ಬಳ್ಳಾರಿ, 23 ಜುಲೈ (ಹಿ.ಸ.) :
ಆ್ಯಂಕರ್ : ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣದ ಹಿನ್ನೆಲೆ ಆನ್‌ಲೈನ್ ಸೇವೆಗಳು ಜುಲೈ 25 ರಿಂದ 27ರವರೆಗೆ ಲಭ್ಯ ಇರುವುದಿಲ್ಲ ಎಂದು ಜೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಜೆಸ್ಕಾಂ ಆನ್‌ಲೈನ್ ಸೇವೆಗಳಾದ ಗ್ರಾಹಕರ ಸೇವಾ ವ್ಯವಸ್ಥೆ, ಭೂಪಟ ಮಾಹಿತಿ ವ್ಯವಸ್ಥೆ, ಆಸ್ತಿ ನಿರ್ವಹಣಾ ವ್ಯವಸ್ಥೆ, ವರದಿ ಪ್ರಕಟಣೆ, ನಿರ್ವಹಣಾ ಮಾಹಿತಿ ವ್ಯವಸ್ಥೆ, ನಗದು ಕೌಂಟರ್‌ಗಳಲ್ಲಿ ಬಿಲ್‌ಪಾವತಿ, ಆನ್‌ಲೈನ್ ಬಿಲ್ ಪಾವತಿ, ಹೊಸ ಸಂಪರ್ಕ ನೋಂದಣಿ ಸೇವೆಗಳು ಜು. 25ರ ರಾತ್ರಿ 8.30 ರಿಂದ ಜು. 27ರ ರಾತ್ರಿ 10ರ ವರೆಗೆ ಲಭ್ಯವಿರುವುದಿಲ್ಲ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್