ಜಮ್ಮು, 05 ಜುಲೈ (ಹಿ.ಸ.) :
ಆ್ಯಂಕರ್ : ಭಾರಿ ಮಳೆಯ ನಡುವೆಯೂ ಅಮರನಾಥ ಯಾತ್ರೆ ಮುಂದುವರೆದಿದ್ದು, ಶನಿವಾರ ಮುಂಜಾನೆ 6,979 ಯಾತ್ರಿಕರ ಮತ್ತೊಂದು ತಂಡ ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ ಗುಹೆಯತ್ತ ಹೊರಟಿದೆ.
ಈ ತಂಡದಲ್ಲಿ 5,196 ಪುರುಷ, 1,427 ಮಹಿಳೆ, 24 ಮಕ್ಕಳು, ಸೇರಿದ್ದಾರೆ. ಬೆಳಗಿನ ಜಾವ 3.30ರಿಂದ 4.05ರ ನಡುವೆ ಪ್ರಾರಂಭವಾದ ಯಾತ್ರೆಗೆ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಎರಡು ಬೆಂಗಾವಲು ಪಡೆ ನಿಯೋಜಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa