ಖಾದಿಯಿಂದ ೧.೯೪ ಕೋಟಿ ಉದ್ಯೋಗಾವಕಾಶ -ಶರಣ ಬಸಪ್ಪ ದರ್ಶನಾಪುರ
ಖಾದಿಯಿಂದ ೧.೯೪ ಕೋಟಿ ಉದ್ಯೋಗಾವಕಾಶ ಸೃಜಿಸಲಾಗಿದೆ-ಶರಣ ಬಸಪ್ಪ ದರ್ಶನಾಪುರ
ಕೋಲಾರದ ಶತಶೃಂಗ ಪೊಲೀಸ್ ಭವನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು.


ಕೋಲಾರ, ಜುಲೈ ೧೬ (ಹಿ.ಸ) :

ಆ್ಯಂಕರ್ : ರಾಜ್ಯದಲ್ಲಿ ಖಾದಿ ಉತ್ಪಾದನೆಗೆ ಒಂದು ಪ್ರಮುಖ ಇತಿಹಾಸವಿದೆ. ಖಾದಿ ಮತ್ತು ಗ್ರಾಮೋದ್ಯೋಗ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ೧.೭ ಲಕ್ಷ ಕೋಟಿಗೂ ಅಧಿಕ ವಹಿವಾಟು ನಡೆದಿರುವುದರ ಜೊತೆಗೆ ಸುಮಾರು ೧.೯೪ ಕೋಟಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿರುವುದು ಹೆಮ್ಮೆಯ ಸಂಗತಿ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಶರಣಬಸಪ್ಪ ದರ್ಶನಾಪುರ ಅವರು ತಿಳಿಸಿದರು.

ಕೋಲಾರದ ಶತಶೃಂಗ ಪೊಲೀಸ್ ಭವನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ೬೫೦ ಕೋಟಿಗೂ ಅಧಿಕ ವಹಿವಾಟಿನೊಂದಿಗೆ ೨೧ ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಜಿಸಲಾಗಿದೆ ಎಂದರು.

ರಾಷ್ಟ್ರಪಿತ ಮಹಾತ್ಮಗಾಂಧಿ ಅವರು ಸ್ವದೇಶಿ ಚಳುವಳಿಯ ಪ್ರತೀಕವಾಗಿ ಖಾದಿ ಪ್ರತಿನಿಧಿಸಿದೆ. ಖಾದಿ ಕೇವಲ ಬಟ್ಟೆ ಮಾತ್ರವಲ್ಲ ಅದು ಸ್ವಾವಲಂಬನೆಯ ಮತ್ತು ಪರಿಸರ ಸ್ನೇಹಿ ಜೀವನ ಶೈಲಿ ಪ್ರತೀಕವೂ ಆಗಿದೆ. ಖಾದಿ ಮಂಡಳಿಯ ಕಳೆದ ೬೫ ವರ್ಷಕ್ಕೂ ಮೇಲ್ಪಟ್ಟು ಖಾದಿ ಕ್ಷೇತ್ರವಾದ ಹತ್ತಿ, ರೇಷ್ಮೆ ಹಾಘೂ ಉಣ್ಣೆಯನ್ನು ನೂಲಿನಿಂದ ಕೈ ಚರಕದ ಮೂಲಕ ನೂಲು ತೆಗೆದು ಸ್ಥಳೀಯ ಕಸುಬುದಾರರಿಂದಲೇ ಹತ್ತಿಯ ನೂಲು ಬಟ್ಟೆ, ರೇಷ್ಮೆ ಬಟ್ಟೆ ಹಾಗೂ ಉಣ್ಣೆ ವಸ್ತ್ರಗಳನ್ನು ತಯಾರಿಸಲು ಉತ್ತೇಜಿಸುತ್ತಿದ್ದು, ಪ್ರಸ್ತುತ ರಾಜ್ಯದಲ್ಲಿ ೧೭೫ ಸಂಘ ಸಂಸ್ಥೆಗಳು ಖಾದಿ ಉತ್ಪಾದನೆಯಲ್ಲಿ ತೊಡಗಿಕೊಂಡಿರುವುದು ಹೆಮ್ಮೆಯ ವಿಷಯ ಎಂದರು.

ಕೋಲಾರದ ಈ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದ ಭಾಗವಾಗಿ ಮೂಮದಿನ ೩ ತಿಂಗಳೊಳಗಾಗಿ ವಿವಿಧ ೬ ಜಿಲ್ಲೆಗಳಲ್ಲಿ ಖಾದಿ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗುವುದು. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಖಾದಿ ಬಟ್ಟೆಯ ಗುಣಮಟ್ಟ ಕಾಪಾಡುವುದರೊಂದಿಗೆ ಪರಿಣಾಮಕಾರಿ ಮಾರುಕಟ್ಟೆ ವ್ಯವಸ್ಥೆಯನ್ನು ಒದಗಿಸಬೇಕು. ಮಾರುಕಟ್ಟೆಯಲ್ಲಿ ಖಾದಿ ಬಟ್ಟೆಗಳಿಗೆ ಹೆಚ್ಚು ಬೇಡಿಕೆ ಬರುವ ರೀತಿಯಲ್ಲಿ ಸರ್ಕಾರ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರಾದ ಬಸನಗೌಡ ತಿರುವಿಹಾಳ ಅವರು ಮಾತನಾಡಿ ನಮ್ಮ ಮಂಡಳಿ ಸ್ಥಾಪನೆಯಾಗಿ ಸುಮಾರು ೭೦ ಕೂ, ಹೆಚ್ಚು ವರ್ಷಗಳಾಗಿದ್ದು, ಖಾದಿ ಮತ್ತು ಗ್ರಾಮೋದ್ಯೋಗ ಚಟುವಟಿಕೆಗಳನ್ನು ಉತ್ತೇಜಿಸಿ ಪ್ರೋತ್ಸಾಹಿಸುವುದು ಮಂಡಳಿಯ ಧೈಯಾವಾಗಿದೆ. ಕರ್ನಾಟಕದಲ್ಲಿ ೧೭೦ಕ್ಕೂ ಹೆಚ್ಚು ಖಾದಿ ಉತ್ಪಾದನಾ ಸಂಸ್ಥೆಗಳಿದ್ದು ಸುಮಾರು ೧೪ಸಾವಿರಕ್ಕೂ ಹೆಚ್ಚು ಕಸುಬುದಾರರುಗಳಿಗೆ ಉದ್ಯೋಗ ಪ್ರಾಪ್ತಿಯಾಗಿರುತ್ತದೆ ಎಂದು ತಿಳಿಸಿದರು.

ಕಳೆದ ೦೨ ವರ್ಷಗಳ ಅವಧಿಯಲ್ಲಿ ಸುಮಾರು ೦೫ ವಿವಿಧ ಜಿಲ್ಲೆಗಳಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಾಗಳನ್ನು ಆಯೋಜಿಸಲು ಸುಮಾರು ೨ ಕೋಟಿ ಅನುದಾನವನ್ನು ವೆಚ್ಚಮಾಡಲಾಗಿದೆ. ಒಟ್ಟು ೧೧ ಕೋಟಿಗೂ ಹೆಚ್ಚು ವಹಿವಾಟು ಆಗಿದ್ದು, ೨೯೦ಕ್ಕೂ ಹೆಚ್ಚು ಸಂಘ-ಸAಸ್ಥೆಗಳು ಮತ್ತು ಖಾದಿ ಗ್ರಾಮೋದ್ಯೋಗ ಘಟಕಗಳಿಗೆ ಸದರಿ ಮೇಳಾದಿಂದ ಅನುಕೂಲವಾಗಿರುವುದು ತೃಪ್ತಿ ತಂದಿದೆ ಎಂದರು.

ಈ ವರ್ಷವು ಸಹ ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಾಗೂ ರಾಜ್ಯ ಮಟ್ಟದಲ್ಲಿ ೭ ವಿವಿಧ ನಗರಗಳಲ್ಲಿ ಖಾದಿ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದ್ದು ಕೋಲಾರ ನಗರದಲ್ಲಿ ಪ್ರಥಮವಾಗಿ ಉದ್ಘಾಟಿಸಲಾಗುತ್ತಿದೆ.

ಮುಂದಿನ ೩-೪ ತಿಂಗಳೊಳಗೆ ರಾಜ್ಯದ ಇನ್ನೂ ವಿವಿಧ ೬ ಜಿಲ್ಲೆಗಳಲ್ಲಿ ಖಾದಿ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗುವುದು. ಖಾದಿ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಗಳಿಂದಾಗಿ ಖಾದಿ ಉತ್ಪಾದಕರುಗಳಿಗೆ ತಮ್ಮ ವೈವಿದ್ಯಮಯ ಉತ್ಪನ್ನಗಳನ್ನು ಗ್ರಾಹಕರಿಗೆ ಒಂದೇ ಸೂರಿನಡಿ ತಲುಪಿಸುವಂತೆ ಮಾಡುವುದು ಸರ್ಕಾರದ ಕರ್ತವ್ಯವಾಗಿದ್ದು, ಈ ಹಿನ್ನಲೆಯಲ್ಲಿ ಖಾದಿ ಪ್ರದರ್ಶನ ಯಶಸ್ವಿಯಾಗಲೆಂದು ಅರೈಸುತ್ತೇನೆ ಎಂದರು.

ಖಾದಿ ಉತ್ಪನ್ನದ ಗುಣಮಟ್ಟ ವೃದ್ಧಿಯಾಗುವಂತೆ ಮಾಡಲು ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ರಾಜ್ಯದಲ್ಲಿ ಟೆಕ್ಸ್ಟೈಲ್ ವಿಷಯದಲ್ಲಿ ಇಂಜಿನಿಯರಿAಗ್ ಪದವಿ ನೀಡುತ್ತಿರುವ ೦೩ ಕಾಲೇಜುಗಳಿದ್ದು ಸಂಶೋಧನೆ ಮೂಲಕ ಖಾದಿ ಉತ್ಪಾದನೆಯ ಗುಣಮಟ್ಟ ಹೆಚ್ಚಿಸುವಂತಾಗಲು ಸಂಶೋಧನ ಅನುದಾನ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಕೋಲಾರ ಶಾಸಕರಾದ ಕೊತ್ತುರು ಜಿ. ಮಂಜುನಾಥ್ ಅವರು ಮಾತನಾಡಿ ಖಾಧಿ ಎಂದರೆ ನಮ್ಮ ಗಾಂಧಿಜೀ ಅವರು ಖಾದಿ ಬಟ್ಟೆಯನ್ನು ಧರಿಸುತ್ತಿದ್ದರು ಎಂಬುದನ್ನು ನಾವು ಕೇಳಿದ್ದೇವೆ ಇಂತಹ ಕಾರ್ಯಕ್ರಮಕ್ಕೆ ಮಾನ್ಯ ಸಚಿವರು ಮತ್ತು ಮಂಡಳಿಯ ಅಧ್ಯಕ್ಷರು ಬಂದು ಉದ್ಘಾಟನೆ ಮಾಡಿರುವುದು ನಮಗೆ ಹೆಮ್ಮೆಯ ವಿಷಯ ವಾಗಿದೆ ಎಂದರು.

ಇAತಹ ಕಾರ್ಯಕ್ರಮಗಳನ್ನು ಮುಂದುವರಿಸಿಕೊ0ಡು ಹೋಗಬೇಕಾಗುತ್ತದೆ ನಮ್ಮ ದೇಶದ ಹೆಮ್ಮೆಯ ಖಾದಿ ಬಟ್ಟೆಗಳನ್ನು ಎಲ್ಲರೂ ದರಿಸಬೇಕು ಎಂದು ತಿಳಿಸಿ ಇನ್ಫೋಸಿಸ್ ಸುಧಾಮೂರ್ತಿ ಅವರ ಸರಳತೆ ಮತ್ತು ಉಡುಪುಗಳನ್ನು ಉದಾಹರಣೆ ನೀಡಿದರು, ನಮ್ಮ ಕೋಲಾರ ನಗರದಲ್ಲಿ ಇಂತಹ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಎಂ.ಎಲ್. ಅನಿಲ್ ಕುಮಾರ್, ಗ್ಯಾರಂಟೀ ಯೋಜನೆಗಳ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್ ,ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ರಾಜ್ಯ ನಿರ್ದೇಶಕರಾದ ಬಸವರಾಜ್,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಡಿ.ಬಿ.ನಟೇಶ್,ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರಾದ ಪಿ.ನಾಗೇಶ್,ಅಭಿವೃದ್ಧಿ ಅಧಿಕಾರಿ ಸಿ. ನವೀನ್ ಕುಮಾರ್, ಕೆ.ಆರ್.ರಂಜಿತ್,ಕೆ. ಬಿ.ಮಲ್ಲಿಕಾರ್ಜುನಪ್ಪ, ಕೋಲಾರ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಆರ್.ಶ್ರೀನಿವಾಸ್,ಕೆಡಿಪಿ ಅಧ್ಯಕ್ಷರಾದ ಸೊನ್ನೇಗೌಡ, ಎಸ್.ಸಿ.ಘಟಕ ಜಿಲ್ಲಾಧ್ಯಕ್ಷರಾದ ಜಯದೇವ್, ಮುನಿವೆಂಕಟಪ್ಪ ಸೇರಿದ ಇತರರು ಉಪಸ್ಥಿತರಿದ್ದರು.

ಚಿತ್ರ: ಕೋಲಾರದ ಶತಶೃಂಗ ಪೊಲೀಸ್ ಭವನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande