ಒಟ್ಟಾವಾ, 30 ಜೂನ್ (ಹಿ.ಸ.) :
ಆ್ಯಂಕರ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ವ್ಯಾಪಾರ ಸಂಬಂಧಿತ ಬೆದರಿಕೆಯ ಬೆನ್ನಲ್ಲೇ, ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಡಿಜಿಟಲ್ ಸೇವಾ ತೆರಿಗೆಯನ್ನು ರದ್ದುಗೊಳಿಸಿದ್ದಾರೆ.
ಈ ತೆರಿಗೆ ಅಡಿಯಲ್ಲಿ ಗೂಗಲ್, ಅಮೆಜಾನ್, ಮೆಟಾ, ಉಬರ್ ಸೇರಿದಂತೆ ಅಮೆರಿಕನ್ ಕಂಪನಿಗಳು ಶೇಕಡಾ 3ರಷ್ಟು ತೆರಿಗೆ ಪಾವತಿಸಬೇಕಿತ್ತು. ಆದಾಯದ ಮೇಲೆ ಎರಡು ಬಿಲಿಯನ್ ಡಾಲರ್ ತೆರಿಗೆ ಬಾಧೆಯಾಗುತ್ತಿದ್ದ ಕಾರಣ, ಅಮೆರಿಕವು ವ್ಯಾಪಾರ ಮಾತುಕತೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿತ್ತು.
ಪಾವತಿಯ ಮುಂಚೆ ದಿನವೇ ತೆರಿಗೆಯನ್ನು ರದ್ದುಗೊಳಿಸಿ, ಯುಎಸ್‌ನೊಂದಿಗೆ ಆರ್ಥಿಕ ಮತ್ತು ಭದ್ರತಾ ಮಾತುಕತೆ ಪುನರಾರಂಭಕ್ಕೆ ಮಾರ್ಗ ತೆರೆದಿದ್ದಾರೆ.
ಜುಲೈ 21ರಂದು ನಡೆಯಲಿರುವ ಜಿ-7 ಶೃಂಗಸಭೆಗೆ ಈ ನಿರ್ಧಾರ ಪ್ರಮುಖ ಭೂಮಿಕೆ ಒದಗಿಸಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa