ಕೋಲಾರ, ಜುಲೈ ೧೭ ( ಹಿ ಸ ) :
ಆ್ಯಂಕರ್ : ಸುಮಾರು ೭೨೨ ಎಕರೆ ಭೂಮಿಯನ್ನು ಕೈಗಾರಿಕಾ ಪ್ರದೇಶಕ್ಕಾಗಿ ನೀಡಿರುವ ರೈತರು ೪೦೦ ರೈತರ ಪೈಕಿ ೨೦೦ ಕ್ಕೂ ಹೆಚ್ಚು ರೈತರಿಗೆ ಇನ್ನೂ ಪರಿಹಾರ ನೀಡದ ಕೆ.ಐ.ಎ.ಡಿ.ಬಿ ಅಧಿಕಾರಿಗಳ ವರ್ತನೆಯನ್ನು ಖಂಡಿಸಿ ಮಾಲೂರು ತಾಲೂಕಿನ ಭಾವನಹಳ್ಳಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಜಮೀನು ಕಳೆದುಕೊಂಡಿರುವ ರೈತರು, ಜಮೀನು ಸ್ವಾದೀನಕ್ಕೆ ಪಡೆದು ೬ ವರ್ಷವಾದರೂ ಪರಿಹಾರ ನೀಡಿಲ್ಲ, ಪಿ ನಂಬರ್ ಜಮೀನು ಹಾಗು ಮರಮಾಲಿಕೆ ಗಳಿಗೆ ಈ ಹಿಂದಿನ ನಿರ್ದೇಶನದಂತೆ ಪರಿಹಾರ ನೀಡಬೇಕು, ಈಗಾಗಲೇ ರೈತರ ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವ ಕೆ.ಐ.ಎ.ಡಿ.ಬಿ ಅಧಿಕಾರಿಗಳು ಪರಿಹಾರ ನೀಡಿ ಕಾಮಗಾರಿ ಆರಂಭಿಸಿ ಎಂದು ರೈತರ ಆಗ್ರಹಿಸಿದರು.
ಈ ಹಿಂದೆ ೨೦೨೦ ರಿಂದ ೨೦೨೪ ವರೆಗೂ ಮರ ಮಾಲ್ಕಿ ಗಳ ಪರಿಹಾರ ಜಂಟಿ ತನಿಕೆ ಅದಾರದ ಮೇಲೆ ಸರಾಸರಿ ೨೫೦ ವರೆಗೂ ಸೀಮಿತಗೊಳಿಸದ್ದರು. ಆದರೆ ಈಗ ೨೦೨೫ ರಿಂದ ೧೧೧ಕ್ಕೆ ಸಿಮಿತಗೊಳಿಸಿದ್ದಾರೆ ಇದ್ದರಿಂದ ರೈತರು ಅನ್ಯಾಯಕ್ಕೊಳಗಾಗಿದ್ದಾರೆ ಅದ್ದರಿಂದ ಉಳಿದ ಎಲ್ಲಾ ರೈತರಿಗೂ ಎಕರಗೆ ೨೫೦ ರ ಸರಾಸರಿ ಕೂಡಬೇಕಂದು ರೈತರು ಆಗ್ರಹಿಸಿದರು.
ಎಷ್ಟೋ ರೈತರು ಇವರ ಬಗ್ಗೆ ಯೋಚಿಸುತ್ತಾ ಹೃದಯಾಭಾತದಿಂದ ಮರಣವನ್ನು ಕೂಡ ಹೊಂದಿದ್ದಾರೆ. ದಾಖಲಾತಿಗಳನ್ನು ಸರಿಪಡಿಸುವುದು ಅಧಿಕಾರಿಗಳ ಕೆಲಸದೆ ಹೊರತು ರೈತರ ಕೆಲಸವಲ್ಲ, ಈ ಹಿಂದೆ ಎಷ್ಟೋ ಸರ್ವೇ ನಂಬರ್ ಗಳಲ್ಲಿ ಎಕರೆಗೆ ೨೫೦ ಮರಗಳಂತೆ ೭೦೧ ರೈತರಿಗೆ ಪರಿಹಾರ ನೀಡಿದ್ದು ಇನ್ನುಳಿದ ೨೦೦ ರೈತರಿಗೆ ಎಕರೆಗೆ ೧೧೧ ಮಾತ್ರ ನೀಡುವುದು ಎಂದು ಕೆಐಎಡಿಬಿ ಅಧಿಕಾರಿಗಳಿಗೆ ಹೇಳುವ ಯಾವ ಅಧಿಕಾರವಿದೆ, ರೈತರು ಬೆಳೆದಿರುವಷ್ಟು ಮರ ಗಿಡಗಳ ವಯಸ್ಸು ಮತ್ತು ಮೌಲ್ಯಮಾಪನದ ಆಧಾರವಾಗಿ ಪರಿತಾಗ ನೀಡಬೇಕೆ ಹೊರತು ನಾಲ್ಕು ಗೋಡೆ ಮಧ್ಯ ಕೂತು ಆಧಿಕಾರ ದರ್ಪ ತೋರುವುದಲ್ಲ. ಒಂದು ಗಿಡವನ್ನು ಮರವಾಗಿ ಬೆಳೆಸಲು ಎಷ್ಟು ವರ್ಷ ಅದಿಕ್ಕೆ ನೀರು ಗೊಬ್ಬರ ಉಯ್ಯಬೇಕು ಒಂದು ಮುಗುವಿನಂತೆ ಹೇಗೆ ಜೋಪಾನ ಮಾಡಬೇಕು ಎಂಬ ಕಪ್ಪ ಲಂಚ ಪಡೆಯುವ ದಪ್ಪ ಚರ್ಮದ ಅಧಿಕಾರಿಗಳಿಗೆ ಹೇಗೆ ಗೊತ್ತಿರುತ್ತದೆ, ಈಗಾಗಲೇ ಕೆಲವು ಸರ್ವೇ ನಂಬರ್ ಗಳು ಜಂಟಿ ಸ್ಥಳ ಪರಿಶೀಲನ ವರದಿ( ಕೆಐಎಡಿಬಿ) ಸರ್ವೆ ಅಧಿಕಾರಿಗಳು( ಕೆಐಎಡಿಬಿ) ಅಭಿಯಂತರರು ಸಿದ್ಧಪಡಿಸಿ ವಿಶೇಷ ಭೂಸ್ವಾಧೀನ ಅಧಿಕಾರಿಗಳಿಗೆ ನೀಡಿದ್ದರು ಕೂಡ ಜಂಟಿ ಸ್ಥಳ ತನಿಕಾ ವರದಿಯ ಪ್ರಕಾರ ಪರಿಹಾರ ನೀಡಲು ವಿಶೇಷ ಭೂಸ್ವಾಧೀನ ಅಧಿಕಾರಿಗಳು ಹಿಂದೆ ಹಾಕುತ್ತಿದ್ದು ಎಕರೆಗೆ ನೂರೊಂದು ಮಾತ್ರ ತೆಗೆದುಕೊಳ್ಳಿ ಎಂದು ಹೇಳಲು ಇವರೇನು ಬಂದು ಉತ್ತರೆ ಬಿತ್ತಾರೆ ಅಥವಾ ನೀರನ್ನು ತಂದು ಉಯ್ದರೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮ ಮಂಡಳಿಯವರು ಭಾವನಳ್ಳಿ ಗ್ರಾಮದ ಸಂಪೂರ್ಣ ಎಲ್ಲಾ ಸರ್ವೇ ನಂಬರ್ ಗಳಿಗೂ ಜಮೀನಿನ ಪರಿಹಾರ ಮರ ಮಾಲಿಕೆಗಳ ಪರಿಹಾರ ಕಟ್ಟಡಗಳ ಪರಿಹಾರ ನೀಡಿದ ನಂತರವಷ್ಟೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಒಂದೇ ಒಂದು ಸರ್ವೇ ನಂಬರ್ ಪರಿಹಾರವೂ ಬಾಕಿ ಇದ್ದರೂ ಕೂಡ ಅಭಿವೃದ್ಧಿ ಕೆಲಸಗಳನ್ನು ಮಾಡಲು ಗ್ರಾಮದವರಾದ ನಾವು ಬಿಡುವುದಿಲ್ಲ, ಇನ್ನು ಮುಂದುವರೆದು ಮಾನ್ಯ ಮುಖ್ಯಮಂತ್ರಿಗಳ ಮನೆ ಎದುರು ಇಡೀ ಗ್ರಾಮಸ್ಥರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್