ಧಾರವಾಡ, 26 ಜುಲೈ (ಹಿ.ಸ.) :
ಆ್ಯಂಕರ್ : ಧಾರವಾಡ ಶಹರದ ಬಡಾವಣೆಗಳ ರಸ್ತೆ ಬದಿ ಹಾಗೂ ಕಚೇರಿ ಆವರಣದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ 110 ಮರಗಳು ಮತ್ತು 65 ಮರದ ಟೊಂಗೆಗಳನ್ನು ತೆರುವುಗೊಳಿಸಲು ಧಾರವಾಡ ವಲಯ ಅರಣ್ಯ ಅಧಿಕಾರಿ ಕಛೇರಿಯಲ್ಲಿ ಜುಲೈ 28, 2025 ರಂದು ಮಧ್ಯಾಹ್ನ 3 ಗಂಟೆಗೆ ಬಹಿರಂಗ ಹರಾಜು ಮಾಡಲಾಗುವುದು.
ಮರ ಸಂರಕ್ಷಣಾ ಕಾಯ್ದೆ 1976 ರ ಸೆಕ್ಷನ್ 8 (3) (VII) ರ ಸೆಕ್ಷನ್‍ಗಳಲ್ಲಿ ಅಗತ್ಯ ಪಡಿಸಿರುವಂತೆ ಈ ಬಗ್ಗೆ ತಕರಾರು ಸಲ್ಲಿಸ ಬಯಸುವವರು ತಮ್ಮ ತಕರಾರನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಧಾರವಾಡ ಉಪ ವಿಭಾಗ, ಧಾರವಾಡ ಹಾಗೂ ಧಾರವಾಡದ ಕೆ.ಸಿ.ಪಾರ್ಕ ಎದುರು ಅರಣ್ಯ ಸಂಕೀರ್ಣದಲ್ಲಿರುವ ಮರ ಅಧಿಕಾರಿಯವರಿಗೆ ಲಿಖಿತ ರೂಪದಲ್ಲಿ ಜುಲೈ 25, 2025 ರ ಒಳಗಾಗಿ ಸಲ್ಲಿಸಬಹುದುದಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa