ಹೊಂದಾಣಿಕೆಯಿಂದ ಬದುಕುವ ವ್ಯವಸ್ಥೆ ಬರಬೇಕು : ಶ್ರೀ ನಿಜಗುಣಪ್ರಭು ತೋಂಟದಾರ್ಯ
ಗದಗ, 25 ಜುಲೈ (ಹಿ.ಸ.) : ಆ್ಯಂಕರ್ : ಮಹಾತ್ಮರು, ನಮಗಾಗಿ ಬದುಕಿದವರ ಮೆರವಣಿಗೆ ಮಾಡು ತೇವೆ ಹೊರತು ಇದು ಕಾಲ್ಪನಿಕ ಮೆರವಣಿಗೆಯಲ್ಲ. ಹೀಗಾಗಿ ಬಹುತ್ವ ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ಥರು ಎಲ್ಲರೂ ಕೂಡಿ ಕೊಂಡು ಹೊಂದಾಣಿಕೆಯಿಂದ ಬದುಕುವ ವ್ಯವಸ್ಥೆ ಈ ದೇಶದಲ್ಲಿ ಬರಬೇಕು ಎಂದು ಶ್ರೀ ನಿಜಗುಣಪ್ರಭು
ಪೋಟೋ


ಗದಗ, 25 ಜುಲೈ (ಹಿ.ಸ.) :

ಆ್ಯಂಕರ್ : ಮಹಾತ್ಮರು, ನಮಗಾಗಿ ಬದುಕಿದವರ ಮೆರವಣಿಗೆ ಮಾಡು ತೇವೆ ಹೊರತು ಇದು ಕಾಲ್ಪನಿಕ ಮೆರವಣಿಗೆಯಲ್ಲ. ಹೀಗಾಗಿ ಬಹುತ್ವ ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ಥರು ಎಲ್ಲರೂ ಕೂಡಿ ಕೊಂಡು ಹೊಂದಾಣಿಕೆಯಿಂದ ಬದುಕುವ ವ್ಯವಸ್ಥೆ ಈ ದೇಶದಲ್ಲಿ ಬರಬೇಕು ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.

ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಶ್ರೀ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಜರುಗಿದ ನೂತನ ಪಲ್ಲಕ್ಕಿ ಉತ್ಸವದ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

ಈ ದೇಶ ಧಾರ್ಮಿಕತೆ ಹಾಗೂ ಸಾಂಸ್ಕೃತಿಕ ದೇಶ. ಮುಂಡರಗಿ ಮಠವು ತನ್ನದೆಯಾದ ಇತಿಹಾಸ ಹಾಗೂ ಪರಂಪರೆ ಹೊಂದಿದೆ. ಆದರೆ ಜಾಗತಿಕ ಮಟ್ಟದಲ್ಲಿ ಅಶಾಂತಿ ತುಂಬಿಕೊಂಡಿದೆ. ದೇಶ ದೇಶದ ಮಧ್ಯ ಯುದ್ಧಗಳು ನಡೆಯುವ ಪರಿಸ್ಥಿತಿ ಕಂಡುಬರುತ್ತಿವೆ. ಇದರಿಂದ ಸಮಾಜದಲ್ಲಿ ಭಯೋತ್ಪಾದಕರ ಅಟ್ಟಹಾಸ ಮೆರೆಯುತ್ತಿದೆ. ಅದು ನಿಲ್ಲಬೇಕು ಜಗತ್ತು ಶಾಂತಿ ಸೌಹಾರ್ದತೆಯಿಂದ ಇರಬೇಕು.

ಹಾಗೂ ಇಷ್ಟೇಲ್ಲಾ ಯಶಸ್ವಿ ಕಾರ್ಯಕ್ಕೆ ಲಿಂಗೈಕ್ಯ ಡಾ.ಸಿದ್ದಲಿಂಗ ಮಹಾಸ್ವಾಮಿಗಳ ಕೃಪಾಶಿರ್ವಾದ ಹಾಗೂ ಪ್ರಸ್ತುತ ಪೀಠಾಧಿಪತಿಗಳ ಆಶಿರ್ವಾದ ಇದೆ ಎಂದು ನೆನಪಿನಲ್ಲಿಟ್ಟು ಕೊಳ್ಳಬೇಕು. ವ್ಯಸನಮುಕ್ತ ಸಮಾಜ ನಿರ್ಮಾಣ ವಾಗಲಿ. ಯುವಕರು ಹೆಚ್ಚು ಬೆಳೆಯು ವಂತಾಗಲಿ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ನಿಲ್ಲಲಿ. ಈ ದೇಶದಲ್ಲಿ ರೈತರು ಚೆನ್ನಾಗಿ ಬದುಕಬೇಕು. ಈ ವರ್ಷ ಚೆನ್ನಾಗಿ ಮಳೆ ಬೆಳೆ ಬಂದು ರೈತರ ಬದುಕು ಹಸನಾಗಲಿ ಎಂದು ಶುಭ ಹಾರೈಸಿದರು.

ಇದಕ್ಕೂ ಪೂರ್ವದಲ್ಲಿ ಶ್ರೀ ಯಡಿಯೂರ ಸಿದ್ದಲಿಂಗೇಶ್ವರರಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ನಂತರ ನಡೆದ ಅಡ್ಡ ಪಲ್ಲಕ್ಕಿಯಲ್ಲಿ ಶ್ರೀ ಎಡಿಯೂರ ಸಿದ್ಧಲಿಂಗೇಶ್ವರರ ನೂತನ ರಜತ ಮೂರ್ತಿ ಹಾಗೂ ಪಂಚ ಲೋಹದ ನೂತನ ಮೂರ್ತಿಗೆ ವಿವಿಧ ಬಗೆ-ಯ ಹೂವಿಗಳಿಂದ ಅಲಂಕರಿಸಿದ ಅಡ್ಡಪಲ್ಲಕ್ಕಿ ಮೆರವಣಿಗೆ ಯನ್ನು ಅತ್ಯಂತ ಸಡಗರ, ಸಂಭ್ರಮ, ಶ್ರದ್ದೆ, ಭಯ ಭಕ್ತಿಯಿಂದ ನೂರಾರು ಭಕ್ತ ಸಮೂಹದೊಂದಿಗೆ ವೈಭವದಿಂದ ಜರುಗಿತು. ಕುಂಬಮೇಳ, ಜಾಂಜಮೇಳ, ನಂದಿಕೋಲು ವಿವಿಧ ವಾಧ್ಯ ಮೇಳದೊಂದಿಗೆ ಪಲ್ಲಕ್ಕಿ ಉತ್ಸವ ಸಾಗುವ ಮಾರ್ಗದುದ್ದಕ್ಕೂ ತಳಿರು ತೋರಣ, ರಂಗೋಲಿ ಬಿಡಿಸಿ ಅಲಂಕರಿಸಿ ಘೋಷಣೆ ಕೂಗುತ್ತಾ ಭಕ್ತಿಯಿಂದ ಸ್ವಾಗತಿಸಿ ಭಕ್ತಿ ಸಮರ್ಪಣೆಗೈದರು.

ಶ್ರೀ ಬಸವೇಶ್ವರಿ ಮಾತಾಜಿ, ಶ್ರೀ ಮಹಾಂತಸ್ವಾಮಿಜಿ, ಶ್ರೀ ಬಸವಾನಂದ ಸ್ವಾಮೀಜಿ, ಶ್ರೀ ಗೋಣಿರುದ್ರ ಸ್ವಾಮೀಜಿ, ಎಸ್.ಎಸ್. ಪಾಟೀಲ್, ಬಸಯ್ಯ ಗಿಂಡಿಮಠ, ಕರಬಸಪ್ಪ ಹಂಚಿನಾಳ, ಕೊಟ್ರೇಶಪ್ಪ ಅಂಗಡಿ, ಎಚ್.ವಿರುಪಾಕ್ಷಗೌಡ್ರ, ವೀರಣ್ಣ ಮಡಿವಾಳರ, ಶಿವಕುಮಾರ ಬೆಟಗೇರಿ, ವಿಶ್ವನಾಥ ಉಳ್ಳಾಗಡ್ಡಿ, ಸದಾಶಿವಯ್ಯ ಕಬ್ಲೂರಮಠ, ಅಶೋಕ ಹುಬ್ಬಳ್ಳಿ, ಶೇಖರಯ್ಯ ಹಿರೇಮಠ, ಇದ್ದರು.

ಈ ಸಂದರ್ಭದಲ್ಲಿ ದಾವಣಗೇರಿ ಬಸವ ಕಲಾಲೋಕ ನಂದಿಕೋಲ್, ಚೆನ್ನಗಿರಿಯ ಬಸವೇಶ್ವರ ವೀರಗಾಸೆ ಕಲಾ ತಂಡ, ಪಿರಿಯಾಪಟ್ಟಣದ ನಾದಸ್ವರ ಮಂಗಳವಾಧ್ಯ ವೃಂದ ಎಲ್ಲಾ ಕಲಾತಂಡಗಳಿಂದ ಭಕ್ತರ ಮನಮೆಚ್ಚುವಂತ ಅದ್ಭುತವಾಗಿ ಅರ್ಪಿಸಿದ ಕಲೆಯ ಪ್ರದರ್ಶನ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಮೆರಗು ನೀಡಿತು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande