ದುಬೈನಲ್ಲಿ ನಡೆದ ಸುವರ್ಣ ಸೌರಭದಲ್ಲಿ `ಗೋಲ್ಡನ್ ಕಪಲ್ ಅವಾರ್ಡ್'
ದುಬೈನಲ್ಲಿ ನಡೆದ ಸುವರ್ಣ ಸೌರಭದಲ್ಲಿ `ಗೋಲ್ಡನ್ ಕಪಲ್ ಅವಾರ್ಡ್'
ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷ ಹಾಗೂ ಸಮಾಜಸೇವಕ ಪಲ್ಲವಿ ಮಣಿ ದಂಪತಿಗಳಿಗೆ ದುಬೈನಲ್ಲಿ ನಡೆದ ಸುವರ್ಣ ಸೌರಭ ಕಾರ್ಯಕ್ರಮದಲ್ಲಿ `ಗೋಲ್ಡನ್ ಕಪಲ್ ಅವಾರ್ಡ್' ಪ್ರದಾನ ಮಾಡಿ ಪುರಸ್ಕರಿಸಲಾಗಿದೆ.


ಕೋಲಾರ, ೦೬ ಜುಲೈ (ಹಿ.ಸ) :

ಆ್ಯಂಕರ್ : ವರ್ಷವಿಡೀ ಪ್ರತಿತಿಂಗಳ ೧ ರಂದು ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡದ ಸೇವಕರಾಗಿ ಕೆಲಸ ಮಾಡುತ್ತಿರುವ ಜಿಲ್ಲೆಯ ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷ ಹಾಗೂ ಸಮಾಜಸೇವಕ ಪಲ್ಲವಿ ಮಣಿ,ಸರಸ್ವತಿ ದಂಪತಿಗಳಿಗೆ ದುಬೈನಲ್ಲಿ ಅಂತರಾಷ್ಟಿಯ ಸಾಂಸ್ಕöÈತಿಕ ಸೌರಭ ಪರಿಷತ್ ಇಂಡಿಯಾ ಇದರ ೫೦ನೇ ಅಂತರಾಷ್ಟಿçÃಯ ಸಾಂಸ್ಕöÈತಿಕ ಸೌರಭ ಮತ್ತು ಸಾಂಸ್ಕöÈತಿಕ ವಿನಿಮಯದ ಅಂಗವಾಗಿ ನಡೆದ ಸುವರ್ಣ ಸೌರಭ ಕಾರ್ಯಕ್ರಮದಲ್ಲಿ `ಗೋಲ್ಡನ್ ಕಪಲ್ ಅವಾರ್ಡ್' ಪ್ರದಾನ ಮಾಡಿ ಪುರಸ್ಕರಿಸಲಾಗಿದೆ.

ಬರ್ ದುಬೈಯ ಪಾರ್ಕ್ ರಿಜಿಸ್ ಸಭಾಂಗಣದಲ್ಲಿ ಜೂನ್ ೨೯ರಂದು ಯುಎಇಯ ಜನಿಸಿಸ್ ಅಲ್ಟಿಮಾ ಮತ್ತು ದುಬೈಯ ಸೇಂಟ್ ಸಾಂಸ್ಕöತಿಕ ಸಂಘಟನೆಯ ಸಹಕಾರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಲ್ಲವಿ ಮಣಿ ದಂಪತಿಗಳಿಗೆ ಈ ಗೌರವ ಸಲ್ಲಿಸಲಾಗಿದೆ.

ಕಾರ್ಯಕ್ರಮಕ್ಕೆ ಯುಎಇ ಬು ಅಬ್ದುಲ್ಲಾ ಗ್ರೂಪ್ ಚೆರ್ಮನ್ ಡಾ. ಬು ಅಬ್ದುಲ್ಲಾ ಮತ್ತು ಐಸಿಎಫ್‌ಸಿ(ಐ) ಗೌರವಾಧ್ಯಕ್ಷ ಪಲ್ಲವಿ ಮಣಿ ಸಸ್ಯಕುಂಡಕ್ಕೆ ನೀರು ಎರೆಯುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಬು ಅಬ್ದುಲ್ಲಾ ಸಾಂಸ್ಕöತಿಕ ವಿನಿಮಯ ದಂತ ಕಾರ್ಯಕ್ರಮಗಳು ಮನಸುಗಳನ್ನು ಬೆಸೆಯುವಲ್ಲಿ ಪೂರಕ ಪಾತ್ರ ವಹಿಸುತ್ತವೆ. ಪ್ರತಿಯೊಬ್ಬರೂ ಇಂಥ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಉದಾರತೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಪ್ರಾಸ್ತಾವಿಕ ಭಾಷಣ ಮಾಡಿದ ಐಸಿಎಫ್‌ಸಿ (ಐ) ಸ್ಥಾಪಕ ಅಧ್ಯಕ್ಷ ಇಂ. ಕೆ. ಪಿ ಮಂಜುನಾಥ್ ಸಾಗರ್ ಅಂತರಾಷ್ಟಿಯ ಸಾಂಸ್ಕöತಿಕ ಸೌರಭ ಪರಿಷತ್ (ಇಂಡಿಯಾ) ೨೦೦೪ ರಿಂದ ಈವರೆಗೆ ೪೦ಕ್ಕೂ ಹೆಚ್ಚು ದೇಶಗಳಲ್ಲಿ ೫೦ ಸಾಂಸ್ಕöÈತಿಕ ಸೌರಭ ಕಾರ್ಯಕ್ರಮ ಆಯೋಜಿಸುವ ಮೂಲಕ ಇಂದು ದುಬೈಯಲ್ಲಿ ಸುವರ್ಣ ಸೌರಭ ಸಮಾರಂಭವನ್ನು ಆಯೋಜಿಸುತ್ತಿದೆ. ಇದು ಸಂಸ್ಥೆಯ ಸಾಧನೆಯಾ ಮೈಲುಗಲ್ಲು ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ. ನಾವು ವಿಶ್ವ ಸೌಹಾರ್ದ ಪ್ರಿಯರು ಎನ್ನುವ ಧ್ಯೇಯ ವಾಕ್ಯದಡಿಯಲ್ಲಿ ವಿಶ್ವ ಪರ್ಯಟನೆ ಮಾಡಲು ಸಾಧ್ಯವಾಯಿತು ಎಂದರು.

ಸುವರ್ಣ ಸೌರಭದ ಅಂಗವಾಗಿ ಐವರು ದಂಪತಿಗಳಿಗೆ ಗೋಲ್ಡನ್ ಕಪಲ್ ಅವಾರ್ಡ್ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ಪಲ್ಲವಿ ಮಣಿ (ಡಾ.ಸುಬ್ರಮಣಿ ಎಂ ) ಮತ್ತು ಸರಸ್ವತಿ ದಂಪತಿ ಗಣ್ಯರಿಂದ ಪ್ರಶಸ್ತಿ ಸ್ವೀಕರಿಸಿದರು.

ಪಲ್ಲವಿ ಮಣಿ ಕನ್ನಡ ಪರ ಕಾರ್ಯಕ್ರಮಗಳು ಹಾಗೂ ಸಮಾಜಸೇವೆಯ ಮೂಲಕ ಜಿಲ್ಲೆಯಲ್ಲಿ ಹೆಸರು ಮಡಿದ್ದು, ಕನ್ನಡ ರಾಜ್ಯೋತ್ಸವವನ್ನು ನ.೧ಕ್ಕೆ ಸೀಮಿತ ಮಾಡದೇ ಸುಮಾರು ೧೦ ವರ್ಷಗಳಿಂದ ಸತತವಾಗಿ ಪ್ರತಿ ತಿಂಗಳ ಒಂದನೇ ತಾರೀಕು ಬಂಗಾರಪೇಟೆ ಪಟ್ಟಣದ ಕುವೆಂಪು ವೃತ್ತದಲ್ಲಿ ವೇದಿಕೆ ಹಾಕಿ ಸ್ಥಳೀಯ ಹಾಗೂ ರಾಜ್ಯದ ವಿವಿಧೆಡೆಯ ಕಲಾವಿದರನ್ನು ಕರೆಸಿ ಕನ್ನಡಪರ ಕಾರ್ಯಕ್ರಮಗಳನ್ನು ನೀಡುವ ಮೂಲಕ ಹೆಸರು ಗಳಿಸಿದ್ದಾರೆ.

ಸಾಧಕ ಮಕ್ಕಳಿಗೆ ಪುರಸ್ಕಾರ, ಸಂಕಷ್ಟದಲ್ಲಿರುವವರಿಗೆ ಆರ್ಥಿಕ ನೆರವು ನೀಡುತ್ತಾ ತಮ್ಮ ಸಮಾಜಸೇವೆ ಮುಂದುವರೆಸಿಕೊAಡು ಬಂದಿರುವ ಪಲ್ಲವಿ ಮಣಿ ಅವರನ್ನು ದುಬೈನ ಯುಎಇಯ ಜನಿಸಿಸ್ ಅಲ್ಟಿಮಾ ಮತ್ತು ದುಬೈಯ ಸೇಂಟ್ ಸಾಂಸ್ಕöÈತಿಕ ಸಂಘಟನೆಯ ಪದಾಧಿಕಾರಿಗಳು ಆಹ್ವಾನಿಸಿದ್ದು, ಅಲ್ಲಿಯೂ ಕನ್ನಡದ ಕಂಪು ಹರಡುವಲ್ಲಿ ಪಲ್ಲವಿ ಮಣಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕಾರ್ಯಕ್ರಮ ವೇದಿಕೆಯಲ್ಲಿ ಗಣ್ಯರಾದ ದುಬೈ ಟ್ರೇಡ್ ಸೆಂಟರ್ ನಿರ್ದೇಶಕ ಈದ್ ಹುಷೈನ್ನಾನಿ, ಅಬುದಾಬಿ ಇಂಡಿಯಾ ಕಲ್ಚರಲ್ ಸೆಂಟರ್ ಮಾಜಿ ಗೌರವಾಧ್ಯಕ್ಷ ಜಯರಾಮ ರೈ ಮಿತ್ರಂಪಾಡಿ, ಅಂಬಾಸಿಡರ್ ಎಕ್ಸಾ÷್ಟç ಆರ್ಡಿನರಿ ಡಾ. ಓಮರ್ ಅಲ್ ಮೋರಾಕ್, ಯಾದಗಿರಿ ಯುವ ಸಮಾಜ ಸೇವಕ ಡಾ. ದೊಡ್ಡಪ್ಪ ಪೂಜಾರಿ ಹುಂಡೆಕಲ್, ಬೆಂಗಳೂರಿನ ವಕೀಲರಾದ ಅಮೂಲ್ಯ ಸುಜಿತ್ ಮತ್ತು ಚಿತ್ರನಟ ವಿನೀತ್ ಕುಮಾರ್ ಉಪಸ್ಥಿತರಿದ್ದರು.

ಸುವರ್ಣ ಸೌರಭ ಕಾರ್ಯಕ್ರಮಕ್ಕೆ ಗಲ್ಫ್ ನ ವಿವಿಧ ರಾಷ್ಟçಗಳಿಂದ ಸಾಧಕರು ಮತ್ತು ಗಣ್ಯರು ಆಗಮಿಸಿದ್ದರು. ಆರತಿ ಸುರೇಶ್ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಗಾಯತ್ರಿ ಮಹೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ : ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷ ಹಾಗೂ ಸಮಾಜಸೇವಕ ಪಲ್ಲವಿ ಮಣಿ ದಂಪತಿಗಳಿಗೆ ದುಬೈನಲ್ಲಿ ನಡೆದ ಸುವರ್ಣ ಸೌರಭ ಕಾರ್ಯಕ್ರಮದಲ್ಲಿ `ಗೋಲ್ಡನ್ ಕಪಲ್ ಅವಾರ್ಡ್' ಪ್ರದಾನ ಮಾಡಿ ಪುರಸ್ಕರಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande