ಕೋಲಾರ, ಜುಲೈ ೧೭ ( ಹಿ ಸ ) :
ಆ್ಯಂಕರ್ : ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಐದು ಭಾರಿ ಆಯ್ಕೆಯಾಗಿರುವ ಹಿರಿಯ ಶಾಸಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಯಾರಿಗೂ ಶೋಭೆ ತರುವುದಿಲ್ಲ, ಯಾವುದೇ ವಿಚಾರಗಳಿದ್ದರೆ ಆರೋಗ್ಯಕರ ಚರ್ಚೆ ನಡೆಯಲಿ ಹೊರೆತು ಶಾಸಕರನ್ನು ವೈಯಕ್ತಿಕವಾಗಿ ಅವಹೇಳನ ಪದ ಬಳಕೆ ಮಾಡುವುದು ಸರಿಯಾದ ನಡವಳಕೆಯಲ್ಲ ಎಂದು ಜಿ.ಪಂ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ ಸಲಹೆ ನೀಡಿದರು.
ಶ್ರೀನಿವಾಸಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಇತ್ತೀಚೆಗೆ ಶಾಸಕ ವೆಂಕಟಶಿವಾರೆಡ್ಡಿ ರವರನ್ನು ಉದ್ದೇಶಿಸಿ ಕೆಲ ಕಾಂಗ್ರೇಸ್ ಮುಖಂಡರು ಸುದ್ದಿಗೋಷ್ಠಿ ನಡೆಸಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದು ಖಂಡನೀಯ ಎಂದರು.
ನಮ್ಮ ಶಾಸಕರು ಜೆ ಡಿ ಎಸ್ ಪಕ್ಷದಿಂದ ಆಯ್ಕೆಯಾಗಿದ್ದು ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿದೆ, ಈಗಿರುವಾಗ ಹೆಚ್ಚಿನ ಅನುದಾನವನ್ನು ತರಲು ಸಾದ್ಯವಾಗದಿದ್ದರೂ ತಮ್ಮ ಶಕ್ತಿ ಮೀರಿ ತಾಲ್ಲೂಕಿನ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ, ತಾಲ್ಲೂಕಿನ ಪ್ರಮುಖ ರಸ್ತೆಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಯಾವುದೇ ಗುತ್ತಿಗೆದಾರರಿಂದ ಅಥವಾ ಸರ್ಕಾರಿ ಅಧಿಕಾರಿಗಳಿಂದ ಕಮಿಷನ್ ಪಡಿಯುತ್ತಿರುವ ದಾಖಲೆಗಳಿದ್ದರೆ ಬಹಿರಂಗಪಡಿಸಿ ಅದನ್ನು ಹೊರೆತುಪಡಿಸಿ ಸುಖಾ ಸುಮ್ಮನೆ ಆರೋಪ ಮಾಡುವುದು ಶೋಭೆ ತರುವುದಿಲ್ಲ ಎಂದರು.
ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಶಾಸಕರು ಹಾಗು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರಾಯರೆಡ್ಡಿಯವರು ಬಹಿರಂಗವಾಗಿ ಗ್ಯಾರಂಟಿ ಬೇಕದರೆ ಅಭಿವೃದ್ದಿ ಕೆಲಸಗಳು ಮಾಡಲಾಗದು. ಗ್ಯಾರಂಟಿ ಬೇಡವೆಂದರೆ ರಸ್ತೆ, ಚರಂಡಿ,ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಪರಿಸ್ಥಿತಿ ಹೀಗಿರುವಾಗ ನಮ್ಮ ಶಾಸಕರು ತಾಲ್ಲೂಕಿನಲ್ಲಿ ಬಡವರಿಗೆ ಮತ್ತು ದಲಿತರಿಗಾಗಿ ೩೦೦ ಕ್ಕೂ ಹೆಚ್ಚು ಬೋರ್ ವೆಲ್ ಕೊರೆಸಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಮೂಲಭೂತ ಸೌಲಭ್ಯಗಳು ನೀಡುವ ಜೊತೆಗೆ ಕೈಗಾರಿಕಾ ವಲಯ ಸ್ಥಾಪನೆಗೆ ಶ್ರಮಿಸುತ್ತಿದ್ದಾರೆ, ತಾಲ್ಲೂಕಿನ ರೈತರ ಜೀವನಾಡಿ ಮಾವಿನ ಬೆಲೆ ಕುಸಿತ ಉಂಟಾದಾಗ ಶಾಸಕರು ಸರ್ಕಾರದ ಮುಖ್ಯಮಂತ್ರಿಗಳು,ಮಂತ್ರಿಗಳಿಗೆ ನಿರಂತರವಾಗಿ ಮನವಿ ಮಾಡಿದರೂ ಯಾರೂ ಸಹ ಮಾವು ಬೆಳೆಗಾರರ ಬಗ್ಗೆ ಗಮನಹರಿಸದಿದ್ದಾಗ ವಿಧಾನ ಸೌಧ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಿ ಸರ್ಕಾರದ ಗಮನಕ್ಕೆ ತಂದರೂ ಸರ್ಕಾರ ಕ್ಯಾರೆ ಅನ್ನಲಿಲ್ಲ.
ಆಗ ದೇವೇಗೌಡರು ಪ್ರಧಾನ ಮಂತ್ರಿಗಳಿಗೆ ಮತ್ತು ಕುಮಾರಸ್ವಾಮಿಯವರು ಕೇಂದ್ರ ಕೃಷಿ ಮಂತ್ರಿಗಳಿಗೆ ಪತ್ರ ಬರೆದು ಮಾವು ಬೆಳೆಗಾರರ ನೆರವಿಗೆ ಬರುವಂತೆ ಒತ್ತಡ ಹಾಕಿದಾಗ ಕೇಂದ್ರ ಸರ್ಕಾರ ರೈತರ ನೆರವಿಗೆ ಧಾವಿಸಿದರೂ ರಾಜ್ಯ ಸರ್ಕಾರ ನಿರ್ಲಕ್ಷ ಧೋರಣೆ ಮುಂದುವರೆಸಿತು, ಕೇಂದ್ರ ಸರ್ಕಾರ ಪರಿಹಾರ ಘೋಷಿಸಿದ ಒಂದು ವಾರದ ನಂತರ ರಾಜ್ಯ ಸರ್ಕಾರ ಹಲವು ನಿಬಂದನೆಗಳನ್ನು ಹಾಕಿ ಬೆಂಬಲ ಬೆಲೆ ಘೋಷಿಸಿತು, ರಾಜ್ಯ ಸರ್ಕಾರದ ವಿಳಂಬ ನೀತಿಯಿಂದ ಮಾವು ಬೆಳೆಗಾರರಿಗೆ ಸರಿಯಾಗಿ ಪರಿಹಾರ ಸಿಗುತ್ತಿಲ್ಲ ಎಂದರು.
ಹಿಂದಿನ ಶಾಸಕರು ತಾಲ್ಲೂಕಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಮತ್ತು ಹೈಟೆಕ್ ಆಸ್ಪತ್ರೆ ಮಾಡಲು ಮುಂದಾದಾಗ ಜೆಡಿಎಸ್ ಪಕ್ಷದ ನಾಯಕರು ಕೋರ್ಟ್ ಮೊರೆ ಹೋಗಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಯಾರೂ ಸಹ ಕೋರ್ಟ್ ಮೊರೆ ಹೋಗಿಲ್ಲ ಅಂತಹ ಯಾವುದೇ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ಸವಾಲೆಸೆದರು.
ತಾಲ್ಲೂಕಿನ ಜನತೆ ಎರಡೂ ಪಕ್ಷದ ನಾಯಕರಿಗೂ ಸಮಾನ ಅವಕಾಶ ನೀಡಿ ತಾಲ್ಲೂಕಿನಲ್ಲಿ ಗೆಲ್ಲಿಸಿಕೊಂಡು ಬಂದಿದ್ದಾರೆ ಎಲ್ಲರೂ ಒಟ್ಟಾಗಿ ತಾಲ್ಲೂಕಿನ ಅಭಿವೃದ್ದಿಗೆ ಶ್ರಮಿಸೋಣ ಚುನಾವಣಾ ಸಮಯದಲ್ಲಿ ರಾಜಕೀಯ ಮಾಡೋಣ ನಂತರ ತಾಲ್ಲೂಕಿನಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಯಾರೂ ಸಹ ಯಾವ ನಾಯಕರ ವಿರುದ್ದವೂ ಅವಹೇಳನಕಾರಿ ಹೇಳಿಕೆಗಳು ನೀಡುವುದು ಸರಿಯಾದ ಬೆಳವಣಿಗೆಯಲ್ಲ ಎಂದರು.
ಜಿ.ಪಂ ಮಾಜಿ ಸದಸ್ಯ ಶ್ರೀನಿವಾಸ್ ಮಾತನಾಡಿ ಹಿರಿಯ ಶಾಸಕರ ಬಗ್ಗೆ ಯಾರೂ ಸಹ ಅವಹೇಳನಕಾರಿಯಾಗಿ ಮಾತನಾಡಬಾರದು ನಾವೆಲ್ಲಾ ಒಂದೇ ತಾಲ್ಲೂಕಿನವರು ಅಣ್ಣ ತಮ್ಮಂದಿರಂತೆ ಬದುಕೋಣ, ಮುಂದಿನ ಯುವ ಪೀಳಿಗೆಗೆ ಒಳ್ಳೆಯ ಸಂದೇಶ ನೀಡುವ ರೀತಿ ನಮ್ಮ ಮಾತಿನ ಶೈಲಿ ಮತ್ತು ನಮ್ಮ ನಡವಳಿಕೆಗಳು ಇರಬೇಕಾಗುತ್ತದೆ ಅದಕ್ಕಾಗಿ ರಾಜಕೀಯ ವೈರತ್ವ ಬದಿಗೊತ್ತಿ ತಾಲ್ಲೂಕಿನ ಅಭಿವೃದ್ದಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ, ಚುನಾವಣಾ ಸಮಯಗಳಲ್ಲಿ ಮಾತ್ರ ರಾಜಕೀಯ ಮಾಡೋಣ ಎಂದರು.
ಸುದ್ದಿಗೋಷ್ಟಿಯಲ್ಲಿ ತಾ.ಪಂ ಮಾಜಿ ಸದಸ್ಯರಾದ ಪಾತಪೇಟೆ ಮಂಜುನಾಥ ರೆಡ್ಡಿ, ಕಾಡುದೇವಾಂಡಹಳ್ಳಿ ನಾಗೇಶ್, ಮುಖಂಡರಾದ ರಾಮಚಂದ್ರೇಗೌಡ, ಬಾರ್ ನಾರಾಯಣಸ್ವಾಮಿ, ಆಟೋ ಜಗದೀಶ್, ಗೊಲ್ಲಪಲ್ಲಿ ಪ್ರಸನ್ನ, ದುರ್ಗಾ ಪ್ರಸಾದ್, ಕುಮ್ಮಗುಂಟೆ ಮನು ಮೊದಲಾದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್