ವಿಶ್ವ ಚರ್ಮ ಆರೋಗ್ಯ ದಿನದ ಅಂಗವಾಗಿ ಜುಲೈ 11 ಮತ್ತು ಜುಲೈ 12ರಂದು ಚರ್ಮ ರೋಗಗಳ ಉಚಿತ ತಪಾಸಣೆ ಶಿಬಿರ ಆಯೋಜನೆ
ವಿಜಯಪುರ, 08 ಜುಲೈ (ಹಿ.ಸ.) : ಆ್ಯಂಕರ್ : ಬಿ. ಎಲ್. ಡಿ. ಇ ಸಂಸ್ಥೆಯ ಎ. ವಿ ಎಸ್ ಆಯುರ್ವೇದ ಮಹಾವಿದ್ಯಾಲಯದ ವಿಶ್ವಚರ್ಮ ಆರೋಗ್ಯ ದಿನದ ಅಂಗವಾಗಿ ಜುಲೈ 11 ಮತ್ತು ಜುಲೈ 12ರಂದು ನಾನಾ ರೀತಿಯ ಚರ್ಮ ರೋಗಗಳ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿದೆ. ಎರಡು ದಿನಗಳ ಈ ಶಿಬಿರದಲ್ಲಿ ಚರ್ಮರೋಗಸ ಲಕ್ಷಣಗಳಾದ(ski
ವಿಶ್ವ ಚರ್ಮ ಆರೋಗ್ಯ ದಿನದ ಅಂಗವಾಗಿ ಜುಲೈ 11 ಮತ್ತು ಜುಲೈ 12ರಂದು ಚರ್ಮ ರೋಗಗಳ ಉಚಿತ ತಪಾಸಣೆ ಶಿಬಿರ ಆಯೋಜನೆ


ವಿಜಯಪುರ, 08 ಜುಲೈ (ಹಿ.ಸ.) :

ಆ್ಯಂಕರ್ : ಬಿ. ಎಲ್. ಡಿ. ಇ ಸಂಸ್ಥೆಯ ಎ. ವಿ ಎಸ್ ಆಯುರ್ವೇದ ಮಹಾವಿದ್ಯಾಲಯದ ವಿಶ್ವಚರ್ಮ ಆರೋಗ್ಯ ದಿನದ ಅಂಗವಾಗಿ ಜುಲೈ 11 ಮತ್ತು ಜುಲೈ 12ರಂದು ನಾನಾ ರೀತಿಯ ಚರ್ಮ ರೋಗಗಳ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿದೆ.

ಎರಡು ದಿನಗಳ ಈ ಶಿಬಿರದಲ್ಲಿ ಚರ್ಮರೋಗಸ ಲಕ್ಷಣಗಳಾದ(skin deseases) ಮೊಡವೆ, ಭಂಗು, ಇಸುಬು, ಗಜಕರ್ಣ ಮುಂತಾದ ದೀರ್ಘ ಕಾಲೀನ ಸಮಸ್ಯೆಗಳ ಉಚಿತ ತಪಾಸಣೆ ನಡೆಯಲಿದೆ. ಚರ್ಮರೋಗವಸಮಸ್ಯೆ ಇರುವವರು ಈ ಉಚಿತ ತಪಾಸಣೆ ಶಿಬಿರದ ಪ್ರಯೋಜನ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9343877670 ಮತ್ತು 9513397413 ಸಂಪರ್ಕಿಸುವಂತೆ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ‌ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande