ಕಾಂಗ್ರೆಸ್–ಆರ್‌ಜೆಡಿಯಿಂದ ಬಿಹಾರ ರಕ್ಷಿಸಬೇಕಾಗಿದೆ : ಮೋದಿ
ಮೋತಿಹಾರಿ, 18 ಜುಲೈ (ಹಿ.ಸ.) : ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಹಾರದ ಮೋತಿಹಾರಿಯಲ್ಲಿ ₹7,200 ಕೋಟಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಶಿಲಾನ್ಯಾಸ ನೆರವೇರಿಸಿದರು. “ಬಿಹಾರ ಈಗ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಮಾವೋವಾದ ಅಂತ್ಯದ ಹಂತದಲ್ಲಿದೆ. ರಾ
Pm


ಮೋತಿಹಾರಿ, 18 ಜುಲೈ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಹಾರದ ಮೋತಿಹಾರಿಯಲ್ಲಿ ₹7,200 ಕೋಟಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಶಿಲಾನ್ಯಾಸ ನೆರವೇರಿಸಿದರು.

“ಬಿಹಾರ ಈಗ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಮಾವೋವಾದ ಅಂತ್ಯದ ಹಂತದಲ್ಲಿದೆ. ರಾಜ್ಯದ ಯುವಕರಿಗೆ ಉದ್ಯೋಗ ಒದಗಿಸಲು ಎನ್‌ಡಿಎ ಸರ್ಕಾರ ಬದ್ಧವಾಗಿದೆ,” ಎಂದು ಪ್ರಧಾನಿ ಹೇಳಿದರು.

ಕಾಂಗ್ರೆಸ್ ಮತ್ತು ಆರ್‌ಜೆಡಿ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಪಕ್ಷಗಳು ಕುಟುಂಬ ರಾಜಕಾರಣವನ್ನೇ ಮುಂದುವರೆಸುತ್ತಿವೆ. ಬಿಹಾರವನ್ನು ಅವರ ದುಷ್ಟ ಉದ್ದೇಶಗಳಿಂದ ರಕ್ಷಿಸಬೇಕಾಗಿದೆ ಎಂದರು.

ಚಂಪಾರಣ್ ನಾಡು ಈಗ ಹೊಸ ಬಿಹಾರದ ಭವಿಷ್ಯಕ್ಕೆ ಪ್ರೇರಣೆಯಾಗುತ್ತಿದೆ. ಇದರಲ್ಲಿ ಬಿಹಾರದ ಮಹಿಳೆಯರ ಪಾತ್ರವೂ ಪ್ರಮುಖವಾಗಿದೆ. ನಮ್ಮ ಗುರಿ ಪೂರ್ವ ಭಾರತವನ್ನು ಕೈಗಾರಿಕಾ ಮತ್ತು ಅಭಿವೃದ್ಧಿಯ ಹಳಿಗೆ ತರುವುದಾಗಿದೆ,” ಎಂದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande