ಅವ್ಯವಸ್ಥೆ ಆಗರವಾದ ಬಸ್ ನಿಲ್ದಾಣಗಳು
ಗದಗ, 08 ಜುಲೈ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ನರೇಗಲ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಸ್ ಶೆಲ್ಟರ್‌ಗಳು ನಿರ್ವಹಣೆಯಿಲ್ಲದೇ ದೊಡ್ಡಿಗಳಂತಾಗಿವೆ. ದನದ ಶೆಲ್ಟರ್‌ಗಳಲ್ಲಿ ಬಸ್‌ಗಳು ನಿಲ್ಲುತ್ತಿಲ್ಲ, ಪ್ರಯಾಣಿಕರೂ ಕೂರುತ್ತಿಲ್ಲ. ಹೀಗಾಗಿ, ಅವುಗಳೆಡೆ ಗ್ರಾಮ ಪಂಚಾಯತ್ ಅಧಿಕಾರಿಗಳು ಗಮನ ಹರಿಸುತ್ತಿಲ
ಪೋಟೋ


ಗದಗ, 08 ಜುಲೈ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ನರೇಗಲ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಸ್ ಶೆಲ್ಟರ್‌ಗಳು ನಿರ್ವಹಣೆಯಿಲ್ಲದೇ ದೊಡ್ಡಿಗಳಂತಾಗಿವೆ. ದನದ ಶೆಲ್ಟರ್‌ಗಳಲ್ಲಿ ಬಸ್‌ಗಳು ನಿಲ್ಲುತ್ತಿಲ್ಲ, ಪ್ರಯಾಣಿಕರೂ ಕೂರುತ್ತಿಲ್ಲ. ಹೀಗಾಗಿ, ಅವುಗಳೆಡೆ ಗ್ರಾಮ ಪಂಚಾಯತ್ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಪ್ರಯಾಣಿಕರು ಕಾಯಲು ಸ್ಥಳೀಯ ಆಡಳಿತವರ್ಗ ಜನಸಂದಣಿ ಇರುವ ಪ್ರದೇಶದಲ್ಲಿ ಬಸ್ ಶೆಲ್ಟರ್‌ಗಳನ್ನು ನಿರ್ಮಿಸಿದೆ.

ನರೇಗಲ್ಲ ಪಟ್ಟಣ ಪಂಚಾಯಿತಿ ವತಿಯಿಂದ ನರೇಗಲ್ಲ ಹಾಗೂ ಮಜರೆ ಗ್ರಾಮಗಳಲ್ಲಿ ಒಟ್ಟು 6 ಬಸ್ ಶೆಲ್ಡರ್‌ಗಳನ್ನು ನಿರ್ಮಿಸಿದ್ದು, ಇದರ ಕಡೆಗೆ ಗಮನ ಹರಿಸಬೇಕಾದ ಪಟ್ಟಣ ಪಂಚಾಯಿತಿಯ ನಿರ್ಲಕ್ಷ್ಯದಿಂದ ಅನೇಕ ಕಾರಣವಾಗಿದೆ. ನಿರ್ವಹಣೆಯನ್ನೇ ಮರೆತಿದ್ದು, ಬಸ್ ಶೆಲ್ಟರ್‌ಗಳು ದನದ ಕೊಟ್ಟಿಗೆಯಾಗಿ ಹಾಳು ಸುರಿಯುತ್ತಿವೆ. ಐದು ಶೆಲ್ಟರ್‌ಗಳು ನಿರುಪಯುಕ್ತವಾಗಿದ್ದು, ಕೇವಲ ಹಳೆ ಬಸ್ ನಿಲ್ದಾಣದ ಹತ್ತಿರದ ಶೆಲ್ಪರ್ ಮಾತ್ರ ಸಾರ್ವಜನಿಕರ ಉಪಯೋಗಕ್ಕಿದೆ.

ಸರಕಾರದ ಸ್ವತ್ತು ಕಾಯ್ದುಕೊಳ್ಳಬೇಕಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದು, ಸರಕಾರ ಇತ್ತ ಕಡೆ ಗಮನ ಹರಿಸಬೇಕು, ಬಸ್ ಶೆಲ್ಟರ್‌ಗಳನ್ನು ಶುಚಿಗೊಳಿಸಿ, ಪ್ರಯಾಣಿಕರ ಶಾಪದಿಂದ ಮುಕ್ತಿ ಹೊಂದಬೇಕು ಎನ್ನುವ ಮಾತುಗಳು ಸಾರ್ವಜನಿಕ ಕೇಳಿಬರುತ್ತಿವೆ.

ಬಸ್ ನಿಲ್ದಾಣಗಳನ್ನು ನಿರ್ಮಿಸುವುದು ಮತ್ತು ಅವುಗಳ ನಿರ್ವಹಣೆ ಸ್ಥಳೀಯ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದ್ದು. ಅವರು ಅವುಗಳನ್ನು ಸುಸ್ಥಿತಿಯಲ್ಲಿಟ್ಟರೆ ಬಸ್ ಶೆಲ್ಟರ್‌ಗಳ ಬಳಿಯಲ್ಲಿಯೆ ಬಸ್ ನಿಲ್ಲಿಸುತ್ತೇವೆಯೇ ಹೊರತು ನಿರ್ಮಾಣ ಮತ್ತು ನಿರ್ವಹಣೆ ನಮ್ಮ ಕೆಲಸವಲ್ಲ ಎನ್ನುತ್ತಾರೆ ರೋಣ ಘಟಕ ವ್ಯಸ್ಥಾಪಕ ಯಕ್ಸಂಬಿ.

ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಪ್ರತಿಕ್ರಿಯಿಸಿ, ಬಸ್ ಶೆಲ್ಟರ್‌ಗಳನ್ನು ಶುಚಿಗೊಳಿಸಲು ಡಿಪೋ ಮ್ಯಾನೇಜರ್ ಜೊತೆ ಮಾತನಾಡುತ್ತೇವೆ. ಒಂದು ವೇಳೆ ಅವರಿಂದ ಸಾಧ್ಯವಿಲ್ಲ ಎಂದಾದರೆ ವಾರಕ್ಕೊಂದು ಬಾರಿ ನಮ್ಮ ಸಿಬ್ಬಂದಿಯ ಸಹಾಯದಿಂದ ಶುಚಿಗೊಳಿಸುತ್ತೇವೆ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande