ಕೋಲಾರ, ೨೩ ಜುಲೈ (ಹಿ ಸ ) :
ಆ್ಯಂಕರ್ : ಕರ್ನಾಟಕ ಡ್ರೈವರ್ಸ್ ಅಂಡ್ ಓನರ್ಸ್ ವೆಲ್ಫೇರ್ ಅಸೋಸಿಯೇಷನ್ ಹಾಗೂ ರಂಗವಿಜಯ ಟ್ರಸ್ಟ್ ರವರ ವತಿಯಿಂದ ಸಾಹಿತ್ಯ ಮತ್ತು ಸಮಾಜಸೇವೆಗೆ ನೀಡಲಾಗುವ ‘ಜನೋಪಕಾರಿ ದೊಡ್ಡಣ್ಣಶೆಟ್ಟರ ಸ್ಮಾರಕ’ ಪ್ರಶಸ್ತಿಗೆ ಕೋಲಾರದ ವಕೀಲರು ಮತ್ತು ಸಾಹಿತಿಗಳು ಆದ ಬಿ.ಆರ್.ರವೀಂದ್ರ (ರಾಣಾ) ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯವ ‘ಮಹಾಸಂಗಮ ದಶಮಾನೋತ್ಸವ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘಟನೆಯ ಅಧ್ಯಕ್ಷರಾದ ಸುಗಟೂರು ಮಂಜುನಾಥ್ ರವರು ಪ್ರಕಟಿಸಿದ್ದಾರೆ ಮತ್ತು ಪ್ರತಿಷ್ಠಾನದ ಕಾರ್ಯಕಾರಿ ಸಮಿತಿಯವರು ಅಭಿನಂದನೆ ಸಲ್ಲಿಸಿದ್ದಾರೆ.
ಕರ್ನಾಟಕ ಡ್ರೈವರ್ಸ್ ಅಂಡ್ ಓನರ್ಸ್ ವೆಲ್ಫೇರ್ ಅಸೋಸಿಯೇಷನ್ನ ಹತ್ತು ವರ್ಷಗಳ ಸಾಮಾಜಿಕ ಕಾಳಜಿ ಹಾಗೂ ಬದ್ದತೆಯ ವರ್ಷಾಚರಣೆಯನ್ನು ದಶಮಾನೋತ್ಸವವ ಮಹಸಂಗಮ ಶೀರ್ಷಿಕೆಯಡಿ ಆಚರಿಸುತ್ತಿದ್ದು, ಸಾಮಾಜಿಕ ಸೇವೆಯಡಿ ಶ್ರಮಿಸಿದವರಿಗೆ ನೀಡುವ ಪ್ರಶಸ್ತಿಗೆ ಸದಾ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿರುವ ವಕೀಲ ಬಿ.ಆರ್.ರವೀಂದ್ರ ಅವರನ್ನು ಆಯ್ಕೆ ಮಾಡಲಾಗಿದೆ.
ಚಿತ್ರ : ‘ಜನೋಪಕಾರಿ ದೊಡ್ಡಣ್ಣಶೆಟ್ಟರ ಸ್ಮಾರಕ’ ಪ್ರಶಸ್ತಿಗೆ ಕೋಲಾರದ ವಕೀಲರು ಮತ್ತು ಸಾಹಿತಿಗಳು ಆದ ಬಿ.ಆರ್.ರವೀಂದ್ರ (ರಾಣಾ) ಆಯ್ಕೆಯಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್