ಭಾರತ-ಘಾನಾ ಸಂಬಂಧಗಳು ಹೊಸ ಎತ್ತರಕ್ಕೆ: ಪ್ರಧಾನಿ
ಅಕ್ರಾ, 03 ಜುಲೈ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ ಘಾನಾ ಭೇಟಿಯ ವೇಳೆ ಭಾರತ-ಘಾನಾ ಸಂಬಂಧಗಳು ಸಮಗ್ರ ಪಾಲುದಾರಿಕೆ ಹಂತವನ್ನು ತಲುಪಿದವು. ಭಾರತ ಮತ್ತು ಘಾನಾ ನಡುವಿನ ಸಹಕಾರವನ್ನು ವ್ಯಾಪಾರ, ಆರೋಗ್ಯ, ಡಿಜಿಟಲ್ ತಂತ್ರಜ್ಞಾನ, ರಕ್ಷಣಾ ಭದ್ರತೆ, ಇಂಧನ ಮತ್ತು ಕೌಶಲ್ಯಾಭಿವೃದ
Pm


ಅಕ್ರಾ, 03 ಜುಲೈ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ ಘಾನಾ ಭೇಟಿಯ ವೇಳೆ ಭಾರತ-ಘಾನಾ ಸಂಬಂಧಗಳು ಸಮಗ್ರ ಪಾಲುದಾರಿಕೆ ಹಂತವನ್ನು ತಲುಪಿದವು. ಭಾರತ ಮತ್ತು ಘಾನಾ ನಡುವಿನ ಸಹಕಾರವನ್ನು ವ್ಯಾಪಾರ, ಆರೋಗ್ಯ, ಡಿಜಿಟಲ್ ತಂತ್ರಜ್ಞಾನ, ರಕ್ಷಣಾ ಭದ್ರತೆ, ಇಂಧನ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ವಿಸ್ತರಿಸಲು ನಾಲ್ಕು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಯಿತು.

ಈ ವೇಳೆ ಪ್ರಧಾನಿಗೆ ಘಾನಾದ ಅತ್ಯುನ್ನತ ನಾಗರಿಕ ಗೌರವವಾದ ಆರ್ಡರ್ ಆಫ್ ದಿ ಸ್ಟಾರ್ ಆಫ್ ಘಾನಾ ಪ್ರದಾನ ಮಾಡಲಾಯಿತು

ಉನ್ನತ ಮಟ್ಟದ ಸಭೆಯಲ್ಲಿ ಘಾನಾ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮಾ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಿದರು. ಡಿಜಿಟಲ್ ಪಾವತಿ ಲಸಿಕೆ ಉತ್ಪಾದನೆ, ಜನ ಔಷಧಿ, ಸಂಶೋಧನೆ, ಸಾಂಸ್ಕೃತಿಕ ವಿನಿಮಯ, ಸಮುದ್ರ ಮತ್ತು ಸೈಬರ್ ಭದ್ರತೆ ಮೊದಲಾದ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಒಪ್ಪಂದ ಮಾಡಿಕೊಳ್ಳಲಾಯಿತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande