ಗದಗ, 26 ಜುಲೈ (ಹಿ.ಸ.) :
ಆ್ಯಂಕರ್ : ದೇಶ-ವಿದೇಶಗಳಲ್ಲಿ ಭಾವೈಕ್ಯತೆಯ ಕೇಂದ್ರವೆಂದು ಪ್ರಸಿದ್ದಿಯಾಗಿರುವ ಲಕ್ಷೇಶ್ವರ ಪಟ್ಟಣದ ದೂದಪೀರಾಂ ದರ್ಗಾ ಅಭಿವೃದ್ಧಿಗೆ ವಕ್ಸ್ ಮಂಡಳಿಯಿಂದ ಹಾಗೂ ಸರಕಾರದಿಂದ ಅವಶ್ಯವಿರುವ ಎಲ್ಲ ನೆರವುಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ರಾಜ್ಯ ವಕ್ಸ್ ಬೋರ್ಡ್ ಮಂಡಳಿ ಅಧ್ಯಕ್ಷ ಹಾಪೀಜ್ ಸೈಯದ್ ಮೊಹಮ್ಮದ ಅಲಿ ಅಲ್ ಹುಸೈನಿ ಭರವಸೆ ನೀಡಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ದೂದಪೀರಾಂ ದರ್ಗಾದ ಶಾದಿಮಹಲ್‌ನಲ್ಲಿ ರಾಜ್ಯ ವಕ್ಸ್ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಟ್ಟಣದ ದೂದಪೀರಾಂ ದರ್ಗಾ ಕಮಿಟಿ ಮತ್ತು ಅಂಜುಮನ್ ಎ-ಇಸ್ಲಾಂ ಕಮಿಟಿಯವರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದರ್ಗಾಕ್ಕೆ ತನ್ನದೇ ಆದ ವೈಶಿಷ್ಟ್ಯತೆಯಿದೆ. ದರ್ಗಾಗಳಲ್ಲಿ, ಮುತ್ತುವಲ್ಲಿಗಳಾಗಲಿ, ಕಮಿಟಿಗಳಾಗಲಿ ಎಲ್ಲಿಯೇ ಕಾರ್ಯ ನಿರ್ವಹಿಸಿದರೂ ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಇವೆಲ್ಲದಕ್ಕೂ ವಕ್ಸ್ ಬೋರ್ಡ್ ಜವಾಬ್ದಾರಿಯಾಗಿರುತ್ತದೆ ಎನ್ನುವದನ್ನು
ಗಮನದಲ್ಲಿ ರಿಸಿಕೊಳ್ಳಬೇಕು. ಎಲ್ಲ ಕಡೆಗಳಲ್ಲಿ ಅಲ್ಲಿನ ಕಮಿಟಿಯವರು ಸಾಕಷ್ಟು ಬೇಡಿಕೆಗಳನ್ನು ಇಡುವದು ಸಹಜ. ಆದರೆ ಬೇಡಿಕೆಗಳನ್ನು ಆದ್ಯತಾನುಸಾರ ಈಡೇರಿಸುವ ನಿಟ್ಟಿನಲ್ಲಿ ಕ್ರಮ ವಹಿಸುತ್ತೇವೆ.
ವಕ್ಸ್ ಮಂಡಳಿ ರಾಜ್ಯದ ಬಹುದೊಡ್ಡ ಕಮಿಟಿಯಾಗಿದ್ದು, ಅದರ ಮಂಡಳಿ ಅಧ್ಯಕ್ಷನನ್ನಾಗಿ ನೇಮಕ ಮಾಡಿರುವದಕ್ಕೆ ಎಲ್ಲರಿಗೂ
ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಚರ್ಚಿಸಿ ಆರ್ಥಿಕ ನೆರವು ದೊರಕಿಸಿಕೊಡುವ ಭರವಸೆ ನೀಡಿದರು. ವೇದಿಕೆಯಲ್ಲಿ ಆಶೀಫಟಲಿ ಹೀರಾಹುಸೇನ್, ಕೆಪಿಸಿಸಿ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಪುರಸಭೆ ಹಾವೇರಿ ಲೋಕಸಭಾ ಕ್ಷೇತ್ರದ ಯುವ ಮುಖಂಡ, ಕೆಪಿಸಿಸಿ ಸದಸ್ಯ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಎಲ್ಲ ಸಮಾಜಗಳೊಂದಿಗೆ ಹೊಂದಿಕೊಂಡು ಸಾಗುವ ನಿಟ್ಟಿನಲ್ಲಿ ಮುಂದಾಗಬೇಕು. ಮುಸ್ಲಿಂ ಸಮಾಜದವರು ಒಗ್ಗಟ್ಟಿನಿಂದ ಎಲ್ಲ ಕಾರ್ಯಗಳನ್ನು ಮಾಡುತ್ತಿರುವದು ಶ್ಲಾಘನೀಯ. ಈಗಾಗಲೇ ಲಕ್ಷೇಶ್ವರಕ್ಕೆ ಅಲ್ಪ ಸಂಖ್ಯಾತರ ಇಲಾಖೆಯಿಂದ 2 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.
ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಉಪಾಧ್ಯಕ್ಷ ಪೀರದೋಷ ಆಡೂರ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ, ಜಯಕ್ಕ ಕಳ್ಳಿ, ಹುಮಾಯೂನ್ ಮಾಗಡಿ, ಎಂ.ಎಂ. ಗದಗ, ಡಾ. ಅಬ್ದುಲ್‌ರೀಂ ಪಟವೇಗಾರ, ಸುಲೇಮಾನ ಕಣಕೆ, ಸೈಯದ್ ಅಲಿ ಹುಸೇನ್ ಹೈದರಲಿ, ದಿಶಾಂತ ಪಠಾಣ, ಮಾಜಿ ಶಾಸಕ ರಾಮಣ್ಣ ಲಮಾಣಿ, ದಾದಾಪೀರ ಮುಚಾಲೆ, ವೀರಯ್ಯ ಮಠಪತಿ, ಸಾಹೇಬ್ ಜಾನ್, ಹವಾಲ್ದಾರ್ ನಜೀರ್ ಅಹ್ಮದ ಗದಗ, ಎ.ಜಿ. ಸೂರಣಗಿ, ಕರೀಂಖಾನವರ, ಇಮ್ರಾನ್ ಪೀರಜಾದೆ, ಆಸೀಪ್ ಅಲಿ ಸೇರಿದಂತೆ ದರ್ಗಾ ಹಾಗೂ ಅಂಜುಮನ್ ಕಮಿಟಿಯ ಪದಾಧಿಕಾರಿಗಳು ಮತ್ತು ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP