ನ್ಯೂಜೆರ್ಸಿಯಲ್ಲಿ ಸ್ಕೈಡೈವಿಂಗ್ ವಿಮಾನ ಪತನ : 15 ಜನರಿಗೆ ಗಾಯ
ಟ್ರೆಂಟನ್, 03 ಜುಲೈ (ಹಿ.ಸ.) : ಆ್ಯಂಕರ್ : ಅಮೆರಿಕದ ನ್ಯೂಜೆರ್ಸಿ ರಾಜ್ಯದ ವಿಲಿಯಮ್ಸ್‌ಟೌನ್‌ನಲ್ಲಿ ಸ್ಕೈಡೈವಿಂಗ್ ವಿಮಾನ ಪತನಗೊಂಡಿದೆ. ಕ್ರಾಸ್ ಕೀಸ್ ವಿಮಾನ ನಿಲ್ದಾಣದ ಬಳಿ ಇರುವ ಟಕಹೋ ರಸ್ತೆಯ ದಟ್ಟ ಕಾಡಿನಲ್ಲಿ ಈ ಅಪಘಾತ ಸಂಭವಿಸಿದ್ದು, ವಿಮಾನದಲ್ಲಿದ್ದ 15 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನ
Crash


ಟ್ರೆಂಟನ್, 03 ಜುಲೈ (ಹಿ.ಸ.) :

ಆ್ಯಂಕರ್ : ಅಮೆರಿಕದ ನ್ಯೂಜೆರ್ಸಿ ರಾಜ್ಯದ ವಿಲಿಯಮ್ಸ್‌ಟೌನ್‌ನಲ್ಲಿ ಸ್ಕೈಡೈವಿಂಗ್ ವಿಮಾನ ಪತನಗೊಂಡಿದೆ. ಕ್ರಾಸ್ ಕೀಸ್ ವಿಮಾನ ನಿಲ್ದಾಣದ ಬಳಿ ಇರುವ ಟಕಹೋ ರಸ್ತೆಯ ದಟ್ಟ ಕಾಡಿನಲ್ಲಿ ಈ ಅಪಘಾತ ಸಂಭವಿಸಿದ್ದು, ವಿಮಾನದಲ್ಲಿದ್ದ 15 ಜನರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಕ್ಯಾಮ್ಡೆನ್‌ನ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳೀಯ ಗ್ಲೌಸೆಸ್ಟರ್ ಕೌಂಟಿ ತುರ್ತು ನಿರ್ವಹಣಾ ಇಲಾಖೆಯು ಈ ಮಾಹಿತಿ ನೀಡಿದ್ದು, ಅಪಘಾತದ ತನಿಖೆ ಮುಂದುವರಿದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande