ಹೋಟೆಲ್ ಮ್ಯಾನೆಜ್ ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ
ಹೊಸಪೇಟೆ, 28 ಜುಲೈ (ಹಿ.ಸ.) : ಆ್ಯಂಕರ್ : 2025-26ನೇ ಸಾಲಿನ ವಸತಿಯುತ ಇನ್ ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನ್ವೇಜ್‍ಮೆಂಟ್ ವತಿಯಿಂದ ಹೋಟೆಲ್ ಮ್ಯಾನೆಜ್‍ಮೆಂಟ್ ವೃತ್ತಿಪರ ತರಬೇತಿಯನ್ನು ಬೆಂಗಳೂರಲ್ಲಿ ನೀಡಲಾಗುತ್ತಿದ್ದು, ತರಬೇತಿಗೆ https://sevasindhu.karnataka.gov.in ಈ ಲಿಂಕ್ ಮೂಲಕ ಆ
ಹೋಟೆಲ್ ಮ್ಯಾನೆಜ್ ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ


ಹೊಸಪೇಟೆ, 28 ಜುಲೈ (ಹಿ.ಸ.) :

ಆ್ಯಂಕರ್ : 2025-26ನೇ ಸಾಲಿನ ವಸತಿಯುತ ಇನ್ ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನ್ವೇಜ್‍ಮೆಂಟ್ ವತಿಯಿಂದ ಹೋಟೆಲ್ ಮ್ಯಾನೆಜ್‍ಮೆಂಟ್ ವೃತ್ತಿಪರ ತರಬೇತಿಯನ್ನು ಬೆಂಗಳೂರಲ್ಲಿ ನೀಡಲಾಗುತ್ತಿದ್ದು, ತರಬೇತಿಗೆ https://sevasindhu.karnataka.gov.in ಈ ಲಿಂಕ್ ಮೂಲಕ ಆನ್ ಲೈನ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಆಗಷ್ಟ್.21 ಕೊನೆಯ ದಿನಾಂಕವಾಗಿದ್ದು, ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ) ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರಿಯಲ್ಲಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಕೋರ್ಸ್ ಪೂರ್ಣ ಕಾಲಿಕವಾಗಿರತಕ್ಕದ್ದು, ವಿದ್ಯಾರ್ಥಿಯ ಕುಟುಂಬ ವಾರ್ಷಿಕ ಆದಾಯವು ರೂ.8 ಲಕ್ಷಗಳನ್ನು ಮೀರಿರಬಾರದು. ಕನಿಷ್ಠ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಗರಿಷ್ಠ ವಯೋಮಿತಿ 35 ವರ್ಷ ಮೀರಬಾರದು.

ಹೆಚ್ಚಿನ ಮಾಹಿತಿಗಾಗಿ http://dom.karnataka.gov.in ವೆಬ್ ಸೈಟ್ ನ್ನು ವೀಕ್ಷಿಸಿ, ಮಾಹಿತಿಗಾಗಿ ಜಿಲ್ಲಾ ಕಛೇರಿ ಮತ್ತು ಜಿಲ್ಲಾ ಹಾಗೂ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಿಗೆ ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ: ಹೆಲ್ಪ್‍ಡೆಸ್ಕ್-8277799990 (24/7), 8050435366, 9980237242, 7353696984, 849492781 ಸಂಪರ್ಕಿಸಬೇಕೆಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande