ಹರಿಕಥಾ ವಿದ್ವಾನ್ ಜ್ಞಾನಮೂರ್ತಿ ನಿಧನ
ಹರಿಕಥಾ ವಿದ್ವಾನ್ ಜ್ಞಾನಮೂರ್ತಿ ನಿಧನ
ಚಿತ್ರ. ಹರಿಕಥಾ ವಿದ್ವಾನ್ ಜ್ಞಾನ ಮೂರ್ತಿ .


ಕೋಲಾರ, 28 ಜುಲೈ (ಹಿ.ಸ.) :

ಆ್ಯಂಕರ್ : ಅನಾರೋಗ್ಯದಿಂದ ನರಳುತ್ತಿದ್ದ ಹರಿಕಥಾ ವಿದ್ವಾನ್ ಜ್ಞಾನಮೂರ್ತಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಎಪ್ಪತ್ತೈದು ವರ್ಷ ವಯಸಾಗಿತ್ತು. ಕೋಲಾರ ತಾಲ್ಲೂಕಿನ ರಾಮಸಂದ್ರ ಗ್ರಾಮದಲ್ಲಿ ಜನಿಸಿದ ಜ್ಞಾನಮೂರ್ತಿ ಕೋಲಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಕನ್ನಡ ರಾಜ್ಯೋತ್ಸವ , ಕೆಂಪೇ ಗೌಡ ಪ್ರಶಸ್ತಿ ಸೇರಿದಂತೆ ೨೭ ಪ್ರಶಸ್ತಿಗಳನ್ನು ಜ್ಞಾನ ಮೂರ್ತಿ ಪಡೆದಿದ್ದರು. ಜ್ಞಾನ ಮೂರ್ತಿಯವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಕೋಲಾರದ ಬಯಲು ಬಸವೇಶ್ವರ ದೇವಾಲಯದಲ್ಲಿ ಇರಿಸಲಾಗಿತ್ತು.ರಾಜ್ಯ ಶರಣ ಸಾಹಿತ್ಯ ಪರಿಶತ್ ರಾಜ್ಯಧ್ಯಕ್ಷ ಸೋಮ ಶೇಖರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ಧೇಶಕ ಬಲವಂತ ರಾವ್ ಪಾಟೀಲ್ ಸಹಾಯಕ ನಿರ್ದೇಶಕ ನರೇಂದ್ರ ಬಾಬು ,ನಿವೃತ್ತ ಅಧಿಕಾರಿ ಬಾವಿ ಕಟ್ಟಿ ಕೋಲಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಗೌರವ ಅಧ್ಯಕ್ಷ ಬಿ.ಎಂ. ಚನ್ನಪ್ಪ ಸೇರಿದಂತೆ ಗಣ್ಯರು ಮೃತರ ಅಂತಿಮ ದರ್ಶನ ಪಡೆದರು. ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಹೆಚ್. ಮುನಿಪ್ಪ ರಾಮಸಂದ್ರ ಗ್ರಾಮಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು.

ಚಿತ್ರ. ಹರಿಕಥಾ ವಿದ್ವಾನ್ ಜ್ಞಾನ ಮೂರ್ತಿ .

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande