ಯಲಬುರ್ಗಾ ವ್ಯಕ್ತಿ ಕಾಣೆ
ಯಲಬುರ್ಗಾ, 14 ಜುಲೈ (ಹಿ.ಸ.) : ಆ್ಯಂಕರ್ : ಯಲಬುರ್ಗಾ ತಾಲ್ಲೂಕಿನ ಜೂಲಕಟ್ಟಿ ಗ್ರಾಮದ ನಿವಾಸಿ ಮಲ್ಲಯ್ಯ ತಂದೆ ಈಶಯ್ಯ ಪುರಾಣಿಕಮಠ(38) ಕಾಣೆಯಾಗಿದ್ದು, ಯಲಬುರ್ಗಾ ಠಾಣಾ ಗುನ್ನೆ ನಂ: 123/2025 ಕಲಂ: ಮನುಷ್ಯ ಕಾಣೆ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾ
ಯಲಬುರ್ಗಾ ವ್ಯಕ್ತಿ ಕಾಣೆ


ಯಲಬುರ್ಗಾ, 14 ಜುಲೈ (ಹಿ.ಸ.) :

ಆ್ಯಂಕರ್ : ಯಲಬುರ್ಗಾ ತಾಲ್ಲೂಕಿನ ಜೂಲಕಟ್ಟಿ ಗ್ರಾಮದ ನಿವಾಸಿ ಮಲ್ಲಯ್ಯ ತಂದೆ ಈಶಯ್ಯ ಪುರಾಣಿಕಮಠ(38) ಕಾಣೆಯಾಗಿದ್ದು, ಯಲಬುರ್ಗಾ ಠಾಣಾ ಗುನ್ನೆ ನಂ: 123/2025 ಕಲಂ: ಮನುಷ್ಯ ಕಾಣೆ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.

ಕಾಣೆಯಾದ ವ್ಯಕ್ತಿಯ ಚಹರೆ: ವ್ಯಕ್ತಿಯು 5 ಅಡಿ ಎತ್ತರವಿದ್ದು, ಸದೃಢ ಮೈಕಟ್ಟು, ಸಾದಗೆಂಪು ಮೈಬಣ್ಣ ಹಾಗೂ ದುಂಡು ಮುಖ ಹೊಂದಿದ್ದಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದಾಗ ಬಿಳಿ ಬಣ್ಣದ ಅಂಗಿ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದರು.

ಮೇಲ್ಕಂಡ ಚಹರೆಯ ವ್ಯಕ್ತಿಯ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಯಲಬುರ್ಗಾ ಪೆÇಲೀಸ್ ಠಾಣೆ ದೂರವಾಣಿ ಸಂಖ್ಯೆ: 9480803749 ಮತ್ತು 08534-220133 ಅಥವಾ ಕೊಪ್ಪಳ ಕಂಟ್ರೋಲ್ ರೂಮ್ ನಂ.08539-220222 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಯಲಬುರ್ಗಾ ಠಾಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande