ಬಳ್ಳಾರಿ, 23 ಜುಲೈ (ಹಿ.ಸ.) :
ಆ್ಯಂಕರ್ : ನಾಟಕ ಕೇವಲ ಅಕ್ಷರಗಳಲ್ಲಿ ಕೃತಿಯಾಗಿರದೇ ರಂಗದ ಮೇಲೆ ಪಾತ್ರಗಳಲ್ಲಿ ಮೂಡಿದಾಗಲೇ ಅದಕ್ಕೆ ಮಹತ್ವ ಬರುತ್ತದೆ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ .ನಾಗರಾಜಮೂರ್ತಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯ ಪ್ರಜ್ಞೆ ಪ್ರಕಾಶನವು ಶಿವಶರಣ ಸಕ್ಕರೆ ಕರಡೀಶ ಸಭಾಂಗಣದಲ್ಲಿ ಏರ್ಪಡಿಸಿದ್ದ ಲೇಖಕ ಸಿದ್ದರಾಮ ಕಲ್ಮಠ ಅವರ `ಕರ್ಪೂರದ ಬೆಳಗು' ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಶಿವಯೋಗಿ ಮರಿಸ್ವಾಮಿಗಳು ಮತ್ತು ಸಕ್ಕರೆ ಕರಡೀಶರು ಅನೇಕರ ಮನಸ್ಸುಗಳಲ್ಲಿ - ಹೃದಯಗಳಲ್ಲಿ ಭಕ್ತಿ, ಶ್ರದ್ಧೆ ಮತ್ತು ಸಂಸ್ಕಾರದ ಜೊತೆಯಲ್ಲಿ ಸಂಸ್ಕøತಿಯ ಬೀಜಗಳನ್ನು ಬಿತ್ತಿದ್ದಾರೆ. ಕಾರಣ ಈ ನಾಡು ಆಧುನೀಕತೆಯ ಭರಾಟೆಯಲ್ಲೂ ಗಟ್ಟಿಯಾಗಿ ಸಂಸ್ಕøತಿಯನ್ನು - ಸಂಸ್ಕಾರವನ್ನು ಉಳಿಸಿಕೊಂಡಿದೆ ಎಂದರು.
ಗುರು ಮತ್ತು ಶಿಷ್ಯರ ಜೀವನ ದರ್ಶನವನ್ನು ಸಾಕ್ಷೀಕರಿಸುವ `ಕರ್ಪೂರದ ಬೆಳಗು' ಈ ನೆಲದ ಚಾರಿತ್ರಿಕ ಘಟನೆಗಳಿಗೆ ಮಹತ್ವ ನೀಡಿ ಭಕ್ತಿಯ ಭಾವನೆಗಳನ್ನು ಮೂಡಿಸುತ್ತಿದೆ. `ಮರಿಕಲ್ಯಾಣ'ವಾಗಿರುವ ಬಳ್ಳಾರಿ ಬಹುಮುಖ ಪ್ರತಿಭೆಗಳ ತವರೂರು. ಇಲ್ಲಿಯೇ `ಕರ್ಪೂರದ ಬೆಳಗು' ರಂಗಭೂಮಿಯಲ್ಲಿ ಪ್ರದರ್ಶನವಾಗಲಿ ಎಂದು ಹೇಳಿದರು.
`ಕರ್ಪೂರದ ಬೆಳಗು' ಕುರಿತು ಮಾತನಾಡಿದ ಡಾ. ಪಿ. ದಿವಾಕರ ನಾರಾಯಣ ಅವರು, 18ನೇ ಶತಮಾನದ ಧರ್ಮ, ಧಾರ್ಮಿಕತೆ, ರಾಜಾಶ್ರಯ, ಗುರು - ಶಿಷ್ಯ ಪರಂಪರೆ, ಧರ್ಮ, ಆಧ್ಯಾತ್ಮಿಕ ಸಾಧನೆ, ದಾಸೋಹ, ವೈರಾಗ್ಯ ಏನೆಲ್ಲಾ ಘಟನೆಗಳನ್ನು ಭಾವನಾತ್ಮಕವಾಗಿ ಅಕ್ಷರಗಳಲ್ಲಿ ಬೆಸೆದಿರುವುದು ಲೇಖಕರ ಸಾಮಥ್ರ್ಯವನ್ನು ಸಾಕ್ಷೀಕರಿಸುತ್ತದೆ ಎಂದರು.
ಕಲ್ಯಾಣಸ್ವಾಮಿ ಮಠದ ಶ್ರೀಗಳು ಕಾರ್ಯಕ್ರಮದ ಸಾನಿಧ್ಯವಹಿಸಿ, ಧರ್ಮ ಮತ್ತು ಧಾರ್ಮಿಕ ವಿಚಾರದ ನಾಟಕಗಳು ಅಪರೂಪವಾಗುತ್ತಿರುವ ಈ ದಿನಗಳಲ್ಲಿ `ಕರ್ಪೂರದ ಬೆಳಗು' ನಾಟಕ ಪ್ರಕಟವಾಗುತ್ತಿರುವುದು ವಿಶೇಷ. ಈ ನಾಟಕ ರಂಗಸಜ್ಜಿಕೆಯಲ್ಲಿ ಆದಷ್ಟು ಶೀಘ್ರದಲ್ಲಿ ಪ್ರದರ್ಶನಗೊಳ್ಳಲಿ. ನಾಟಕ ಯುವಪೀಳಿಗೆಯಲ್ಲಿ ಬದಲಾವಣೆ ಮೂಡಿಸಲಿ ಎಂದು ಆಶೀರ್ವದಿಸಿದರು.
ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು. ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ. ಮಹಾಂತೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಲ್ಲೇದ ಪಂಪಾಪತೆಪ್ಪ, ಮೇಟಿ ಪಂಪನಗೌಡ, ಕೇಣಿ ಬಸಪ್ಪ, ಕಲ್ಗುಡಿ ಮಂಜುನಾಥ್,ನಂದೀಶ್ ಮಠಂ, ಕಪ್ಪಗಲ್ ಪ್ರಭುದೇವ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಗಾಯಕ ಎಲ್ಲನಗೌಡ ಶಂಕರ ಬಂಡೆ ಮತ್ತು
ಜಡೇಶ್ ಎಮ್ಮಿಗನೂರು ಅವರು ವಿವಿಧ ಗೀತೆಗಳನ್ನು ಪ್ರಸ್ತುತಪಡಿಸಿದರು. `ಕರ್ಪೂರದ ಬೆಳಗು' ಲೇಖಕ ಸಿದ್ದರಾಮ ಕಲ್ಮಠ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.
ಉಪನ್ಯಾಸಕ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಅವರು ಸ್ವಾಗತಿಸಿದರು. ಉಪನ್ಯಾಸಕ ಅಮಾತಿ ಬಸವರಾಜ್ ಅವರು ಕಾಯಕ್ರಮ ನಿರೂಪಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್