ಕೋಲಾರ, ಜು.೦೪ (ಹಿ.ಸ) :
ಆ್ಯಂಕರ್ : ಪಿಟೀಲು ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾದ ಕೋಲಾರ ನಗರದ ನಾದಸ್ವರ ವಿದ್ವಾನ್ ಆರ್. ಶ್ರೀರಾಮುಲು ಇಂದು ಮಧ್ಯಾನ್ಹ ೧-೩೦ ಗಂಟೆಯಲ್ಲಿ ಅವರ ಸ್ವಗೃಹದಲ್ಲಿ ನಿಧನರಾದರು.
ಶನಿವಾರ ರಂದು ಬೆಳಗ್ಗೆ ೧೧-೦೦ ಗಂಟೆಗೆ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ದುಃಖ ತಪ್ತ ಮಕ್ಕಳು ತಿಳಿಸಿದ್ದಾರೆ.
ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಗೆ ಶ್ರೀರಾಮುಲು ಭಾಜನರಾಗಿದ್ದರು. ಬಾಲ್ಯದಲ್ಲೇ ನಾದಸ್ವರ ಕಲಿತರು. ಕೋಲಾರ ಕೃಷ್ಣಮೂರ್ತಿ, ರಾಮರಾಯಲು, ಟಿ.ಆರ್. ಗಂಗಾಧರ0, ಕುಂಭಕೋಣ0 ಸ್ವಾಮಿ ಅಯ್ಯರ್ ಮುಂತಾದ ಗುರುಗಳ ಮಾರ್ಗದರ್ಶದಲ್ಲಿ ಸಂಗೀತ ಶಿಕ್ಷಣ ಪಡೆದರು. ಆ ನಂತರ ಸಭೆ-ಸಮಾರಂಭ-ಶುಭಕಾರ್ಯಗಳಲ್ಲಿ ನಾದಸ್ವರ ನುಡಿಸಿದರು.
ಕರ್ನಾಟಕದಾದ್ಯಂತ ಮಾತ್ರವಲ್ಲದೆ, ಕಾಣಿಪಾಕಂ, ಚಿತ್ತೂರು ಮುಂತಾದ ಹಲವಾರು ಹೊರರಾಜ್ಯಗಳಲ್ಲೂ ನಾದಸ್ವರ ಕಛೇರಿ ನೀಡಿದ ಹೆಗ್ಗಳಿಕೆ ಹೊಂದಿದ್ದರು.
ಚಿತ್ರ : ನಾದಸ್ವರ ವಿದ್ವಾನ್ ಶ್ರೀರಾಮುಲು
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್