ಬಳ್ಳಾರಿ : ಮಾಜಿ ಮೇಯರ್ ಗರ‍್ರಂ ವೆಂಕಟರಮಣ ಬಿಜೆಪಿ ನಗರ ಘಟಕದ ಅಧ್ಯಕ್ಷ
ಬಳ್ಳಾರಿ, 08 ಜುಲೈ (ಹಿ.ಸ.) : ಆ್ಯಂಕರ್ : ಭಾರತೀಯ ಜನತಾ ಪಾರ್ಟಿಯ ಬಳ್ಳಾರಿ ನಗರ ಘಟಕದ ನೂತನ ಅಧ್ಯಕ್ಷರಾಗಿ ಮಾಜಿ ಮೇಯರ್ ಗರ‍್ರಂ ವೆಂಕಟರಮಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಮುಖಂಡ ಅರುಣ್ ಶಾಪುರ್ ಅವರು ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿ, ಗರ‍್ರಂ ವೆಂಕಟರಮಣ ಒಬ್ಬರೇ
ಬಳ್ಳಾರಿ : ಮಾಜಿ ಮೇಯರ್ ಗರ‍್ರಂ ವೆಂಕಟರಮಣ ಬಿಜೆಪಿ ನಗರ ಘಟಕದ ಅಧ್ಯಕ್ಷ


ಬಳ್ಳಾರಿ, 08 ಜುಲೈ (ಹಿ.ಸ.) :

ಆ್ಯಂಕರ್ : ಭಾರತೀಯ ಜನತಾ ಪಾರ್ಟಿಯ ಬಳ್ಳಾರಿ ನಗರ ಘಟಕದ ನೂತನ ಅಧ್ಯಕ್ಷರಾಗಿ ಮಾಜಿ ಮೇಯರ್ ಗರ‍್ರಂ ವೆಂಕಟರಮಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿ ಮುಖಂಡ ಅರುಣ್ ಶಾಪುರ್ ಅವರು ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿ, ಗರ‍್ರಂ ವೆಂಕಟರಮಣ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವರ ಆಯ್ಕೆಯನ್ನು ಘೋಷಣೆ ಮಾಡಿದ್ದಾರೆ.

ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್ ನಾಯ್ಡು, ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ, ಮುಖಂಡರಾದ ಕೆ.ಎಸ್. ದಿವಾಕರ್, ಓಬಳೇಶ ಅವರ ಸಮ್ಮುಖದಲ್ಲಿ ಗರ‍್ರಂ ವೆಂಕಟರಮಣ ಅವರು ಪದಗ್ರಹಣ ಮಾಡಿದರು.

ಕಾಂಗ್ರೆಸ್ ಪಕ್ಷದಿಂದ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಆಗಿದ್ದ ಗರ‍್ರಂ ವೆಂಕಟರಮಣ ಅವರು, ಜಿ. ಜನಾರ್ದನರೆಡ್ಡಿ ಅವರ ನೇತೃತ್ವದ ಕೆಆರ್‌ಪಿಪಿ ಸೇರಿದ್ದರು. ಕೆಆರ್‌ಪಿಪಿ ಬಿಜೆಪಿಯಲ್ಲಿ ಸೇರ್ಪಡೆ ಆಗಿರುವ ಹಿನ್ನಲೆಯಲ್ಲಿ ಇವರು ಪಕ್ಷದ ನಗರ ಘಟಕದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande