ನಾಟಕ ಆಕಾಡೆಮಿ ಪ್ರಶಸ್ತಿ, ಬಳ್ಳಾರಿ ಜಿಲ್ಲೆ ಕಡೆಗಣನೆ : ಕಲಾವಿದರ ಸಂಘ ತೀವ್ರ ಅಸಮಾಧಾನ
ಬಳ್ಳಾರಿ, 25 ಜುಲೈ (ಹಿ.ಸ.) : ಆ್ಯಂಕರ್ : ಕರ್ನಾಟಕ ನಾಟಕ ಅಕಾಡೆಮಿ ನೀಡುವ ವಾರ್ಷಿಕ ಹಾಗೂ ಜೀವಮಾನದ ಸಾಧನೆ ಸೇರಿ ವಿವಿಧ ಪ್ರಶಸ್ತಿಗಳಿಗೆ ಬಳ್ಳಾರಿ ಜಿಲ್ಲೆಯ ಕಲಾವಿದರನ್ನು ಕಡೆಗಣಿಸಲಾಗಿರುವುದಕ್ಕೆ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘವು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ. `ಕನ್ನಡ ಭವನ''ದ
ನಾಟಕ ಆಕಾಡೆಮಿ ಪ್ರಶಸ್ತಿ, ಬಳ್ಳಾರಿ ಜಿಲ್ಲೆ ಕಡೆಗಣನೆ : ಕಲಾವಿದರ ಸಂಘ ತೀವ್ರ ಅಸಮಾಧಾನ


ಬಳ್ಳಾರಿ, 25 ಜುಲೈ (ಹಿ.ಸ.) :

ಆ್ಯಂಕರ್ : ಕರ್ನಾಟಕ ನಾಟಕ ಅಕಾಡೆಮಿ ನೀಡುವ ವಾರ್ಷಿಕ ಹಾಗೂ ಜೀವಮಾನದ ಸಾಧನೆ ಸೇರಿ ವಿವಿಧ ಪ್ರಶಸ್ತಿಗಳಿಗೆ ಬಳ್ಳಾರಿ ಜಿಲ್ಲೆಯ ಕಲಾವಿದರನ್ನು ಕಡೆಗಣಿಸಲಾಗಿರುವುದಕ್ಕೆ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘವು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ.

`ಕನ್ನಡ ಭವನ'ದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಕಾರ್ಯದರ್ಶಿ ತಿಪ್ಪೇಸ್ವಾಮಿ ಅವರು, ಬಳ್ಳಾರಿ ಜಿಲ್ಲೆಗೆ ಗಂಡು ಮೆಟ್ಟಿನ ನಾಡು, ಕಲಾವಿದರ ತವರೂರು ಎಂದೆಲ್ಲಾ ಕರೆಯಲಾಗುತ್ತದೆ. ಆದರೆ, ಕಲಾವಿದರ ತವರೂರಲ್ಲೇ ಪ್ರಶಸ್ತಿ ಪುರಸ್ಕøತರಿಲ್ಲ ಎನ್ನುವುದು ವಿಷಾಧನೀಯ ಎಂದರು.

ಬಳ್ಳಾರಿ ಜಿಲ್ಲೆ ಮತ್ತು ಜಿಲ್ಲೆಯ ಕಲಾವಿದರ ಬಗ್ಗೆ ಜನಪ್ರತಿನಿಧಿಗಳು ತಾತ್ಸಾರ ಮನೋಭಾವನೆ ಹೊಂದಿರುವ ಕಾರಣ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವ ಶಿವರಾಜ್ ತಂಗಡಿಗೆ ಅವರ ಸ್ವಂತ ಜಿಲ್ಲೆಗೆ ಎರಡೆರಡು ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಬಳ್ಳಾರಿ ಜಿಲ್ಲೆಯನ್ನು ವಂಚಿಸಿದ್ದಾರೆ ಎಂದು ಆರೋಪಿಸಿದರು.

ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರ ಬಂಡೆ, ಕಾರ್ಯದರ್ಶಿ ಮುದ್ದಟನೂರು ತಿಪ್ಪೇಸ್ವಾಮಿ, ಸುಬ್ಬಣ್ಣ,

ಹಚ್ಚೊಳ್ಳಿ ಎಚ್.ಎಂ. ಅಮರೇಶ್, ಚಿಗುರು ಹುಲುಗಪ್ಪ, ವೃತ್ತಿ ರಂಗಭೂಮಿ ಕಲಾವಿದರಾದ ಜಯಶ್ರೀ ಪಾಟೀಲ್ ಸೇರಿ ಇತರೆ ಕಲಾವಿದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande