ವಿಜಯಪುರ, 28 ಜುಲೈ (ಹಿ.ಸ.) :
ಆ್ಯಂಕರ್ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯುಗ ಮುಗಿದಿದೆ ಎಂದು ಯಡಿಯೂರಪ್ಪ ಕುಟುಂಬದ ವಿರುದ್ಧ ಶಾಸಕ ಯತ್ನಾಳ ಕಿಡಿಕಾರಿದರು.
ವಿಜಯಪುರ ನಗರದಲ್ಲಿ ಮಾಧ್ಯಮದ ಎದುರು ಮಾತನಾಡಿದ ಅವರು, ನಾನು ಇದ್ದಾಗ ವಿಜಯಪುರಕ್ಕೆ ವಿಜಯೇಂದ್ರ ಬರಲಿಲ್ಲ. ಇದೀಗ ಇಲ್ಲಿಗೆ ಬಂದು ಏನ್ ಮಾಡ್ತಾನೆ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿ ಸ್ಥಾನ ಕೈ ಬಿಟ್ಟಿದಕ್ಕೆ ಖರ್ಗೆ ಅಸಮಾಧಾನಕ್ಕೆ ಯತ್ನಾಳ ಪ್ರತಿಕ್ರಿಯೆ ನೀಡಿದ್ದು, ಖರ್ಗೆ ಅವರು ಹಿಂದೆಯೇ ಮುಖ್ಯಮಂತ್ರಿ ಸ್ಥಾನ ಸಿಗಬೇಕಿತ್ತು. ಎರಡನೇ ಭಾರಿ ಸಿದ್ದರಾಮಯ್ಯ ಆಗುವ ಬದಲು ಖರ್ಗೆ ಅವರಿಗೆ ನೀಡಬೇಕಿತ್ತು. ಈಗಲೂ ಮುಖ್ಯಮಂತ್ರಿ ಬದಲಾವಣೆ ಆದ್ರೆ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಖರ್ಗೆ ಪರ ಯತ್ನಾಳ ವಕಾಲತ್ತು ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande