ಬೆಂಗಳೂರು, 02 ಜುಲೈ (ಹಿ.ಸ.) :
ಆ್ಯಂಕರ್ : ಪಾಕಿಸ್ತಾನ, ಉಗ್ರರನ್ನು ಪೋಷಿಸುವ ದೇಶ. ಅಂತಹ ದೇಶಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧ್ಯಕ್ಷತೆ ವಹಿಸುವ ಅವಕಾಶ ಸಿಕ್ಕಿರುವುದು ಗಂಭೀರ ವಿಚಾರ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಣದೀಪ್ ಸುರ್ಜೇವಾಲ ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದೊಂದು ಗಂಭೀರ ವಿಚಾರ. ಪಾಕಿಸ್ತಾನಕ್ಕೆ ಅವಕಾಶ ತಪ್ಪಿಸುವಲ್ಲಿ ಪ್ರಧಾನಿ ಮೋದಿ ಎಡವಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಹಲವು ದೇಶಗಳಿಗೆ ಪ್ರವಾಸ ಮಾಡಿ ಸುಮಾರು ಎಂಟು ಸಾವಿರ ಕೋಟಿ ರೂ. ಖರ್ಚು ಮಾಡಿದ್ದಾರೆ. ಎಲ್ಲಾ ದೇಶಗಳ ರಾಜಧಾನಿಗೆ ಭೇಟಿ ನೀಡಿದ್ದಾರೆ. ಇಷ್ಟಾದರೂ ಯಾವ ದೇಶಗಳ ಸಹಕಾರ ಪಡೆದಿದ್ದಾರೆ? ಎಂದು ವಾಗ್ದಾಳಿ ನಡೆಸಿದರು.
ಉಗ್ರರನ್ನು ಬೆಂಬಲಿಸುವ ಪಾಕಿಸ್ತಾನಕ್ಕೆ ಅವಕಾಶ ಸಿಕ್ಕಿದ್ದೇಗೆ?, ಇದನ್ನು ಪ್ರಧಾನಿ ನರೇಂದ್ರ ಮೋದಿ, ಜೈಶಂಕರ್ ಯಾಕೆ ತಪ್ಪಿಸಲಿಲ್ಲ?. ಅವಕಾಶ ತಪ್ಪಿಸುವ ಶಕ್ತಿ ಅವರಿಗೆ ಇಲ್ಲವಾಗಿದೆಯೇ?, ಇಷ್ಟು ವಿದೇಶ ಪ್ರವಾಸ ಮಾಡಿದ್ದರ ಫಲವೇನು ಎಂದು ಪ್ರಶ್ನಿಸಿದ್ದಾರೆ.
ಪಹಲ್ಗಾಮ್ ದಾಳಿ ನಡೆಯಿತು. ಪಾಕಿಸ್ತಾನಕ್ಕೆ ಬೇರೆ ದೇಶಗಳು ಬೆಂಬಲ ನೀಡಿದವು. ಆದರೆ ಭಾರತಕ್ಕೆ ಯಾವ ದೇಶ ಬೆಂಬಲ ಕೊಟ್ಟಿದೆ?, ನಮ್ಮ ಅಕ್ಕಪಕ್ಕದ ರಾಷ್ಟ್ರಗಳೂ ಸಹ ಬೆಂಬಲಕ್ಕೆ ಬರಲಿಲ್ಲ. ಯುಪಿಎ ಸರಕಾರದ ಅವದಿಯಲ್ಲಿ ಅಕ್ಕಪಕ್ಕದ ರಾಷ್ಟ್ರಗಳ ಜೊತೆ ಉತ್ತಮ ಬಾಂಧವ್ಯ ಇತ್ತು. ಶ್ರೀಲಂಕಾ, ಬಾಂಗ್ಲಾ, ನೇಪಾಳ ಜೊತೆ ಬಾಂಧವ್ಯವಿತ್ತು. ಅವರು ಆಗ ಸಹಕಾರ ಕೊಡುತ್ತಿದ್ದರು. ಆದರೆ ಪಹಲ್ಗಾಮ್ ದಾಳಿ ವೇಳೆ ಯಾರೂ ಬೆಂಬಲಕ್ಕೆ ಬರಲಿಲ್ಲ. ಉಗ್ರವಾದವನ್ನು ಖಂಡಿಸಲಿಲ್ಲ ಎಂದು ಸುರ್ಜೇವಾಲ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa