ರಾಂಬನ್‌ನಲ್ಲಿ ಐದು ಬಸ್‌ಗಳ ಡಿಕ್ಕಿ – 36 ಅಮರನಾಥ ಯಾತ್ರಿಕರಿಗೆ ಗಾಯ
ರಾಂಬನ್, 05 ಜುಲೈ (ಹಿ.ಸ.) : ಆ್ಯಂಕರ್ : ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಚಂದ್ರಕೋಟ್ ಬಳಿ ಶನಿವಾರ ಬೆಳಗ್ಗೆ ಐದು ಬಸ್‌ಗಳು ಪರಸ್ಪರ ಡಿಕ್ಕಿಯಾಗಿದ್ದು, 36 ಅಮರನಾಥ ಯಾತ್ರಿಕರು ಗಾಯಗೊಂಡಿದ್ದಾರೆ. ಬಸ್‌ಗಳಲ್ಲಿ ಒಂದರ ಬ್ರೇಕ್ ವೈಫಲ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಬಸ್‌ಗಳು ಭಗವತಿ ನಗರದಿ
Accident


ರಾಂಬನ್, 05 ಜುಲೈ (ಹಿ.ಸ.) :

ಆ್ಯಂಕರ್ : ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಚಂದ್ರಕೋಟ್ ಬಳಿ ಶನಿವಾರ ಬೆಳಗ್ಗೆ ಐದು ಬಸ್‌ಗಳು ಪರಸ್ಪರ ಡಿಕ್ಕಿಯಾಗಿದ್ದು, 36 ಅಮರನಾಥ ಯಾತ್ರಿಕರು ಗಾಯಗೊಂಡಿದ್ದಾರೆ. ಬಸ್‌ಗಳಲ್ಲಿ ಒಂದರ ಬ್ರೇಕ್ ವೈಫಲ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಬಸ್‌ಗಳು ಭಗವತಿ ನಗರದಿಂದ ಪಹಲ್ಗಾಮ್ ಬೆಂಗಾವಲಿನ ಭಾಗವಾಗಿ ತೆರಳುತ್ತಿದ್ದವು. ಗಾಯಾಳುಗಳನ್ನು ರಾಂಬನ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಕ್ಷಣ ಚಿಕಿತ್ಸೆ ನೀಡಿ ಹೆಚ್ಚಿನ ಪ್ರಯಾಣಕ್ಕಾಗಿ ಅವರನ್ನು ಇತರ ವಾಹನಗಳಿಗೆ ಸ್ಥಳಾಂತರಿಸಲಾಗಿದೆ.

ಹಾನಿಗೊಂಡ ಬಸ್‌ಗಳನ್ನು ಬದಲಾಯಿಸಲಾಗಿದ್ದು, ಯಾತ್ರೆ ಮುಂದುವರೆದಿದೆ. ಇಂದು 6,979 ಯಾತ್ರಿಕರ ನಾಲ್ಕನೇ ತಂಡಕಾಶ್ಮೀರ ಕಣಿವೆಗೆ ಪ್ರಯಾಣ ಆರಂಭಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande