ಎಟಿಎಂ ಕಳ್ಳತನ ಯತ್ನ, ಇಬ್ಬರು ಯುವಕರ ಬಂಧನ
ಬಳ್ಳಾರಿ, 2 ಆಗಸ್ಟ್ (ಹಿ.ಸ.): ಆ್ಯಂಕರ್: ಬಳ್ಳಾರಿಯ ತಾಳೂರು ರಸ್ತೆಯಲ್ಲಿರುವ ಎಸ್‍ಬಿಐ ಬ್ಯಾಂಕ್‍ನ ಎಟಿಎಂ ಮೆಷಿನ್ ಗ್ಲಾಸ್‍ನ ವಾಲ್ ಮತ್ತು ಎರಡು ಸಿಸಿ ಟಿವಿ ಕ್ಯಾಮರಾಗಳ ಇನ್‍ಹೋಲ್ ಮತ್ತು ಲಾಬಿ ಕ್ಯಾಮರಾಗಳನ್ನು ಹೊಡೆದು ಎಟಿಎಂ ಯಂತ್ರದಲ್ಲಿರುವ ಹಣವನ್ನು ಕಳ್ಳತನ ಮಾಡಲು ಯತ್ನಿಸಿದ್ದ ಇಬ್ಬರು ಆರೋ
ಬಳ್ಳಾರಿ : ಎಟಿಎಂ ಕಳ್ಳತನ ಯತ್ನ, ಇಬ್ಬರು ಯುವಕರ ಬಂಧನ


ಬಳ್ಳಾರಿ, 2 ಆಗಸ್ಟ್ (ಹಿ.ಸ.):

ಆ್ಯಂಕರ್:

ಬಳ್ಳಾರಿಯ ತಾಳೂರು ರಸ್ತೆಯಲ್ಲಿರುವ ಎಸ್‍ಬಿಐ ಬ್ಯಾಂಕ್‍ನ ಎಟಿಎಂ ಮೆಷಿನ್ ಗ್ಲಾಸ್‍ನ ವಾಲ್ ಮತ್ತು ಎರಡು ಸಿಸಿ ಟಿವಿ ಕ್ಯಾಮರಾಗಳ ಇನ್‍ಹೋಲ್ ಮತ್ತು ಲಾಬಿ ಕ್ಯಾಮರಾಗಳನ್ನು ಹೊಡೆದು ಎಟಿಎಂ ಯಂತ್ರದಲ್ಲಿರುವ ಹಣವನ್ನು ಕಳ್ಳತನ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭರಾಣಿ ವಿ.ಜೆ. ಅವರು ಸುದ್ದಿಗಾರರಿಗೆ ಶನಿವಾರ ಈ ಮಾಹಿತಿ ನೀಡಿದರು.

ಬಂಧಿತರು ಜೆ. ಅವಿನಾಶ್ (27) ಮತ್ತು ಕೆ.ಜಿ. ಶಿವರಾಜ್ (29). ಬಂಧಿತ ಆರೋಪಿಗಳು ಇಟ್ಟಿಗೆಗಳಿಂದ ಎಟಿಎಂ ಮೆಷಿನ್‍ನ ಗ್ಲಾಸ್ ವಾಲ್ ಧ್ವಂಸ ಮಾಡಿದ್ದು ಅಲ್ಲದೇ, ಕ್ಯಾಮರಾಗಳನ್ನು ಹಾಗೂ ಎಟಿಎಂ ಯಂತ್ರವನ್ನು ಜುಲೈ 31ರ ರಾತ್ರಿ ಹಾಳು ಮಾಡಿದ್ದರು.

ಈ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಬಳ್ಳಾರಿ ಡಿಎಸ್‍ಪಿ ನಂದರೆಡ್ಡಿ ಮತ್ತು ಸಿರುಗುಪ್ಪ ಉಪ ವಿಭಾಗದ ಡಿಎಸ್‍ಪಿ ಡಾ. ಸಂತೋಷ ಚವ್ಹಾಣ್ ನೇತೃತ್ವದಲ್ಲಿ ಐದು ತಂಡಗಳನ್ನು ರಚಿಸಿ, ತನಿಖೆಯನ್ನು ನಡೆಸಲಾಗಿತ್ತು.

ತಾಂತ್ರಿಕ ಸಾಕ್ಷ್ಯಾಧಾರಗಳ ಆಧರಿಸಿ ಕೇವಲ 30 ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತರಿಂದ ದುಷ್ಕತ್ಯಕ್ಕೆ ಬಳಸಲಾದ ವಾಹನ ಮತ್ತು ಆಯುಧವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಪಿ. ರವಿಕುಮಾರ್ ಮತ್ತು ಸಿರುಗುಪ್ಪ ಉಪ ವಿಭಾಗದ ಡಿಎಸ್‍ಪಿ ಡಾ. ಸಂತೋಷ ಚವ್ಹಾಣ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande