ಧಾರವಾಡ ಜಿಲ್ಲೆಯಲ್ಲಿ ರಸಗೊಬ್ಬರಗಳ ವಿತರಣೆ
ಧಾರವಾಡ, 26 ಜುಲೈ (ಹಿ.ಸ.) : ಆ್ಯಂಕರ್ : 2025-26 ನೇ ಸಾಲಿನ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಧಾರವಾಡ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯವು ಪೂರ್ಣಗೊಂಡಿದ್ದು, ಸುಮಾರು 2.77 ಲಕ್ಷ ಹೆಕ್ಟರ್ ಬಿತ್ತನೆಯಾಗಿರುತ್ತದೆ. ಮುಂದುವರೆದು ರಸಗೊಬ್ಬರಕ್ಕೆ ಸಂಬಂಧಿಸಿದಂತೆ, ಜುಲೈ ತಿಂಗಳ ಅಂತ್ಯದವರೆಗೆ ಯೂರಿಯಾ 17
ಧಾರವಾಡ ಜಿಲ್ಲೆಯಲ್ಲಿ ರಸಗೊಬ್ಬರಗಳ ವಿತರಣೆ


ಧಾರವಾಡ, 26 ಜುಲೈ (ಹಿ.ಸ.) :

ಆ್ಯಂಕರ್ : 2025-26 ನೇ ಸಾಲಿನ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಧಾರವಾಡ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯವು ಪೂರ್ಣಗೊಂಡಿದ್ದು, ಸುಮಾರು 2.77 ಲಕ್ಷ ಹೆಕ್ಟರ್ ಬಿತ್ತನೆಯಾಗಿರುತ್ತದೆ. ಮುಂದುವರೆದು ರಸಗೊಬ್ಬರಕ್ಕೆ ಸಂಬಂಧಿಸಿದಂತೆ, ಜುಲೈ ತಿಂಗಳ ಅಂತ್ಯದವರೆಗೆ ಯೂರಿಯಾ 17223, ಡಿಎಪಿ 9845, ಎಂಓಪಿ 541, ಕಾಂಪ್ಲೇಕ್ಸ್ 4580 ಮತ್ತು ಎಸ್‍ಎಸ್‍ಪಿ 226 ಮೆಟ್ರಿಕ್ ಟನ್‍ಗಳಷ್ಟು ಬೇಡಿಕೆ ಇದ್ದು, ಇಲ್ಲಿಯವರೆಗೆ ಯೂರಿಯಾ 22508, ಡಿಎಪಿ 8489, ಎಂಓಪಿ 2846, ಕಾಂಪ್ಲೇಕ್ಸ್ 23604 ಮತ್ತು ಎಸ್‍ಎಸ್‍ಪಿ 788 ಮೆಟ್ರಿಕ್ ಟನ್‍ಗಳಷ್ಟು ಸರಬರಾಜು ಆಗಿದೆ.

ಒಟ್ಟು ಯೂರಿಯಾ 19863, ಡಿಎಪಿ 7073, ಎಂಓಪಿ 802, ಕಾಂಪ್ಲೇಕ್ಸ್ 15942 ಮತ್ತು ಎಸ್‍ಎಸ್‍ಪಿ 558 ಮೆಟ್ರಿಕ್ ಟನ್‍ಗಳಷ್ಟು ಮಾರಾಟವಾಗಿದ್ದು, ಚಿಲ್ಲರೆ ಮತ್ತು ಸಗಟು ಮಾರಾಟ ಮಳಿಗೆಗಳಲ್ಲಿ ಯೂರಿಯಾ 1269, ಡಿಎಪಿ 936, ಎಂಓಪಿ 499, ಕಾಂಪ್ಲೇಕ್ಸ್ 4193 ಮತ್ತು ಎಸ್‍ಎಸ್‍ಪಿ 90 ಮೆಟ್ರಿಕ್ ಟನ್‍ಗಳಷ್ಟು ದಾಸ್ತಾನೀಕರಿಸಲಾಗಿರುತ್ತದೆ. ಮುಂದುವರೆದು, ಯೂರಿಯಾ ರಸಗೊಬ್ಬರಕ್ಕೆ ಸಮಾನವಾದ ನವೀನ ತಾಂತ್ರಿಕತೆಯ ನ್ಯಾನೋ ಯೂರಿಯಾ ರಸಗೊಬ್ಬರ ಬಳಕೆಯನ್ನು ರೈತರು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande