ಗದಗ, 23 ಜುಲೈ (ಹಿ.ಸ.) :
ಆ್ಯಂಕರ್ : ಗದಗ ನಗರದ ಇತಿಹಾಸ ಪ್ರಸಿದ್ಧ ಒಕ್ಕಲಗೇರಿ ಓಣಿ ಶ್ರೀ ರಾಯಚೋಟಿ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ನಿಮಿತ್ಯ ದಿ, 25/07/2025 ರಿಂದ ದಿ, 28/08/2025 ರ ವರೆಗೆ ಶರಣ ಚರಿತಾಮೃತವನ್ನು ಕುರಿತು ಪ್ರವಚನವನ್ನು ಏರ್ಪಡಿಸಲಾಗಿದ್ದು, ಪ್ರವಚನವನ್ನು ಆಧ್ಯಾತ್ಮ ವಿದ್ಯಾಶ್ರಮ ಗದಗದ ಪೂಜ್ಯ ಶ್ರೀ ಶಿವಶರಣೆ ಡಾ|| ನೀಲಮ್ಮತಾಯಿ ಯವರು ಪ್ರವಚನವನ್ನು ಪ್ರತಿದಿನ ಸಾಯಂಕಾಲ 07 ಗಂಟೆಯಿಂದ 08:30 ರವರೆಗೆ ಪ್ರವಚನ ಕಾರ್ಯಕ್ರಮ ನಡೆಯಲಿದ್ದು ಈ ಪ್ರವಚನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಟ್ರಸ್ಟ್ ಕಮೀಟಿಯ ಚೆರಮನ್‍ರಾದ ಎಸ್.ಎ.ಮೊರಬದ ವಕೀಲರು ಪುರಾಣ ಸಮಿತಿಯ ಅಧ್ಯಕ್ಷರಾದ ಶೇಖಪ್ಪ ಹೊಂಬಳ, ಸತ್ಸಂಗದ ಪ್ರಮುಖರಾದ ಶ್ರೀಮತಿ ಸುನಂದಾ ಜೋಬಾಳೆ ವಿನಂತಿಸಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita M P