ಸವಿತಾ ಸಮಾಜದ ವಧು- ವರರ ಸಮಾವೇಶ ಯಶಸ್ವಿ
ಹೊಸಪೇಟೆ, 28 ಜುಲೈ (ಹಿ.ಸ.) : ಆ್ಯಂಕರ್ : ಮ್ಯಾರೇಜ್ ಬೋಕರ್‌ಗಳ ಸುಲಿಗೆ ತಪ್ಪಿಸುವುದು, ಉತ್ತಮ ಸಂಬಂಧಗಳನ್ನು ಬೆಸೆಯುವುದು, ಪೋಷಕರ ಹಣ, ಸಮಯ ಉಳಿತಾಯಕ್ಕೆ ವಧು- ವರರ ಸಮಾವೇಶ ಸಹಕಾರಿಯಾಗಲಿದೆ ಎಂದು ಹೊಸಪೇಟೆ ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್ ಅಭಿಪ್ರಾಯಪಟ್ಟರು. ಹೊಸಪೇಟೆ ನಗರ ಸವಿತಾ ಸಮಾಜ,
Savita Samaj's bride and groom convention a success


Savita Samaj's bride and groom convention a success


ಹೊಸಪೇಟೆ, 28 ಜುಲೈ (ಹಿ.ಸ.) :

ಆ್ಯಂಕರ್ : ಮ್ಯಾರೇಜ್ ಬೋಕರ್‌ಗಳ ಸುಲಿಗೆ ತಪ್ಪಿಸುವುದು, ಉತ್ತಮ ಸಂಬಂಧಗಳನ್ನು ಬೆಸೆಯುವುದು, ಪೋಷಕರ ಹಣ, ಸಮಯ ಉಳಿತಾಯಕ್ಕೆ ವಧು- ವರರ ಸಮಾವೇಶ ಸಹಕಾರಿಯಾಗಲಿದೆ ಎಂದು ಹೊಸಪೇಟೆ ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್ ಅಭಿಪ್ರಾಯಪಟ್ಟರು.

ಹೊಸಪೇಟೆ ನಗರ ಸವಿತಾ ಸಮಾಜ, ದಾವಣಗೆರೆ ಸವಿತಾ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಹೊಸಪೇಟೆ ನಗರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಅಂತಾರಾಜ್ಯ ಮಟ್ಟದ ಸವಿತಾ ಸಮಾಜದ ವದುವರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ

ದರು.

ಇತ್ತೀಚಿನ ವರ್ಷಗಳಲ್ಲಿ ಸವಿತಾ ಸಮಾಜದ ಯುವಕರು ಸಾಂಪ್ರದಾಯಿಕ ಕುಲವೃತ್ತಿಗೆ ಸೀಮಿತವಾಗಿಲ್ಲ. ಶೈಕ್ಷಣಿಕವಾಗಿ ದಾಪುಗಾಲು ಹಾಕುತ್ತಿದ್ದಾರೆ. ಇಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಉದ್ಯೋಗ, ವ್ಯಾಪಾರದಲ್ಲಿ ತೊಡಗಿದ್ದಾರೆ. ಅದರಲ್ಲೂ ಯುವತಿಯರು ಹೆಚ್ಚಿನ ಸಂಖ್ಯೆ ಯಲ್ಲಿ ಸಾಫ್ಟವೇರ್ ಕ್ಷೇತ್ರದಲ್ಲಿರುವುದು ಸಂತಸದ ವಿಷಯ. ಆದರೆ, ಮದುವೆ ವಿಚಾರ ಬಂದಾಗ ಇತ್ತೀಚೆಗೆ ಯುವ ಜನರಲ್ಲಿ ಬೇಕು, ಬೇಡಿಕೆಗಳು ಹೆಚ್ಚುತ್ತಿದ್ದು, ಮದುವೆ ವಿಳಂಬಕ್ಕೆ ಕಾರಣವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಮದುವೆ ಪ್ರತಿಯೊಬ್ಬರ ಜೀವನದ ಬಹುಮುಖ್ಯ ಹಂತ. ಸೂಕ್ತ ಸಮಯದಲ್ಲಿ ಒಳ್ಳೆಯ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದಾವಣಗೆರೆ ಸವಿತಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೆಂಕಟಾಚಲಪತಿ ಪಿ.ಬಿ. ಮಾತನಾಡಿ, ಮದುವೆಗೆ ಉತ್ತಮ ಸಂಗಾತಿ ಹುಡುಕಿಕೊಳ್ಳುವುದು ಅತಿ ಅವಶ್ಯಕ. ಆದರೆ, ಮದುವೆ ಬ್ರೋಕರ್‌ಗಳು ಇದನ್ನೇ ಬಂಡವಾಳ ಮಾಡಿಕೊಂಡು ಸುಲಿಗೆ ಮಾಡುತ್ತಾರೆ. ಜೊತೆಗೆ ಸುಳ್ಳು ಹೇಳಿ ಸಂಬಂಧ ಕುದುರಿಸುತ್ತಾರೆ. ಇದನ್ನು ತಪ್ಪಿಸಲು ವಧು-ವರರ ಸಮಾವೇಶ ಸಹಕಾರಿಯಾಗಿದೆ ಎಂದರು.

ಸವಿತಾ ಸ್ವಯಂ ವರ ಉಚಿತ ವೇದಿಕೆಯಿಂದ ಕಳೆದ 9 ವರ್ಷಗಳಲ್ಲಿ ಸುಮಾರು 1 ಸಾವಿರಕ್ಕೂ ಹೆಚ್ಚು ಮದುವೆಗಳು ನಿಶ್ಚಯವಾಗಿವೆ. ಈ ಹಿಂದೆ ದಾವಣಗೆರೆಯಲ್ಲಿ ಆಯೋಜಿಸಿದ್ದ ಸ್ವಯಂ ವರ ಸಮಾವೇಶದಲ್ಲಿ 150, ಬೆಂಗಳೂರಿನ ಸಮಾವೇಶದಲ್ಲಿ 250 ಕ್ಕೂ ಹೆಚ್ಚು ವಧು- ವರರು ಪಾಲ್ಗೊಂಡಿದ್ದು ಹೆಮ್ಮೆಯ ಸಂಗತಿ ಎಂದರು.

ವೇದಿಕೆ ಮೇಲೆ ನಿವೃತ್ತ ಶಿಕ್ಷಕ ನಾಗೇಶ್, ನಿವೃತ್ತ ಎಎಸ್‌ಐ ಶ್ರೀನಿವಾಸ, ಸಾರಿಗೆ ಇಲಾಖೆ ನಿವೃತ್ತ ನೌಕರ ಮನೋಹರ್ ಕುಮಾರ್, ಅಬಕಾರಿ ಇಲಾಖೆಯ ನಿವೃತ್ತ ನೌಕರ ರಾಮಲಿಂಗಪ್ಪ, ನಾರಾಯಣ ಹಡಪದ, ಹೊಸಪೇಟೆ ಟೌನ್ ಸ್ಟೇಷನ್ ಎಎಸ್‌ಐ ಎಂ.ಸುರೇಶ್, ರಾಯಚೂರು ಸವಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ನಾಗರಾಜ್, ಸವಿತಾ ಸಮಾಜದ ರಾಯಚೂರು ಜಿಲ್ಲಾಧ್ಯಕ್ಷ ವಿಜಯ ಭಾಸ್ಕರ್ ಇಟಗಿ, ಹೊಸಪೇಟೆ ಸಮಾಜದ ಪ್ರಮುಖರಾದ ಎನ್.ವೇಣುಗೋಪಾಲ, ಗುರುರಾಜ್ ಹೊಸಪೇಟೆ, ಡಾ.ರಾಘವೇಂದ್ರ ಗುರ್ಜಾಲ, ಕೃಷ್ಣ ಹಡಪದ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande