ಮುಂಬಯಿ, 18 ಆಗಸ್ಟ್ (ಹಿ.ಸ.) :
ಆ್ಯಂಕರ್ : ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಮನೆ ಕುಸಿತ, ಪ್ರವಾಹ ಸೇರಿದಂತೆ ಅನಾಹುತಗಳಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ.
ಆಗಸ್ಟ್ 21ರವರೆಗೆ ರಾಜ್ಯದ 16 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಕಿತ್ತಳೆ ಅಥವಾ ಕೆಂಪು ಎಚ್ಚರಿಕೆ ನೀಡಿದೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ವಿಪತ್ತು ನಿರ್ವಹಣಾ ಕೋಶದ ಸಭೆ ನಡೆಸಿ, ಎಲ್ಲಾ ಜಿಲ್ಲಾಡಳಿತಗಳಿಗೆ ಎಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಮುಂಬೈಯಲ್ಲಿ ಕಳೆದ 8 ಗಂಟೆಗಳಲ್ಲಿ 170 ಮಿಮೀ ಮಳೆಯಾಗಿದ್ದು, ಕೆಲವು ಪ್ರದೇಶಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗಿದೆ. ವಿದರ್ಭದಲ್ಲಿ ಸುಮಾರು 2 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಾನಿಗೊಳಗಾಗಿದೆ.
ಕೊಂಕಣದ ನದಿಗಳು ಅಪಾಯದ ಮಟ್ಟ ತಲುಪಿರುವುದರಿಂದ ಹಾಗೂ ಭೂಕುಸಿತದ ಭೀತಿ ಇರುವುದರಿಂದ ಆಶ್ರಯ ಕೇಂದ್ರಗಳಲ್ಲಿ ಆಹಾರ, ನೀರು ಮತ್ತು ಬಟ್ಟೆಗಳ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa