ಕೋಲಾರ ೧೪, ಜುಲೈ (ಹಿ.ಸ) :
ಆ್ಯಂಕರ್ : ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿ ೫೦೦ ಕೋಟಿ ಮಹಿಳೆಯರು ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ. ಗ್ಯಾರಂಟಿ ಯೋಜನೆ ಇಡೀ ದೇಶದಲ್ಲೇ ಜನಪರ ಯೋಜನೆಯಾಗಿದೆ. ಈ ಯೋಜನೆ ಮಹಿಳಾ ಸಬಲೀಕರಣಕ್ಕೆ ನಾಂದಿಯಾಗಿದೆ. ಕೆಜಿಎಫ್ ಕ್ಷೇತ್ರದಲ್ಲಿ ೨ ಕೋಟಿ ಮಹಿಳೆಯರು ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದು ಸಾಧನೆ ಅಲ್ಲವೇ ಬಡವರ ಸಂಕಷ್ಟವನ್ನು ನಿವಾರಣೆ ಮಾಡುವುದು ಸಾಧನೆ ಅಲ್ಲವೇ ಎಂದು ಶಾಸಕಿ ರೂಪಕಲಾಶಶಿಧರ್ ಹೇಳಿದರು.
ರಾಜ್ಯದ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ೫ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿಯೋಜನಡಿ ಕಳೆದ ೨ ವರ್ಷಗಳಲ್ಲಿ ೫೦೦ ಕೋಟಿ ಮಹಿಳೆಯರು ಸಾರಿಗೆಯ ಬಸ್‌ಗಳಲ್ಲಿ ಪ್ರಯಾಣ ಮಾಡಿರುವ ಹಿನ್ನೆಲೆಯಲ್ಲಿ ಕೆಜಿಎಫ್‌ನಲ್ಲಿ ಶಕ್ತಿ ಯೋಜನೆಯ ಸಂಭ್ರಮ ಆಚರಿಸಲಾಯಿತು.
ರಾಜ್ಯದ ಕಾಂಗ್ರೆಸ್ ಸರಕಾರ ಯಶಸ್ವಿಯಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ ಸರಕಾರ ಜಾರಿಗೆ ತಂದಿರುವ ಯೋಜನೆಯ ಲಾಭವನ್ನು ರಾಜ್ಯದ ಮಹಿಳೆಯರು ಪಡೆದಿದ್ದಾರೆ. ಪಂಚ ಗ್ಯಾರಂಟಿ ಯೋಜನೆ ಗಳಿಂದ ರಾಜ್ಯದ ಖಜಾನೆ ಖಾಲಿ ಯಾಗಿದೆ ಎಂದು ವಿರೋಧ ಪಕ್ಷಗಳು ಡಂಗುರ ಬಡಿದರು ಸಹ ಮಹಿಳೆಯರು ಕಾಂಗ್ರೆಸ್ ಪಕ್ಷದ ಪರವಾಗಿ ನಿಲ್ಲಲಿದ್ದಾರೆ ಎಂಬುದನ್ನು ಹಲವು ಬಾರಿ ಸಾಭಿತುಪಡಿಸಿದಿದ್ದಾರೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಕೈಗಾರಿಕಾ ಕ್ರಾಂತಿಯನ್ನು ಎಲ್ಲರು ಕಾಣಬಹುದು. ಈಗಾಗಲೇ ನಗರದ ಪ್ರಮುಖ ರಸ್ತೆಗಳ ಡಾಂಬರೀಕರಣ ಕಾಮಗಾರಿ ಮಾಡಲಾಗಿದೆ ೧೦ ಕೋಟಿ ವೆಚ್ಚದಲ್ಲಿ ಮೀನಿ ವಿಧಾನಸೌಧ, ೮ ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣವಾಗಿದೆ ಇದೀಗ ೮ ಕೋಟಿ ವೆಚ್ಚದಲ್ಲಿ ಸಾರಿಗೆ ಇಲಾಖೆಯ ನೂತನ ಕಟ್ಟಡವು ಪೂರ್ಣಗೊಳ್ಳುವ ಹಂತಕ್ಕೆ ತಲುಪಿದ್ದು ಶೀಘ್ರವಾಗಿ ಉದ್ಘಾಟಿಸಲಾಗುವುದು ಎಂದು ಹೇಳಿದರು.
ಇದೇ ವೇಳೆ ಸಾರಿಗೆ ಬಸ್ ಹತ್ತಿದ ಶಾಸಕಿ ಪುರುಷ ಪ್ರಯಾಣಿಕರ ಟಿಕೇಟ್‌ಗಳನ್ನು ಖರೀದಿ ಮಾಡಿ ಎಲ್ಲರೊಂದಿಗೆ ಪ್ರಯಾಣಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ರಾಧಾಕೃಷ್ಣರೆಡ್ಡಿ, ನಗರ ಅಧ್ಯಕ್ಷ ಮುದುಲೈಮುತ್ತು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹನಾಧಿಕಾರಿ ವೆಂಕಟೇಶಪ್ಪ, ತಹಶೀಲ್ದಾರ್ ನಾಗವೇಣಿ, ಡಿಪೋ ಮ್ಯಾನೇಜರ್ ನೇತ್ರಾವತಿ, ವಕೀಲ ಪದ್ಮನಾಭ ರೆಡ್ಡಿ, ರಾಮಕೃಷ್ಣ ರೆಡ್ಡಿ, ನಗರಸಭೆ ಅಧ್ಯಕ್ಷೆ ಇಂದಿರಾ ಗಾ0ಧಿ, ಮಾಜಿ ಕೆಡಿಎ ಅಧ್ಯಕ್ಷ ಜಯಪಾಲ್, ಬೇತಮಂಗಲ ಪಂಚಾಯಿತಿ ಅಧ್ಯಕ್ಷ ವೀನು ಕಾರ್ತಿಕ್, ಪುರೋಷತ್ತಮರೆಡ್ಡಿ, ಶಶಿಕುಮಾರ್ ಭಾಗವಹಿಸಿದ್ದರು.
ಚಿತ್ರ : ಕೆಜಿಎಫ್ ನಗರದಲ್ಲಿ ನಡೆದ ಶಕ್ತಿ ಯೋಜನೆಯ ಸಂಭ್ರಮಾಚರಣೆಯಲ್ಲಿ ಶಾಸಕಿ ರೂಪಕಲಾ ಶಶಿಧರ್ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್