ವಿಜಯಪುರ, 08 ಜುಲೈ (ಹಿ.ಸ.) :
ಆ್ಯಂಕರ್ : ಪಕ್ಷದ ವಿಚಾರ ಸಾರ್ವತ್ರಿಕ ಆಗಬಾರದೆಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ ನೇತೃತ್ವದಲ್ಲಿ ಸಭೆ ಮಾಡಿದ್ದಾರೆ.
ಇದು ನಮ್ಮ ಕುಟುಂಬದ ವಿಚಾರ. ಕುಟುಂಬ ಎಂದ ಮೇಲೆ ಸಮಸ್ಯೆಗಳು ಇರೋದು ಸಹಜ ಎಂದು ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಸಮಸ್ಯೆಗೆ ಪರಿಹಾವನ್ನೂ ಅಲ್ಲೆ ಕಂಡು ಕೊಳ್ಳುತ್ತೇವೆ. ನಿಮ್ಮ ಮುಂದೆ ಎಲ್ಲ ಹೇಳಿಕೊಳ್ಳಲ್ಲ. ಸಮಸ್ಯೆ ಇಲ್ಲದ ಭೂಮಿ, ವ್ಯವಸ್ಥೆ ಎಲ್ಲಿಯೂ ಇಲ್ಲ. ಪಕ್ಷದ ಸರ್ಕಾರದಲ್ಲಿ ಕೆಲಸ ಕಾರ್ಯದ ಬಗ್ಗೆ ಸುರ್ಜೆವಾಲಾ ಕೇಳಿದರು. ನಾವು ವಾಸ್ತವಿಕತೆಯನ್ನು ಹೇಳಿದ್ದೇವೆ. ನಮ್ಮದು ಮೊದಲು ಅಭಿವೃದ್ದಿಗೆ ಒತ್ತು ನೀಡುವ ಜಾಯಮಾನ. ನಂತರ ಅಧಿಕಾರದ ವಿಚಾರ ನಾವು ಸನ್ಯಾಸಿಗಳಲ್ಲ. ಈ ಮೂಲಕ ಸಚಿವ ಸ್ಥಾನ ಆಸೆಯನ್ನು ಶಾಸಕ ಪಾಟೀಲ ಬಹಿರಂಗ ಪಡಿಸಿದರು. ಸಚಿವನನ್ನಾಗಿ ಮಾಡುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ.
ಚುನಾವಣೆ ವೇಳೆ ಏನೆಲ್ಲಾ ಚರ್ಚೆಗಳಾಗಿವೆ ಎಂಬುದನ್ನು ರಾಜ್ಯ ಉಸ್ತುವಾರಿಗಳಿಗೆ ನೆನಪಿಸಿದ್ದೇವೆ. ಮುಂದಿನ 2028ರ ಚುನಾವಣೆ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದಾರೆ. 2028 ರ ಚುನಾವಣೆಗೆ ಯಾವ ದಾರಿಯಲ್ಲಿ ಸಾಗಬೇಕೆಂದು ಚರ್ಚೆ ಮಾಡಿದ್ದಾರೆ. ಶಾಸಕರಿಗೆ ಅವರದ್ದೇ ಆದ ಸಮಸ್ಯೆಗಳು, ಅನಕೂಲ ಅನನುಕೂಲತೆಗಳಿವೆ. ಎಲ್ಲ ಸಮಸ್ಯೆಗಳಿಗೂ ಪರಿಹಾರಗಳು ಇರಲ್ಲ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande