ಗದಗ, 23 ಜುಲೈ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಮುಂಗಾರು ಮಳೆ ದಿ:16.07.2025 ರಿಂದ ದಿ:22.07.2025 ವರೆಗೆ 15.00 ಮಿ.ಮೀ. ಮಳೆಗೆ 52.00 ಮಿ.ಮೀ. ಆಗಿದ್ದು, ವಾಡಿಕೆಗಿಂತ ಶೇ.243 ಹೆಚ್ಚು ಆಗಿದೆ. ಈಗಾಗಲೇ ಬಿತ್ತನೆಯಾಗಿ 40 ರಿಂದ 50 ದಿನಗಳ ಬೆಳೆಗೆ ಮೇಲುಗೊಬ್ಬರವಾಗಿ ಯೂರಿಯಾ ರಸಗೊಬ್ಬರವನ್ನು ನೀಡಲಾಗುತ್ತಿದೆ.ಮುಸುಕಿನ ಜೋಳದಲ್ಲಿ ಯೂರಿಯಾ ರಸಗೊಬ್ಬರವನ್ನು ಮೇಲುಗೊಬ್ಬರವಾಗಿ ಒಂದಕ್ಕಿಂತ ಹೆಚ್ಚು ಬಾರಿ ನೀಡಲಾಗುತ್ತಿದೆ.
ಶಿಫಾರಸ್ಸಿನ ಪ್ರಮಾಣಕ್ಕಿಂತ ಹೆಚ್ಚು ಯೂರಿಯಾ ರಸಗೊಬ್ಬರವನ್ನು ಬಳಸುವುದರಿಂದ ಬೆಳೆ ಹುಲುಸಾಗಿ ಬೆಳೆದು, ಕೀಟ ಮತ್ತುರೋಗ ಬಾಧೆ ಹೆಚ್ಚಾಗುತ್ತದೆ.ಕೀಟ ಮತ್ತುರೋಗ ಬಾಧೆಗಳನ್ನು ನಿಯಂತ್ರಿಸಲು ಪೀಡೆ ನಾಶಕಗಳನ್ನು ವಿವೇಚನಾ ರಹಿತವಾಗಿ ಬಳಸಲಾಗುತ್ತಿದೆ. ಇದರಿಂದ ರಾಸಾಯನಿಕಗಳು ಆಹಾರ ಸರಪಳಿಯಲ್ಲಿ ಬಂದು, ಪ್ರಾಣಿ/ಪಕ್ಷಿ ಹಾಗೂ ಮನುಷ್ಯರಲ್ಲಿ ಬೇರೆ ಬೇರೆ ಗಂಭೀರ ರೋಗಗಳಿಗೆ ಕಾರಣವಾಗುತ್ತದೆ.
ಯೂರಿಯಾ ರಸಗೊಬ್ಬರದಲ್ಲಿನ 30-50%ರಷ್ಟು ಸಾರಜನಕ ಮಾತ್ರ ಬೆಳೆಗಳಿಂದ ಹೀರಲ್ಪಟ್ಟು, ಉಳಿದ ಲಭ್ಯವಿಲ್ಲದ ಸಾರಜನಕವು ನೈಟ್ರೇಟ್‌ರೂಪದಲ್ಲಿ ಮಣ್ಣು, ಗಾಳಿ ಮತ್ತು ನೀರನ್ನು ಕಲುಷಿತಗೊಳಿಸಿ, ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಸೆಂಟ್ರಲ್ ಗ್ರೌಂಡ್ ವಾಟರ್ ಬೋರ್ಡ ರವರ 2024 ರ ವರದಿಯ ಪ್ರಕಾರ ಅತಿಯಾದ ಸಾರಜನಯುಕ್ತ ರಾಸಾಯನಿಕ ಗೊಬ್ಬರಗಳಾದ ಯೂರಿಯಾ ಬಳಕೆಯಿಂದ ಅಂತರ್ಜಲ ಕಲುಷಿತಗೊಂಡಿದ್ದು, ಸುಮಾರು 443 ಜಿಲ್ಲೆಗಳ ಅಂತರ್ಜಲವು ಅತಿಯಾದ ನೈಟ್ರೇಟ್‌ನಿಂದ ಮಲಿನಗೊಂಡಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ನೀರಿನಲ್ಲಿ ನೈಟ್ರೇಟ್ ಅಂಶವು ಗರಿಷ್ಠ 45ಎಮ್.ಜಿ./ಲೀ.ಗೆ ಸೀಮಿತವಾಗಿದ್ದು, ಕರ್ನಾಟಕದಲ್ಲಿ 2023ನೇ ಸಾಲಿನಲ್ಲಿ 345 ನೀರಿನ ಮಾದರಿಗಳ ವಿಶ್ಲೇಷಣೆಯ ಪೈಕಿ 169 ಮಾದರಿಗಳಲಿ ್ಲ(48.99%) ನೈಟ್ರೇಟ್ ಅಂಶವು>45 ಎಮ್.ಜಿ./ಲೀ. ಇರುವುದು ಕಂಡುಬಂದಿದೆ. ಇಂತಹ ನೀರನ್ನು ಬಳಸುವುದರಿಂದ ಮನುಷ್ಯನ ಆರೋಗ್ಯದ ಮೇಲೆ, ವಿಶೇಷವಾಗಿ ಶಿಶುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಜಿಲ್ಲೆಯಲ್ಲಿ ಇರಬೇಕಾದ ಸಾರಜನಕ:ರಂಜಕ:ಪೊಟ್ಯಾಶ್‌ಅನುಪಾತವು 4:2:1 ಇದ್ದು, ರಾಸಾಯನಿಕ ಗೊಬ್ಬರಗಳ ಅಸಮತೋಲನ ಬಳಕೆಯಿಂದ 7.44:4.31:1.0 ಆಗಿದೆ. ಯೂರಿಯಾ ಬಳಕೆಯನ್ನು ಪರಿಣಾಮಕಾರಿಯಾಗಿ ಕಡಿತಗೊಳಿಸಲು ಮಣ್ಣು ಪರೀಕ್ಷೆಯ ವರದಿಯನ್ವಯ, ಶಿಫಾರಸ್ಸಿನಂತೆ ಬಳಸಬೇಕು.ದ್ವಿದಳಧಾನ್ಯ ಬೆಳೆಗಳ ಬೇರಿನಲ್ಲಿ, ವಾತಾವರಣದಲ್ಲಿರುವ ಸಾರಜನಕವನ್ನು ಹೀರಿ ಮಣ್ಣಿಗೆಕೊಡುವ ಸೂಕ್ಷ್ಮಾಣು ಜೀವಿಗಳು ಇರುತ್ತವೆ. ದ್ವಿದಳಧಾನ್ಯ ಬೆಳೆಗಳೊಂದಿಗೆ ಬೆಳೆ ಪರಿವರ್ತನೆ ಮಾಡಬೇಕು.
ಜಿಲ್ಲೆಯ ರೈತರು ಪರ್ಯಾಯ ಗೊಬ್ಬರಗಳಾದ ಸಾವಯವಗೊಬ್ಬರ, ಹಸಿರೆಲೆಗೊಬ್ಬರ, ಜೈವಿಕಗೊಬ್ಬರ, ನ್ಯಾನೋಗೊಬ್ಬರಗಳ ಬಳಕೆಯನ್ನು ಮಾಡಬೇಕೆಂದು ಜಂಟಿಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita M P