂದರ್ಶನದಲ್ಲಿ ಈ ಕುರಿತು ವಿವರವಾಗಿ ಮಾಹಿತಿ ನೀಡಿರುವ ಪೂರ್ಣ ಮಾಹಿತಿ ಇಲ್ಲಿದೆ....

ಧರ್ಮನಿರಪೇಕ್ಷ ಪ್ರಜಾಪ್ರಭುತ್ವದ ಬಲೂಚಿಸ್ತಾನ್

ಬಲೂಚಿಸ್ತಾನ್ ಒಂದು ಧರ್ಮನಿರಪೇಕ್ಷ ಪ್ರಜಾಪ್ರಭುತ್ವ ರಾಷ್ಟ್ರವಾಗಲಿದೆ. ಇಲ್ಲಿ ಎಲ್ಲ ಪೌರರು ಧರ್ಮದ ಆಧಾರದ ಮೇಲೆ ಯಾವುದೇ ರೀತಿಯಲ್ಲಿ ಬದಲಾವಣೆಗೊಳ್ಳಲಾರರು. ಪ್ರತಿಯೊಬ್ಬರಿಗೆ ತಾವು ಇಚ್ಛಿಸಿದ ಧರ್ಮವನ್ನು ಪಾಲಿಸುವ ಹಕ್ಕು ಇದ್ದೇ ಇರುತ್ತದೆ. ಸೇನೆಯು ಕೇವಲ ದೇಶದ ಭದ್ರತೆಗೆ ಮೀಸಲಾಗಿದ್ದು, ಸೇನಾಧಿಕಾರಿಗಳು ಯಾವುದೇ ವ್ಯಾಪಾರ ಅಥವಾ ವಾಣಿಜ್ಯ ಚಟುವಟಿಕೆಯಲ್ಲಿ ಭಾಗವಹಿಸುವಂತಿಲ್ಲ.

ವಿಸ್ತೃತ ಬಲೂಚಿಸ್ತಾನದ ನಕ್ಷೆ

ಬಲೂಚ ಲಿಬರೇಶನ್ ಚಾರ್ಟರ್‌ನಲ್ಲಿ ಪ್ರಕಟಗೊಂಡ ನಕ್ಷೆಯ ಪ್ರಕಾರ, ಪಾಕಿಸ್ತಾನದ ಬಲೂಚಿಸ್ತಾನ ಮಾತ್ರವಲ್ಲದೆ ಇರಾನ್‌ನ ಭಾಗ ಹಾಗೂ ಅಫ್ಘಾನಿಸ್ತಾನದ ಕೆಲವು ದಕ್ಷಿಣ ಭಾಗಗಳು ಕೂಡ ಬಲೂಚಿಸ್ತಾನದಲ್ಲೇ ಸೇರಿವೆ. ಇರಾನ್‌ನಲ್ಲಿ ಬಲೂಚರ ಹೋರಾಟ ಶಾಂತಿಪೂರ್ಣವಾಗಿದ್ದು, ಇದನ್ನು ಮೌಲವೀ ಅಬ್ದುಲ್ ಹಮೀದ್ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಅಲ್ಲಿನ ಜನತೆ ಹಿಂದಿನಂತೆ ಧರ್ಮವಿಮುಖರಾಗದೇ, ಈಗ ರಾಷ್ಟ್ರಭಕ್ತತೆಯ ಕಡೆ ತಿರುಗುತ್ತಿದ್ದಾರೆ ಎಂದು ಮೀರ್ ಯಾರ್ ತಿಳಿಸಿದರು.

ಪಾಕಿಸ್ತಾನದಲ್ಲಿರುವ ಬಲೂಚಿಸ್ತಾನ

ಪಾಕಿಸ್ತಾನದಲ್ಲಿ ಸಾಮಾನ್ಯವಾಗಿ ಬಲೂಚಿಸ್ತಾನವನ್ನು 44% ಭೂಭಾಗವಿದೆ ಎನ್ನಲಾಗುತ್ತದೆ. ಆದರೆ ಡೇರಾ ಗಾಜಿ ಖಾನ್, ರಾಜನ್‌ಪುರ್, ತೋನ್ಸಾ (ಪಂಜಾಬ್), ಮತ್ತು ಕರಾಚಿಯಲ್ಲಿನ ಲ್ಯಾರಿ, ಮೈ ಕಲಾಚಿ ಭಾಗಗಳು ಸಹ ಬಲೂಚ ಬಹುಸಂಖ್ಯಾತ ಪ್ರದೇಶಗಳಾಗಿವೆ. ಈ ಮೂಲಕ ಪಾಕಿಸ್ತಾನದ ಸುಮಾರು 64% ಭಾಗ ಬಲೂಚರು ವಾಸಿಸುವ ಪ್ರದೇಶವಾಗಿರುತ್ತದೆ ಎಂದು ಅವರು ವಿವರಿಸಿದರು.

ಬಲೂಚಿಸ್ತಾನದ ಖನಿಜ ಸಂಪತ್ತು

ಬಲೂಚಿಸ್ತಾನವನ್ನು ‘ಖನಿಜಗಳ ಮ್ಯೂಸಿಯಂ’ ಎಂದು ಕರೆಯಲಾಗುತ್ತದೆ. ಇಲ್ಲಿ ಸುವರ್ಣ, ತಾಂಬೆ, ಲಿಥಿಯಂ, ಯುರೇನಿಯಂ ಸೇರಿದಂತೆ ಅಪಾರ ಸಂಪತ್ತು ಇದೆ. ಪ್ರತಿ ದಿನ 33.4 ಕೋಟಿ ಘನ ಅಡಿ ನೈಸರ್ಗಿಕ ಅನಿಲ ಹೊರತೆಗೆದು ಪಾಕಿಸ್ತಾನ 42ಮಿಲಿಯನ್ ಗಳಿಸುತ್ತಿದೆ. ಆದರೆ ಮೀರ ಯಾರ್ ಬಲೂಚ್ ಸ್ಪಷ್ಟಪಡಿಸಿದಂತೆ, ಈ ಸಂಪತ್ತೆಲ್ಲಾ ಬಲೂಚರದ್ದೇ ಆಗಿದ್ದು, ಪಾಕಿಸ್ತಾನ ಅಥವಾ ಚೀನಾವನ್ನು ಒಳಗೊಂಡ ಯಾವುದೇ ತೃತೀಯ ಪಕ್ಷ ಈ ಸಂಪತ್ತಿನಲ್ಲಿ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಬಲೂಚರ ಶಸ್ತ್ರಚಳವಳಿ

ಬಲೂಚ ಲಿಬರೇಶನ್ ಆರ್ಮಿ ಈಗಾಗಲೇ ಬಹುತೇಕ ಭಾಗವನ್ನು ನಿಯಂತ್ರಣದಲ್ಲಿ ತೆಗೆದುಕೊಂಡಿದ್ದು, ಪಾಕಿಸ್ತಾನಿ ಸೇನೆಯ ಮನೋಬಲ ಕುಸಿತವಾಗಿದೆ. 800ಕ್ಕಿಂತ ಹೆಚ್ಚು ಸೈನಿಕರು ಬಿಎಲ್‌ಎ ಮುಂದೆ ಶರಣಾಗಿದ್ದಾರೆ. ಸ್ಥಳೀಯ ಪೊಲೀಸ್ ಹಾಗೂ ಆಡಳಿತ ವ್ಯವಸ್ಥೆಯಲ್ಲೂ ಬಲೂಚರ ಪ್ರಭಾವ ಹೆಚ್ಚಿದ್ದು, ಬಹುತೇಕ ಶಾಂತಿಯುತವಾಗಿ ಸ್ವಾತಂತ್ರ್ಯ ಚಳವಳಿ ಮುಂದುವರೆದಿದೆ.

ಹಿಂದೂ ಸಮುದಾಯದ ಭದ್ರತೆ

ಬಲೂಚಿಸ್ತಾನದಲ್ಲಿ ಹಿಂದೂ ಸಮುದಾಯದವರಿಗೆ ವಿಶೇಷ ಗೌರವವಿದೆ. ಹಿಂಗಲಾಜ್ ಭವಾನಿ ದೇವಿಯು ಬಲೂಚರ ಆಧ್ಯಾತ್ಮಿಕ ತಾಯಿಯಾಗಿದ್ದು, ‘ನಾನಿ ಮಂದಿರ’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದೆ. ಬಿಎಲ್‌ಎ ಈ ದೇವಾಲಯ ಹಾಗೂ ಇನ್ನೂ 50ಕ್ಕೂ ಹೆಚ್ಚು ಹಿಂದೂ ದೇವಾಲಯಗಳ ರಕ್ಷಣೆಗೆ ಬದ್ಧವಾಗಿದೆ. ಒಬ್ಬ ಹಿಂದೂಗೆ ಹಾನಿಯಾದರೆ ನಾವು ಅವರ ಪರವಾಗಿ ದ್ವಿಗುಣವಾಗಿ ಪ್ರತೀಕಾರ ಮಾಡುತ್ತೇವೆ, ಎಂದು ಮೀರ ಯಾರ್ ಹೇಳಿದ್ದಾರೆ.

ಭಾರತ ಹಾಗೂ ಅಂತಾರಾಷ್ಟ್ರೀಯ ಬೆಂಬಲದ ನಿರೀಕ್ಷೆ

ಇದುವರೆಗೂ ಬಲೂಚರ ಈ ಹೋರಾಟಕ್ಕೆ ಭಾರತ ಸೇರಿದಂತೆ ಯಾವುದೇ ರಾಷ್ಟ್ರದಿಂದ ನೇರ ಬೆಂಬಲ ದೊರೆತಿಲ್ಲ ಎಂದು ಮೀರ ಯಾರ್ ಹೇಳಿದ್ದಾರೆ.

ಆದರೆ ಬಲೂಚಿಸ್ತಾನ ಶೋಷಿಸಲು ಯಾವುದೇ ದೇಶಕ್ಕೆ ಅವಕಾಶವಿಲ್ಲ. ನಾವೇ ನಮ್ಮ ಭವಿಷ್ಯ ನಿರ್ಧರಿಸುತ್ತೇವೆ. ಬಲೂಚರು ಮಾರಾಟದ ವಸ್ತುಗಳಲ್ಲ. ಎಂದು ವಿಶ್ವದ ರಾಷ್ಟ್ರಗಳಿಗೆ ಎಚ್ಚರಿಸಿದ್ದಾರೆ.

ಪಾಕಿಸ್ತಾನದ ನಂಬಿಕೆ ಮೇರೆಗೆ ಅಮೆರಿಕ ಬಲೂಚರ ಅನುಮತಿಯಿಲ್ಲದೆ ಬಲೂಚಿಸ್ತಾನದ ಯಾವುದೇ ಸಂಪತ್ತನ್ನು ಬಳಸುವುದು ಅಸಾಧ್ಯ, ಅವರೊಂದಿಗೆ ಮಾಡಿದ ಯಾವುದೇ ಖನಿಜ ಸಹಕಾರ ಒಪ್ಪಂದ ಅಮೆರಿಕದ ಭದ್ರತೆಗೆ ಧಕ್ಕೆ ತರಲಿದೆ ಎಂದು ಬಲೂಚಿಸ್ತಾನ ಮುಕ್ತ ಸಂಘಟನೆಯ ಹಿರಿಯ ಮುಖಂಡ ಹಿರ್ಬೀಯರ್ ಮಾರ್ರಿ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande