ಕೋಲಾರ, ೫ ಜುಲೈ (ಹಿ.ಸ) :
ಆ್ಯಂಕರ್ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಾಮಾಜಿಕ ಭದ್ರತಾ ಯೋಜನೆಗಳಿಗೆ ನೊಂದಾಯಿಸಿಕೊಳ್ಳಲು ಸಾರ್ವಜನಿಕರು ಹಿಂದೇಟು ಹಾಕಬಾರದು ಎಂದು ಕೆನರಾ ಬ್ಯಾಂಕ್ ಸಹಾಯಕ ಮಹಾಪ್ರಬಂಧಕ ಅಶೋಕ್ ಕುಮಾರ್ ಎಂ ಹೇಳಿದರು.
ಕೋಲಾರ ತಾಲ್ಲೂಕಿನ ಶೆಟ್ಟಿಮಾದಮಂಗಲ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಹಾಗೂ ಆರ್ಥಿಕ ಸಾಕ್ಷರತಾ ಕೇಂದ್ರದಿ0ದ ಆಯೋಜಿಸಿದ್ದ ಜನಸುರಕ್ಷಾ ಯೋಜನೆಗಳ ನೊಂದಣಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಗಳು ಜನರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದರು ಕೂಡ ಸಾಕಷ್ಟು ಜನ ಮಾಹಿತಿಯ ಕೊರತೆಯಿಂದ ಅದರ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆಗೆ ಕೇವಲ ೪೩೬ ರೂ. ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆಗೆ ಕೇವಲ ೨೦ ರೂ. ವೆಚ್ಚದಲ್ಲಿ ನೊಂದಾಯಿಸಿಕೊAಡರೆ ೪ ಲಕ್ಷ ರೂಗಳ ವಿಮೆಯ ಭದ್ರತೆ ಸಿಗುತ್ತದೆ ಎಂದರು.
ಕುಟುAಬದ ದುಡಿಯುವ ವ್ಯಕ್ತಿ ವಯಸ್ಸಾಗಿ ಅಥವಾ ಅನಾರೋಗ್ಯದಿಂದ ನಿಧನರಾದರೆ ಪಿಎಂಜೆಜೆಬಿವೈಯಡಿ ನೊಂದಾಯಿಸಿಕೊoಡವರ ಕುಟುಂಬದವರಿಗೆ ೨ ಲಕ್ಷ ರೂ. ಆರ್ಥಿಕ ನೆರವು ಸಿಗುತ್ತದೆ. ಪಿಎಂಎಸ್‌ಬಿವೈಯಡಿ ನೊಂದಾಯಿಸಿಕೊ0ಡವರು ದುರದೃಷ್ಟದಿಂದ ಅಪಘಾತವಾಗಿ ನಿಧನರಾದರೆ ೨ ಲಕ್ಷ ರೂ ಆರ್ಥಿಕ ಸಹಾಯ, ಆ ಕುಟುಂಬದವರಿಗೆ ಸಿಕ್ಕಿ, ಕಷ್ಟ ಕಾಲದಲ್ಲಿ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಹದೇವ್ ಜೋಶಿ ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಸಾರ್ವಜನಿಕರು ತಿಳುವಳಿಕೆ ಹೊಂದಿ, ಕೂಡಲೇ ಖಾತೆ ಹೊಂದಿರುವ ಬ್ಯಾಂಕ್ ಗೆ ತೆರಳಿ ಯೋಜನೆಗಳಿಗೆ ನೊಂದಾಯಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜನಸುರಕ್ಷಾ ಅಭಿಯಾನದ ಮೂಲಕ ಪ್ರತಿಹಳ್ಳಿಯ ಜನರಿಗೂ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ಯೋಜನೆಗಳ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ. ಇದೇ ವೇಳೆ ಪಿಎಂಜೆಜೆಬಿವೈ ಯೋಜನೆಯಡಿ ೬೦ ಹಾಗೂ ಪಿಎಂಎಸ್‌ಬಿವೈ ಯಡಿ ೬೯ ಹಾಗೂ ಅಟಲ್ ಪಿಂಚಣಿ ಯೋಜನೆಯಡಿ ೫ ಸದಸ್ಯರನ್ನು ನೊಂದಾಯಿಸಲಾಯಿತು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಮದನಹಳ್ಳಿ ಶಾಖೆಯ ವ್ಯವಸ್ಥಾಪಕ ಶಿವಶಂಕರ್, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅನುರಾಧ, ಆರ್ಥಿಕ ಸಾಕ್ಷರತಾ ಕೇಂದ್ರದ ಸಲಹೆಗಾರ್ತಿ ವಿಶಾಲಾಕ್ಷಿ, ಜಿಲ್ಲಾ ಪಂಚಾಯಿತಿ ವಿಶ್ವಾಸ್ ಭಾಗವಹಿಸಿದ್ದರು.
ಚಿತ್ರ : ಕೋಲಾರ ತಾಲ್ಲೂಕಿನ ಶೆಟ್ಟಿಮಾದಮಂಗಲ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಮತ್ತು ಆರ್ಥಿಕ ಸಾಕ್ಷರತಾ ಕೇಂದ್ರದಿ0ದ ಆಯೋಜಿಸಿದ್ದ ಜನಸುರಕ್ಷಾ ಅಭಿಯಾನ ಕಾರ್ಯಕ್ರಮವನ್ನು ಕೆನರಾ ಬ್ಯಾಂಕ್ ಎಜಿಎಂ ಅಶೋಕ್ ಕುಮಾರ್ ಎಸ್ ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್