ಕಮ್ಯುನಿಟಿ ಮೊಬಲೈಜರ್ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ
ಹೊಸಪೇಟೆ, 28 ಜುಲೈ (ಹಿ.ಸ.) : ಆ್ಯಂಕರ್ : ಜಿಲ್ಲೆಯ ಹೊಸಪೇಟೆ ನಗರಸಭೆಯಲ್ಲಿ 11 ಹುದ್ದೆ, ಹರಪನಹಳ್ಳಿ ಪುರಸಭೆಯಲ್ಲಿ 02 ಹುದ್ದೆ ಹಗರಿಬೊಮ್ಮನಹಳ್ಳಿ ಪುರಸಭೆ 04 ಹುದ್ದೆ ಮತ್ತು ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ 01 ಹುದ್ದೆಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛ ಭಾರತ್ ಮಿಷನ್ 2.0
ಕಮ್ಯುನಿಟಿ ಮೊಬಲೈಜರ್ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ


ಹೊಸಪೇಟೆ, 28 ಜುಲೈ (ಹಿ.ಸ.) :

ಆ್ಯಂಕರ್ : ಜಿಲ್ಲೆಯ ಹೊಸಪೇಟೆ ನಗರಸಭೆಯಲ್ಲಿ 11 ಹುದ್ದೆ, ಹರಪನಹಳ್ಳಿ ಪುರಸಭೆಯಲ್ಲಿ 02 ಹುದ್ದೆ ಹಗರಿಬೊಮ್ಮನಹಳ್ಳಿ ಪುರಸಭೆ 04 ಹುದ್ದೆ ಮತ್ತು ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ 01 ಹುದ್ದೆಗೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಡಿಯಲ್ಲಿ ಐಇಸಿ ಚಟುವಟಿಕೆಗಳ ನಿರ್ವಹಣೆಗೆ ಸ್ವಸಹಾಯ ಮಹಿಳಾ ಸಂಘದ ಸದಸ್ಯರನ್ನು ಕಮ್ಯುನಿಟಿ ಮೊಬಲೈಜರ್ ಹುದ್ದೆಗೆ ಅಸಕ್ತ ಮಹಿಳಾ ಸದಸ್ಯರಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.

ಜಿಲ್ಲೆಯ ಹೊಸಪೇಟೆ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ ಮತ್ತು ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಲ್ಮ್-ಡೇ ಯೋಜನೆಯಡಿ ನೋಂದಾಯಿತ ಸ್ವಸಹಾಯ ಮಹಿಳಾ ಗುಂಪು ಸದಸ್ಯರಿಂದ ಮೂರು ವರ್ಷಗಳ ಪೂರ್ಣಾವಧಿಗೆ ಐಇಸಿ ಚಟುವಟಿಕೆಗಳನ್ನು ನಿರ್ವಹಿಸಲು ಆಸಕ್ತಿ ಹೊಂದಿರುವ ‘ಕಮ್ಯುನಿಟಿ ಮೊಬಲೈಜರ್’ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಮತ್ತು ಗೌರವಧನ ಇತರೆ ಮಾಹಿತಿಗಾಗಿ ಆಯಾ ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳನ್ನು ಸಂಪರ್ಕಿಸಿ, ಕಚೇರಿಯಲ್ಲಿ ಲಭ್ಯವಿರುವ ನಿಗಧಿತ ಅರ್ಜಿ ನಮೂನೆಯೊಂದಿಗೆ ಗುರುತಿನ ಪುರಾವೆ ವಿಳಾಸದ ಪುರಾವೆ, ನಲ್ಮ್-ಡೇ ಅಡಿ ಮಹಿಳಾ ಸ್ವಸಹಾಯ ಗುಂಪು ನೋಂದಾಯಿಸಿಕೊಂಡಿರುವ ದಾಖಲೆಗಳು, 10 ನೇ ತರಗತಿ ಉತೀರ್ಣವಾಗಿರುವ ಶೈಕ್ಷಣಿಕ ಅರ್ಹತೆ ದಾಖಲಾತಿಗಳು, ನಲ್ಮ್-ಡೇ ರಿಂದ ಹಿಂಬರಹದ ನಮೂನೆಗಳನ್ನು ಲಗತ್ತಿಸಿ ಆಗಸ್ಟ್ 1 ರ ಸಂಜೆ 5 ಗಂಟೆಯೊಳಗೆ ಖುದ್ದಾಗಿ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳ ಆಸಕ್ತಿ, ಜ್ಞಾನ ಕೌಶಲ್ಯ, ಮಾಹಿತಿಯ ಕುರಿತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆಯಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande