ಮಲ್ಲಿಕಾರ್ಜುನ ಶ್ರೀಗಳಿಂದ ಕಪ್ಪತ್ತಗಿರಿ ಮಠದಲ್ಲಿ ಗೊಂದಲ : ರಾಜು ಖಾನಪ್ಪನವರ
ಗದಗ, 26 ಜುಲೈ (ಹಿ.ಸ.) : ಆ್ಯಂಕರ್ : ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಹೆಸರುವಾಸಿಯಾಗಿರುವ ಕಪ್ಪತ್ತಗಿರಿಯಲ್ಲಿರುವ ಮಠದಲ್ಲಿ ಸಾಕಷ್ಟು ಗೊಂದಲಗಳಿವೆ. 70 ಗಿರಿ ನೋಡುವುದಕ್ಕಿಂತ ಕಪ್ಪತ್ತಗಿರಿ ನೋಡಿದರೆ ಜೀವನ ಪಾವನವಾಗುತ್ತದೆ ಅಂತ ಹಿರಿಯರು ಹೇಳುತ್ತಾರೆ. ಆದರೆ, ಕಪ್ಪತ್ತಗುಡ್ಡದಲ್ಲಿರುವ ಕಪ್ಪತ್ತ
ಪೋಟೋ


ಗದಗ, 26 ಜುಲೈ (ಹಿ.ಸ.) :

ಆ್ಯಂಕರ್ : ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಹೆಸರುವಾಸಿಯಾಗಿರುವ ಕಪ್ಪತ್ತಗಿರಿಯಲ್ಲಿರುವ ಮಠದಲ್ಲಿ ಸಾಕಷ್ಟು ಗೊಂದಲಗಳಿವೆ. 70 ಗಿರಿ ನೋಡುವುದಕ್ಕಿಂತ ಕಪ್ಪತ್ತಗಿರಿ ನೋಡಿದರೆ ಜೀವನ ಪಾವನವಾಗುತ್ತದೆ ಅಂತ ಹಿರಿಯರು ಹೇಳುತ್ತಾರೆ. ಆದರೆ, ಕಪ್ಪತ್ತಗುಡ್ಡದಲ್ಲಿರುವ ಕಪ್ಪತ್ತಗಿರಿಯ ಮಠದಲ್ಲಿ ಮಲ್ಲಿಕಾರ್ಜುನ ಶ್ರೀಗಳು ಹಲವು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಶಿವರಾಮಕೃಷ್ಣ ಸೇವಾ ಸಮಿತಿ ಅಧ್ಯಕ್ಷ ರಾಜು ಖಾನಪ್ಪನವರ ಗಂಭೀರ ಆರೋಪ ಮಾಡಿದ್ದಾರೆ.

ಗದಗ ನಗರದ ಪತ್ರಿಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂ. ವಿಶ್ವನಾಥಸ್ವಾಮಿ ಕಪ್ಪತ್ತಮಠ ಇಬ್ಬರು ಮಕ್ಕಳು ಮಠ ನಡೆಸಬೇಕಾಗಿತ್ತು. ಹಣದ ಆಸೆಗಾಗಿ ಮೊದಲ ಮಗ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಎರಡನೇ ಶ್ರೀಕಾಂತಸ್ವಾಮಿ ನಡುವೆ ತಿಕ್ಕಾಟ ನಡೆಯುತ್ತಿದೆ. ಮೂರು ವರ್ಷದಿಂದ ಇಬ್ಬರನ್ನು ಒಂದುಗೂಡಿಸಲು ಪ್ರಯತ್ನ ಮಾಡಲಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಮಠದಲ್ಲಿ ಕೇಲವು ಪುಂಡರನ್ನು ಇಟ್ಟುಕೊಂಡು ಸ್ವತಃ ತಮ್ಮ ತಾಯಿಯ ಮೇಲೆ ಹಲ್ಲೆ ಮಾಡಿದ್ದಾರೆ. ಬಾಯಿಯಿಂದ ಕಚ್ಚಿ ಗಾಯಗೋಳಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಮಲ್ಲಿಕಾರ್ಜುನ ಶ್ರೀಗಳು ಮಠದ ಹೆಸರಿನಲ್ಲಿ ಸಾಕಷ್ಟು ಆಸ್ತಿ ಸಂಪಾದನೆ ಮಾಡಿದ್ದಾರೆ. ಭಕ್ತರಿಂದ ಬಂದ ಹಣದಿಂದ ವೈಭೋಗದ ಜೀವನ ನಡೆಸುತ್ತಿದ್ದಾರೆ. ಇಲ್ಲಿಯವರೆಗೂ ಕಪ್ಪತ್ತಗುಡ್ಡದಲ್ಲಿನ ಲೆಕ್ಕ ಪರಿಶೋಧನೆ ನಡೆದಿಲ್ಲ. ಹಿಗಾಗಿ ಹೊಸ ಟ್ರಷ್ಟ್ ನಿರ್ಮಾಣ ಮಾಡಲಾಗುವುದು. ಈ ಕೂಡಲೇ ಮುಂಡರಗಿ ಪೊಲೀಸರು ಕ್ರಮ ಕೈಗೊಳ್ಳಬೇಕು. ಜೊತೆಗೆ, ಸೂಕ್ತ ತನಿಖೆ ನಡೆಸಬೇಕು. ಸ್ವಾಮೀಜಿಗಳ ಈ ವರ್ತನೆಯಿಂದ ಮಠಕ್ಕೆ ಬರುವ ಭಕ್ತರು ಅಸಹಾಯಕರಾಗಿದ್ದಾರೆ. ಭಕ್ತರ ಹಿತದೃಷ್ಟಿಯಿಂದಲೂ ಮಠದಲ್ಲಿರುವ ಅವ್ಯವಸ್ಥೆ ಸರಿ ಆಗಬೇಕು ಎಂದು ಆಗ್ರಹಿಸಿದರು.

75ಕ್ಕೂ ಹೆಚ್ಚು ವಯಸ್ಸಾಗಿರುವ ವೃದ್ದೆ ಲಲಿತಮ್ಮನವರ ಮೇಲೆ ಹಲ್ಲೆ ಮಾಡಿದ್ದು ಇದು ಮೊದಲಲ್ಲ. ಈ ಹಿಂದೆ ಸಾಕಷ್ಟು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ಬಗ್ಗೆ ಎಸ್ಪಿ ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಅವರ ಅಳಲನ್ನು ಸೇವಾ ಟ್ರಷ್ಟ್ ಗೆ ಪತ್ರದ ಮೂಲಕ ಆ ತಾಯಿ ತೋಡಿಕೊಂಡಿದ್ದಾರೆ ಎಂದು ರಾಜು ಖಾನಪ್ಪನವರ ತಿಳಿಸಿದರು.

ಈ ವೇಳೆ ಮಹೇಶ್ ರೋಖಡೆ, ಕಿರಣ ಹಿರೇಮಠ, ವೆಂಕಟೇಶ ದೊಡ್ಡಮನಿ, ಕುಮಾರ ನಡಗೇರಿ, ರಾಚೋಟಿ ಕಾಡಪ್ಪನವರ, ವಿಶಾಲ ಗೋಕಾವಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande