ಜು.೨೮ರಂದು ಧಾರವಾಡ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ
ಧಾರವಾಡ, 26 ಜುಲೈ (ಹಿ.ಸ.) : ಆ್ಯಂಕರ್ : ಕರ್ನಾಟಕ ಲೋಕಾಯುಕ್ತ, ಪೋಲೀಸ್ ಇಲಾಖೆಯ ಧಾರವಾಡ ಅಧಿಕಾರಿಗಳು ಜುಲೈ 28, 2025 ರಂದು ಅಣ್ಣಿಗೇರಿ ತಾಲೂಕು ಪುರಸಭೆ ಸಭಾಭವನದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರಿಂದ ದೂರು, ಅಹವಾಲು ಸ್ವೀಕರಿಸಲಿದ್ದಾರೆ. ಯಾವುದೇ ಸರಕಾರಿ ಅ
ಜು.೨೮ರಂದು ಧಾರವಾಡ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ


ಧಾರವಾಡ, 26 ಜುಲೈ (ಹಿ.ಸ.) :

ಆ್ಯಂಕರ್ : ಕರ್ನಾಟಕ ಲೋಕಾಯುಕ್ತ, ಪೋಲೀಸ್ ಇಲಾಖೆಯ ಧಾರವಾಡ ಅಧಿಕಾರಿಗಳು ಜುಲೈ 28, 2025 ರಂದು ಅಣ್ಣಿಗೇರಿ ತಾಲೂಕು ಪುರಸಭೆ ಸಭಾಭವನದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರಿಂದ ದೂರು, ಅಹವಾಲು ಸ್ವೀಕರಿಸಲಿದ್ದಾರೆ.

ಯಾವುದೇ ಸರಕಾರಿ ಅಧಿಕಾರಿ, ನೌಕರರು ಸರ್ಕಾರಿ ಸೇವೆ ಒದಗಿಸುವಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಲ್ಲಿ, ಅನಾವಶ್ಯಕ ವಿಳಂಬ ಮಾಡುತ್ತಿದ್ದಲ್ಲಿ, ಯಾವುದಾದರು ಸರ್ಕಾರಿ ಭೂಮಿಗಳ ಒತ್ತುವರಿಯಾಗಿದ್ದಲ್ಲಿ, ಕಾಮಗಾರಿಗಳಲ್ಲಿ ಅಕ್ರಮ ಅಥವಾ ಕಳಪೆ ಕಾರ್ಯ ನಡೆದಿದ್ದಲ್ಲಿ ಈ ಸಂದರ್ಭದಲ್ಲಿ ದೂರ ನೀಡಬಹುದು ಎಂದು ಕರ್ನಾಟಕ ಲೋಕಾಯುಕ್ತ ಪೋಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande