ಕೋಲಾರ, ಜು.೦೪(ಹಿ.ಸ) :
ಆ್ಯಂಕರ್ : ರೋಟರಿ ಕ್ಲಬ್‌ಗೆ ಮುಂಬರುವ ದಿನಗಳಲ್ಲಿ ಮಹಿಳಾ ಸದಸ್ಯತ್ವಕ್ಕೆ ಆದ್ಯತೆ ನೀಡಬೇಕು ಎಂದು ನಿಯೋಜಿತ ಅಧ್ಯಕ್ಷೆ ರೋ. ಡಿ.ಜಿ ಹರಿಣಿ ರವೀಂದ್ರನಾಥ್ ಹೇಳಿದರು.
ನಗರದ ರೋಟರಿ ಭವನದಲ್ಲಿ ರೋಟರಿ ಕ್ಲಬ್‌ಗೆ ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಪುರುಷರಿಗೆ ಸಮಾನವಾಗಿ ನಾನಾ ಕ್ಷೇತ್ರಗಳಲ್ಲಿ ಮಹಿಳೆಯರು ಸಮಾನರಾಗಿದ್ದು, ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ನಲ್ಲಿ ಹೆಚ್ಚಾಗಿ ಪುರುಷರು ಸದಸ್ಯರಾಗಿದ್ದು, ಮಹಿಳಾ ಸದಸ್ಯರು ಇಲ್ಲದೆ ಇರುವುದು ಕಂಡು ಬಂದಿದ್ದು, ಮುಂದೆ ರೋಟರಿ ಕ್ಲಬ್‌ಗೆ ಮಹಿಳಾ ಸದಸ್ಯತ್ವದ ಅಗತ್ಯಬೇಕಾಗಿದೆ ಎಂದರು.
ರೋಟರಿ ಕ್ಲಬ್‌ನ ಕಾರ್ಯಕ್ರಮದಲ್ಲಿ ಪುರುಷರ ಸಂಖ್ಯೆಗಿAತಲೂ ಮಹಿಳೆಯರು ಸಂಖ್ಯೆ ತೀರಾ ಕಡಿಮೆ ಇರುವುದರಿಂದ ಮಹಿಳಾ ಸದಸ್ಯರನನ್ನು ಕ್ಲಬ್‌ಗೆ ಸೇರಿಸಿಕೊಳ್ಳಲು ಮುಂದಾಗಬೇಕೆAದರು.
ರೋಟರಿ ಕ್ಲಬ್‌ನಲ್ಲಿ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನಾನಾ ಯೋಜನೆಗಳ ರೂಪಿಸುವ ಚಿಂತನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
ರೋಟರಿ ಸಂಸ್ಥೆ ಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿದ್ದು ಅನೇಕ ಸೇವಾ ಚಟುವಟಿಕೆಗಳನ್ನು ಕೈಗೊಳ್ಳುತ್ತವೆ. ಅವುಗಳಲ್ಲಿ ಶಿಕ್ಷಣ, ಆರೋಗ್ಯ ಬಡತನ ನಿರ್ಮೂಲನೆ, ಮತ್ತು ಪರಿಸರ ಸಂರಕ್ಷಣೆ ಮುಂತಾದ ಕ್ಷೇತ್ರಗಳಿಗೆ ಒತ್ತು ನೀಡುವುದರ ಜೊತೆಗೆ ಬಡ ಮಕ್ಕಳ ಶಿಕ್ಷಣಕ್ಕೆ ಹಣಕಾಸಿನ ನೆರವು ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ೨೦೨೪-೨೫ ನೇ ಸಾಲಿನಲ್ಲಿ ರೋಟರಿ ಕ್ಲಬ್, ಕೋಲಾರ ೭ ಸ್ಟಾರ್ ಡೈಮಂಡ್ ಕ್ಲಬ್, ನಾಗಾನಂದ ಕೆಂಪರಾಜ್ ೭ ಸ್ಟಾರ್ ಡೈಮಂಡ್ ಅಧ್ಯಕ್ಷರಾಗಿ ಪ್ರಶಸ್ತಿ ಸ್ಬೀಕರಿಸಿರುವುದು ಕ್ಲಬ್‌ನ ಹೆಮ್ಮೆ ಅಭಿನಂದನೆಗಳು ತಿಳಿಸಿದರು.
ರೋಟರಿ ಸಂಸ್ಥೆ ನೂತನ ಅಧ್ಯಕ್ಷ ರೊಟೇರಿಯನ್ ಎಸ್.ಎಂ.ಚ0ದ್ರಶೇಖರ್ ಮಾತನಾಡಿ, ರೋಟರಿ ಸಂಸ್ಥೆಯ ಅಧ್ಯಕ್ಷರ ಅವಕಾಶ ಸಿಕ್ಕಿದ್ದು, ಅವಧಿಯಲ್ಲಿ ನಾನಾ ಯೋಜನೆಗಳನ್ನು ರೂಪಿಸಿಕೊಂಡು ಸಮಾಜದಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಮೊದಲಾದ್ಯತೆಯಾಗಿದೆ ಎಂದರು.
ರೋಟರಿ ಸಂಸ್ಥೆ ಒಂದು ಸೇವಾ ಸಂಸ್ಥೆಯಾಗಿದ್ದು ಇದರಲ್ಲಿ ಯಾವುದೇ ಲಾಭವನ್ನು ನಿರೀಕ್ಷಿಸದೇ ನಮ್ಮ ಆದಾಯದಲ್ಲಿ ಸಮಾಜಕ್ಕೆ ನಮ್ಮ ಕೈಲಾದ ಸೇವೆಯನ್ನು ಮಾಡುವ ಮನೋಭಾವ ಬೆಳಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ರೋಟರಿ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ನಾಗನಂದ ಕೆಂಪರಾಜ್ ಮಾತನಾಡಿ, ೮೭ ರೋಟರಿ ಕ್ಲಬ್‌ಗಳಲ್ಲಿ ಕೋಲಾರ ರೋಟರಿ ಕ್ಲಬ್ ೪ನೇ ಸ್ಥಾನಕ್ಕೆ ಬರಲು ರೋಟರಿ ಕ್ಲಬ್‌ನ ಸದಸ್ಯರ ಸಹಕಾರದಿಂದ ಸಾಧ್ಯವಾಗಿದೆ ಎಂದು ಹೇಳಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಕೋಲಾರ ರೋಟರಿ ಕ್ಲಬ್ ೭ ಸ್ಟಾರ್ ಡೈಮಂಡ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಮುಂದೆ ಪ್ಲಾಟಿನಂ ಪ್ರಶಸ್ತಿಯನ್ನು ಗಳಿಸಿಕೊಳ್ಳುವ ಮೂಲಕ ಪ್ಲಾಟಿನಂ ಸದಸ್ಯರಾಗೋಣ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್‌ನ ರೋಟೇರಿಯನ್‌ರಾದ ಬಿ.ಕೆ ದೇವರಾಜ, ಗೋಪಾಲ್‌ರೆಡ್ಡಿ ಕೆ, ಎಚ್ ರಾಮಚಂದ್ರಪ್ಪ, ಬಿ. ಶಿವಕುಮಾರ್, ಪ್ರಭಾಕರ್ ಎ.ಎಂ. ರಾಮನಾಥ್, ಶಂಕರ್ ಪ್ರಸಾದ್, ನಾಗರಾಜ್, ಚಂದ್ರಶೇಖರ್, ಜನಾರ್ದನ, ಬಿ.ಬೈಚಪ್ಪ, ಸಿ.ಆರ್ ಅಶೋಕ್, ಆರ್.ಅಶೋಕ್ ಕುಮಾರ್, ಶಂಕರಪ್ಪ ಭಾಗವಹಿಸಿದ್ದರು.
ಚಿತ್ರ : ಕೋಲಾರ ರೋಟರಿ ಕ್ಲಬ್ ಸದಸ್ಯರ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್